Header Ads

test

ನಿಜವಾದ ಮಾನವೀಯತೆ ಹೇಗಿರಬೇಕೆಂದು ತೋರಿಸುವ ಈ ಯುವತಿ ಎಲ್ಲರಿಗೂ ಮಾದರಿ!

ಉಪಕಾರ ಯಾರಿಗೇ ಬೇಕಾದರೂ ಮಾಡಬಹುದು ಆದರೆ ನಿಜವಾದ ಉಪಕಾರ ಹೇಗಿರಬೇಕೆಂದರೆ ಯಾರಿಗೆ ಅವರ ಕಷ್ಟಗಳನ್ನು ನಮ್ಮ ಬಳಿ ಹೇಳಲಾಗದೆ ಅಸಹಾಯಕ ಸ್ಥಿತಿಯಲ್ಲಿರುತ್ತಾರೋ ಅವರಿಗೆ ನಾವು ಉಪಕಾರ ಮಾಡಬೇಕು. ಆಗ ಅದು ಹೆಚ್ಚು ಪರಿಣಾಮವನ್ನು ಬೀರುತ್ತದೆ. ಮನುಷ್ಯರ ವಿಚಾರವಾಗಿರಬಹುದು ಅಥವಾ ಪ್ರಾಣಿಗಳ ವಿಚಾರವಾಗಿರಬಹುದು. ಅದರಲ್ಲೂ ಈ ಯುವತಿಯೊಬ್ಬಳು ಮಾಡುವ ಕೆಲಸ ಕಾರ್ಯ ಎಂಥವರನ್ನೂ ಒಂದು ಕ್ಷಣ ಆಲೋಚಿಸುವಂತೆ ಮಾಡಬಹುದು. ಹೌದಲ್ಲ… ಇದು ಬರೀ ಒಂದು ಕೆಲಸವಲ್ಲ ಬಡ ಜೀವವನ್ನು ಬದುಕಿಸುವ ಪ್ರಯತ್ನ.


ಸ್ನೇಹಿತೆಯರ ಜೊತೆಗೂಡಿ ಆಟವಾಡಿ, ಮೊಬೈಲ್ ಹಿಡಿದು ವ್ಯರ್ಥ ಕಾಲ ಹರಣ ಮಾಡುವ ವಯಸ್ಸು, ಕಾಲಘಟ್ಟದಲ್ಲಿ ಇಂತಹ ಅಪರೂಪದ ಹೆಣ್ಣು ಮಗಳೊಬ್ಬಳು ತನ್ನ ಸಮಯವನ್ನು ಈ ರೀತಿಯಾಗಿ ಸದುಪಯೋಗ ಪಡಿಸುತ್ತಿದ್ದಾಳೆ ಎಂದರೆ ನಾವೆಲ್ಲಾ ಆಲೋಚಿಸಲೇ ಬೇಕು. ತನಗಿಂತಕೂ ಹೆಚ್ಚು ಭಾರವಿರುವ ನೀರಿನ ಕ್ಯಾನ್‌ಗಳನ್ನು ತುಂಬಿ ಪ್ರಾಣಿ ಪಕ್ಷಿಗಳಿಗೆ ಬಾಯಾರಿಕೆ ತಣಿಸುವ ಕೆಲಸ ಮಾಡುತ್ತಿರುವ ಈ ಯುವತಿ ನಮಗೆ ಮಾದರಿಯಾಗಲೇ ಬೇಕು.

ಕಳೆದ ಹಲವಾರು ದಿನಗಳಿಂದ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಆದರೆ ಇದು ಯಾರು, ಎಲ್ಲಿಯವ ಯುವತಿ ಎಂಬ ಮಾಹಿತಿ ಲಭ್ಯವಾಗುತ್ತಿಲ್ಲ. ಒಂದು ವೇಳೆ ಈ ಸಂದೇಶ ಅವರಿಗೆ ಸಿಕ್ಕರೆ ಅವರಿಗೊಂದು ಸಲ್ಯೂಟ್ ನಮ್ಮ ಕಡೆಯಿಂದ. ನಿಮ್ಮ ಈ ಮಾನವೀಯತೆಯನ್ನು ಎತ್ತಿ ಹಿಡಿಯುವ ಈ ಕೆಲಸ ಕರ್ಯ ಹೀಗೆ ಸಾಗಲಿ ಎಂದು ನಾವು ಹಾರೈಸುತ್ತೇವೆ.

No comments