Header Ads

test

ಯಾರೇ ಆಗಲಿ ಕಟ್ಟಲೇ ಬೇಕು...! ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸಿಎಂ.. ಎರಡು ಸಲ ದಂಡ!

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಮುಖ್ಯಮಂತ್ರಿ ಕಾರಿಗೂ ಸಹ ದಂಡ ವಿಧಿಸಲಾಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಎದುರಾದ ಅನುಭವ ಇದು. ಅವರ ಖಾಸಗಿ ಎಸ್‍ಯುವಿ ಕಾರಿಗೆ ಕಳೆದ ತಿಂಗಳಲ್ಲಿ ಎರಡು ಸಲ ದಂಡ ವಿಧಿಸಲಾಗಿದೆ. ಆದರೆ ಇದುವರೆಗೂ ಇದನ್ನು ಕಟ್ಟಿಲ್ಲ. ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‍ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಫೆಬ್ರವರಿ 10ರಂದು ಡ್ರೈವಿಂಗ್‍ನಲ್ಲಿ ಮೊಬೈಲ್ ಬಳಸಿದ್ದು, 22ರಂದು ಬಸವೇಶ್ವರ ಸರ್ಕಲ್ ಸಮೀಪ ಅತಿ ವೇಗವಾಗಿ ಹೋದ ಕಾರಣ ಸಿಎಂ ಕಾರಿಗೆ ಚಲನ್ ಹಾಕಲಾಗಿದೆ.


ಇವುಗಳಲ್ಲಿ ಒಂದು ರೂ.100 ಆದರೆ ಇನ್ನೊಂದು ಚಲನ್ ರೂ.300. ಈ ಎರಡು ದಿನಗಳಲ್ಲಿ ಕುಮಾರಸ್ವಾಮಿ ಬೆಂಗಳೂರಿನಲ್ಲೇ ಇದ್ದರು. ಬಜೆಟ್ ಮಂಡಿಸಿದ ಎರಡು ದಿನಗಳ ಬಳಿಕ ಫೆಬ್ರವರಿ 10ರಂದು ಆಡಿಯೋ ಟೇಪ್‌ಗಳಿಗೆ ಸಂಬಂಧಿಸಿದಂತೆ ಅವರು ಬಿಝಿಯಾಗಿ ಕಳೆದಿದ್ದರು. ಫೆಬ್ರವರಿ 22ರಂದು ಬೆಂಗಳೂರಿನ ಸಬರ್ಬನ್ ರೈಲು ಯೋಜನೆ ಬಗ್ಗೆ ಚರ್ಚಿಸಲು ಸಿಎಂ ಕುಮಾರಸ್ವಾಮಿ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್‌ರನ್ನು ವಿಧಾನಸೌಧದಲ್ಲಿ ಭೇಟಿಯಾದರು.

ಆದರೆ ಆಟೋಮೆಟೆಡ್ ಎನ್‌ಫೋರ್ಸ್ ಮೆಂಟ್ ಕ್ಯಾಮೆರಾಗಳಲ್ಲಿ ಟ್ರಾಫಿಕ್ ಉಲ್ಲಂಘನೆ ದಾಖಲಾಗಿದೆ. ಅದೇ ಪ್ರಕ್ರಿಯೆಯಲ್ಲಿ ನೋಟೀಸ್ ಸಹ ಜಾರಿ ಮಾಡಲಾಗಿದೆ ಎಂದಿವೆ ಪೊಲೀಸ್ ಮೂಲಗಳು. ವಾಹನ ಕಸ್ತೂರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದ್ದು ಅದೇ ಹೆಸರಿಗೆ ನೋಟೀಸ್ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಿನಿಂದ ಎಂದೂ ಅಧಿಕೃತ ವಾಹನ ಬಳಸಿಲ್ಲ. ಎಲ್ಲಾ ಸರಕಾರಿ ಕಾರ್ಯಕ್ರಮಗಳಿಗೂ ತನ್ನ ಸ್ವಂತ ಕಾರಿನಲ್ಲೇ ಹೋಗಿ ಬರಲು ಬಯಸುತ್ತಾರೆ.

No comments