ಅಭಿನಂದನ್ ಮೀಸೆ ಬಗ್ಗೆ ಆಕರ್ಷಣೆ, ಟ್ರೆಂಡಿಂಗ್ನಲ್ಲಿ ಅಭಿನಂದನ್ ’ಗನ್ಸ್ಲಿಂಗರ್’..!
ಭಾರತದ ಮೇಲಿನ ಪಾಕ್ ವೈಮಾನಿಕ ದಾಳಿಯನ್ನು ಹೊಡೆದುರುಳಿಸುವ ಕ್ರಮದಲ್ಲಿ ನಮ್ಮ ದೇಶದ ಮಿಗ್ 21 ವಿಮಾನ ಪತನವಾಗಿದ್ದು ಗೊತ್ತೇ ಇದೆ. ಇದರಿಂದ ಭಾರತೀಯ ಏರ್ ಫೋರ್ಸ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ಯಾರಾಚ್ಯೂಟ್ ಸಹಾಯದಿಂದ ಪಾಕಿಸ್ತಾನಾದ ಭೂಭಾಗದಲ್ಲಿ ಇಳಿಯಬೇಕಾಯಿತು. ಅಭಿನಂದನ್ ಕ್ಷೇಮವಾಗಿ ಹಿಂತಿರುಗಿ ಭಾರತಕ್ಕೆ ಬರಬೇಕು ಎಂದು ಇಡೀ ಭರತ ಖಂಡ ಎದುರು ನೋಡುತ್ತಿತ್ತು. ಪೂಜೆಗಳು, ಯಾಗಗಳನ್ನು ಮಾಡಿದರು. ಕಳೆದ ಮೂರು ದಿನಗಳಿಂದ ಅಭಿನಂದನ ಸ್ಮರಣೆ. ಇನ್ನು ಪ್ರಾಣ ಹೋಗುವ ಪರಿಸ್ಥಿತಿಯಲ್ಲಿ ಕರ್ತವ್ಯ ಮರೆಯಲಿಲ್ಲ ಎಂದು, ಅಭಿನಂದನ್ ಧೈರ್ಯ ಸಾಹಸಗಳ ಬಗ್ಗೆ ಪಾಕ್ ಮೀಡಿಯಾ ಸಹ ಬರೆಯಿತು. ಶತ್ರು ದೇಶಕ್ಕೆ ಸಿಕ್ಕಿದ ಅಭಿನಂದನ್ರನ್ನು ಮತ್ತೆ ಕರೆತರಲು ಭಾರತ ಮಾಡಿದ ಪ್ರಯತ್ನಗಳು ಫಲಿಸಿದವು. ಇದರಿಂದ ಜನೀವಾ ಒಪ್ಪಂದ ಪ್ರಕಾರ ಪಾಕ್ ನಮ್ಮ ವಿಂಗ್ ಕಮಾಂಡರ್ರನ್ನು ಶುಕ್ರವಾರ ರಾತ್ರಿ 9:21ಕ್ಕೆ ನಿಮಿಷಕ್ಕೆ ವಾಘಾ ಗಡಿ ಬಳಿ ಹಸ್ತಾಂತರಿಸಿತು.
ಮರೆಯಲಾಗದ ಮೀಸೆ..
ಒಂದು ಕಡೆ ಭಾರತ ವಿಂಗ್ ಹೀರೋ ಅಭಿನಂದನ್ ಮರಳಿ ಬಂದ ಬಗ್ಗೆ ಸಡಗರ, ಸಂಭ್ರಮ ವ್ಯಕ್ತವಾಗುತ್ತಿದ್ದರೆ, ಇನ್ನೊಂದು ಕಡೆ ಸುಂದರವಾಗಿ, ಪೊಗದಸ್ತಾಗಿ ತಿದ್ದಿ ತೀಡಿದ ಮೀಸೆ ಬಗ್ಗೆ ಆಕರ್ಷಣೆ ಆರಂಭವಾಯಿತು. ತಮಿಳು ಸಂಸ್ಕೃತಿಯಲ್ಲಿ ಅವರ ಸ್ಟೈಲನ್ನು ಎಲ್ಲರೂ ಅನುಸರಿಸಲು ಆರಂಭಿಸಿದರು. ಅವರಂತೆ ಗನ್ಸ್ಲಿಂಗರ್ ಮೀಸೆ ತಿರುಗಿಸಲು ಸಿದ್ಧರಾದರು. ಈಗ ಈ ಗನ್ಸ್ಲಿಂಗರ್ ಮೀಸೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿದೆ. ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿನಂದನ್ ಧೈರ್ಯ ಸಾಹಸಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ನಿಮ್ಮಿಂದಲೇ ನಾವೆಲ್ಲ ನಿಶ್ಚಿಂತೆಯಾಗಿ, ಹೆಮ್ಮೆಯಿಂದ ಇದ್ದೇವೆ. ನಿಮಗೆ ಶಿರ ಸಾಷ್ಟಾಂಗ ಪ್ರಣಾಮಗಳನ್ನು ಮಾಡುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.
ಇಷ್ಟಕ್ಕೂ ಗನ್ಸ್ಲಿಂಗರ್ ಎಂದರೆ..!
ಪುರಾತನ ಕಾಲದಲ್ಲಿ ಎದುರಾಳಿ ದಾಳಿಗೆ ಸಿಗದಂತೆ... ಅವರ ಸೈನ್ಯದ ಮೇಲೆ ಗುಂಡಿನ ಮಳೆ ಗರೆಯುತ್ತಾ ಗನ್ನಿಂದ ದಾಳಿ ಮಾಡುವವರನ್ನು ಗನ್ಸ್ಲಿಂಗರ್ ಎನ್ನುತ್ತಿದ್ದರು. ಧೀರತ್ವ, ಠೀವಿ ಬೆರೆತ ಗನ್ಸ್ಲಿಂಗರ್ ಶತ್ರುಗಳ ಕಣ್ಣಿಗೆ ಬಿದ್ದರೂ ಚಾಕಚಕ್ಯತೆಯಿಂದ ತಪ್ಪಿಸಿಕೊಳ್ಳುವುದು ಅವರ ಗುಣ. ಎರಡನೇ ಮಹಾಯುದ್ಧದಲ್ಲಿ ಅಮೆರಿಕ ಪರ ಹೋರಾಡಿದ ಜನರಲ್ ಅಲೆಗ್ಜಾಂಡರ್ ಷಾಲರ್ ಅಭಿನಂದನ್ ರೀತಿ ಕುದುರೆ ಲಾಳದಂತಹ ಮೀಸೆ ಹೊತ್ತಿರುವುದು ಗಮನಾರ್ಹ. ಅಸಾಧಾರಣ ಹೋರಾಟ ಪ್ರತಿಭೆಯನ್ನು ತೋರಿದ ಈ ಅಮೆರಿಕ ಜನರಲ್ಗೆ ಮಿಲಟರಿಯಲ್ಲಿ ಅತ್ಯುನ್ನತ ಮೆಡಲ್ ಆಫ್ ಹಾನರ್ ಸಿಕ್ಕಿದ್ದು ವಿಶೇಷ.

Post a Comment