Header Ads

test

ಬೇಸಿಗೆ ಕಾಲದಲ್ಲಿ ಅದ್ಭುತವಾದ ಔಷಧ... ಹಸಿ ಕಡಲೆ ಶರಬತ್ ಬಗ್ಗೆ ಗೊತ್ತಾದರೆ ಕುಡಿಯದೆ ಬಿಡಲ್ಲ..!

ಈಗಷ್ಟೇ ಬೇಸಿಗೆ ಝಳ ಶುರುವಾಗಿದೆ. ಫೆಬ್ರವರಿಯಲ್ಲೇ ಏನು ಸೆಕೆನಪ್ಪಾ ಅನ್ನುವಂತಾಗಿದೆ. ಈಗ ಮಾರ್ಚ್ ಬಂದಿದೆ. ಸೂರ್ಯನ ಪ್ರತಾಪ ಇನ್ನಷ್ಟು ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಹೊರಗೆ ಓಡಾಡುವರು, ಕೆಲಸದ ನಿಮಿತ್ತ ಹೊರಗೆ ಓಡಾಡುವರು ತಿಳಿದಿರಬೇಕಾದ ಮುಖ್ಯ ಸಂಗತಿ ಏನೆಂದರೆ ಬಿಸಿಲಿನ ಝಳಕ್ಕೆ ಏನು ಮಾಡಬೇಕು, ಇಷ್ಟಕ್ಕೂ ಬಿಸಿಲಿನ ಝಳ ತಾಕದಂತೆ ಇರಲು ಮುಂಜಾಗ್ರತೆಗಳನ್ನು ಏನು ತೆಗೆದುಕೊಳ್ಳಬೇಕು. ಈ ವಿಷಯಗಳನ್ನು ತಿಳಿದುಕೊಂಡವರು ಬೇಸಿಗೆ ಕಾಲದಲ್ಲೂ ಸಹ ಅಪಾಯಕರ ಪರಿಸ್ಥಿತಿಯಿಂದ ಪಾರಾಗಬಹುದು.


ಬಿಸಿಲಿನ ಝಳವನ್ನು ತಡೆದುಕೊಳ್ಳಲು, ಬಿಸಿಲಿನ ಝಳ ತಾಕಿದವರಿಗೆ ತಕ್ಷಣ ಉಪಶಮನಕ್ಕಾಗಿ ಬಿಹಾರ್ ಮತ್ತು ಜಾರ್ಖಂಡ್‌‍ಗಳಂತಹ ರಾಜ್ಯಗಳಲ್ಲಿ ಹೆಚ್ಚಾಗಿ ಹಸಿ ಕಡಲಿನ ಶರಬತ್ ನೀಡುತ್ತಿರುತ್ತಾರೆ. ಹಸಿ ಕಡಲೆ ಶರಬತ್ ಎಂಬುದು ದೇಹಕ್ಕೆ ತುಂಬಾ ಉಪಯುಕ್ತ. ಹಸಿ ಕಡಲೆ ಶರಬತ್ ಎಂಬುದು ಅತ್ಯಂತ ಪ್ರಯೋಜನಕರ ಎಂದು ವೈದ್ಯರು ಸಹ ಹೇಳುತ್ತಿರುತ್ತಾರೆ.

ಹಸಿ ಕಡಲೆ ಶರಬತ್ ತಯಾರಿಸುವುದು ಹೇಗೆ?
ಕಡಲೆಯನ್ನು ತೆಗೆದುಕೊಂಡು, ಅವುಗಳ ಹೊಟ್ಟು ತೆಗೆದು ಬ್ರೌನ್ ಕಲರ್‌ ಬರುವಂತೆ ಬೇಯಿಸಿಕೊಳ್ಳಬೇಕು. ಆ ರೀತಿ ಬೇಯಿಸಿಕೊಳ್ಳುವುದರಿಂದ ಕಡಲೆಯ ಹಸಿ ವಾಸನೆ ಹೋಗುತ್ತದೆ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ಲೀಟರ್‌ ನೀರನ್ನು ತೆಗೆದುಕೊಂಡು 5 ಅಥವಾ 6 ಟೇಬಲ್ ಸ್ಫೂನ್ಸ್ ಕಡಲೆ ಹಿಟ್ಟನ್ನು ಬೆರೆಸಬೇಕು. ಜೇನು, ಸಕ್ಕರೆ, ಬೆಲ್ಲದಂತಹವನ್ನು ರುಚಿಗಾಗಿ ಬಳಸಬಹುದು, ಫ್ರಿಜ್‌ನಲ್ಲಿ ಐದರಿಂದ ಆರು ನಿಮಿಗಳ ಕಾಲ ಇಟ್ಟು, ಆ ಬಳಿಕ ಕುಡಿದರೆ ರುಚಿಯ ಜತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ.

ಕಡಲೆ ಶರಬತ್ ಉಪಯೋಗಗಳು:

  • ಇದು ದೇಹದಲ್ಲಿ ಕೂಡಲೆ ಬೆರೆತು ದೇಹವನ್ನು ತಂಪಾಗಿಸುತ್ತದೆ.

  • ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ, ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

  • ಇದು ಫೈಬರ್ ಅಂಶ ಆದ ಕಾರಣ ಕರುಳಿನಲ್ಲಿನ ಮಲಿನಗಳನ್ನು ಹೊರಹಾಕುತ್ತದೆ.

  • ಆಯಿಲ್ ಫುಡ್ ಹೆಚ್ಚಾಗಿ ತಿಂದ ಬಳಿಕ ಈ ಶರಬತ್ ಕುಡಿದರೆ ಆಯಿಲನ್ನು ಕಡಿಮೆ ಮಾಡುತ್ತದೆ.

  • ಚರ್ಮ ಸಹ ತುಂಬಾ ಹೊಳಪು ಬರುವಂತೆ ಮಾಡುತ್ತದೆ.

  • ಡಯಾಬಿಟೀಸ್, ಬಿಪಿ ಇರುವವರು ಈ ಶರಬತ್ ಕುಡಿದರೆ ಸಕ್ಕರೆ ಕಡಿಮೆ ಹಾಕಿಕೊಂಡು ಕುಡಿಯುವುದರಿಂದ ಒಳ್ಳೆಯ ಆರೋಗ್ಯ ಪಡೆಯಬಹುದು.

No comments