Header Ads

test

ತಲೆಗೆ ಮಲ್ಲಿಗೆ ಮುಡಿದ ಕಾರಣ ಆಕೆ ಮದುವೆ ಕ್ಯಾನ್ಸಲ್ ಆಯಿತು..! ಇಷ್ಟಕ್ಕೂ ಏನಾಯಿತು ಎಂದು ಗೊತ್ತಾದರೆಶಾಕ್ ಆಗುತ್ತೀರ.!

ವರದಕ್ಷಿಣೆ ಸಾಲುತ್ತಿಲ್ಲ ಎಂದು ಮದುವೆ ನಿಂತು ಹೋಗಿರುವುದನ್ನು ಕೇಳಿರುತ್ತೇವೆ... ಅಥವಾ ಗಂಡಿನ ಕಡೆಯವರಿಗೆ ಮರ್ಯಾದೆ ಕೊಡಲಿಲ್ಲ ಎಂಬ ಕಾರಣಕ್ಕೆ ಮದುವೆ ನಿಂತು ಹೋಯಿತು ಎಂದು ಕೇಳುತ್ತಿರುತ್ತೇವಾದರೂ ಹೂವು ಬದಲಾಯಿತು ಎಂದು ಮದುವೆ ನಿಂತು ಹೋಗಿದ್ದರ ಬಗ್ಗೆ ಎಲ್ಲಿಯಾದರೂ ಕೇಳಿದ್ದೀರಾ..?


ಕೇಳಿರಲ್ಲ ಅಲ್ಲವೇ.. ಬಟ್ ಮದುಮಗಳು ಮಲ್ಲಿಗೆ ಹೂವಿಗೆ ಬದಲಾಗಿ ಕಾಕಡ ಹೂವು ಮುಡಿದುಕೊಂಡಳು ಎಂದು ಮದುವೆ ಕ್ಯಾನ್ಸಲ್ ಆಗಿದೆ. ನೀವು ಓದಿದ್ದು ಅಕ್ಷರಶಃ ನಿಜ. ಆದರೂ ಮದುಮಗಳು ಬೇಕೆ ಹೊರತು ಹೂವಿನ ಜತೆಗೇನು ಕೆಲಸ..ನನಗೇನು ಅರ್ಥವಾಗುತ್ತಿಲ್ಲ ಅನ್ನುತ್ತಿದ್ದೀರಾ.? ಇಷ್ಟಕ್ಕೂ ಈ ಫನ್ನಿ ಮದುವೆ ಕ್ಯಾನ್ಸಲ್ ಎಲ್ಲಿ ಗೊತ್ತಾ ಆಗಿದ್ದು.. ಫನ್ನಿ ಎಂದು ಯಾಕೆ ಹೇಳುತ್ತಿದ್ದೇವೆ ಎಂದರೆ ಹೂವು ಬದಲಾಗಿದ್ದಕ್ಕೆ ಮದುವೆ ಕ್ಯಾನ್ಸಲ್ ಎಂದಿದ್ದಕ್ಕೆ ಹುಡುಗಿ ಕಡೆಯವರು ಅಳುತ್ತಾ ಕೂರಲಿಲ್ಲ. ಅದೇ ಸಮಯಕ್ಕೆ ಬೇರೆ ಗಂಡನ್ನು ನೋಡಿ ಮದುವೆಯನ್ನೂ ಮಾಡಿದರು.

ಈ ಘಟನೆ ನಡೆದಿರುವುದು ಬೆಂಗಳೂರಿನ ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ. ಅಲ್ಲಿನ ಆನಂದ್‍ಗೂ ವಿಜಯಪುರ ಪಟ್ಟಣದ ಯುವತಿ ಭೀಮಕನಹಳ್ಳಿಯಲ್ಲಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಾಹ ನಿಶ್ಚಯಿಸಿದ್ದರು. ವಿವಾಹ ಕೆಲಸಗಳು ಆರಂಭವಾದ ಸ್ವಲ್ಪ ಹೊತ್ತಿಗೆ ವಧು ಮದುವೆ ಮಂಟಪಕ್ಕೆ ಅಡಿಯಿಡುತ್ತಿದ್ದಾಗ ವಧುವಿನ ಜಡೆಯ ಅಲಂಕಾರ ವಿಚಾರವಾಗಿ ವಧುವರರ ಕುಟುಂಬಿಕರ ನಡುವೆ ವಾಗ್ವಾದ ನಡೆಯಿತು.

ಮಲ್ಲಿಗೆ ಹೂವು ಅಲ್ಲದೆ ಕಾಕಡ ಹೂವುಗಳಿಂದ ವಧುವಿನ ಜಡೆ ಅಲಂಕರಿಸಿದ್ದಾರೆಂದು ವರನ ಕುಟುಂಬಿಕರು ವಾಗ್ವಾದ ಮಾಡಿದರು... ಆ ಸಮಯಕ್ಕೆ ಮಲ್ಲಿಗೆ ಹೂವು ಸಿಗದ ಕಾರಣ ಕಾಕಡಗಳಿಂದ ಅಲಂಕರಿಸಬೇಕಾಯಿತೆಂದು ವಧುವಿನ ಕಡೆಯವರು ಎಷ್ಟು ಹೇಳಿದರೂ ಕೇಳಿಲ್ಲ...ಕಡೆಗೆ...

ಮಲ್ಲಿಗೆ ಹೂವಿನ ಗಲಾಟೆ ಕಡೆಗೆ ತೀರಾ ದೊಡ್ಡದಾಗಿದೆ. ಒಬ್ಬರೂ ಸುತಾರಾಂ ಒಪ್ಪುತ್ತಿಲ್ಲ. ಕಡೆಗೆ ಮಲ್ಲಿಗೆ ಹೂವಿನ ಕಾರಣ ವರನ ಕಡೆಯವರು ಬೇಸತ್ತು ಈ ಮದುವೆಯೇ ಬೇಡ ಎಂದು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಏನು ಮಾಡಬೇಕೋ ಗೊತ್ತಾಗದೆ ವಧುವಿನ ಕಡೆಯವರು ಕಡೆಗೆ ಅದೇ ಮುಹೂರ್ತದಲ್ಲಿ ಅದೇ ದೇವಾಲಯದಲಿ ಇನ್ನೊಬ್ಬ ಯುವಕನ ಜತೆಗೆ ಮದುವೆ ಮಾಡಿದ್ದಾರೆ. ಇದಿಷ್ಟು ಸಂಗತಿ... ಉಗುರಿನಲ್ಲಿ ಹೋಗುವುದಕ್ಕೆ ಗುದ್ದಲಿ ತಗೊಂಡರು ಎನ್ನುತ್ತಾರಲ್ಲಾ ಹಾಗಾಯಿತು ಇವರ ಪರಿಸ್ಥಿತಿ.

No comments