Header Ads

test

ಅಬ್ದುಲ್ ಕಲಾಂ ಅವರ ಉದ್ದವಾದ ಹೇರ್ ಸ್ಟೈಲ್ ಹಿಂದಿನ ಅಸಲಿ ಕಥೆ ಏನು ಅಂತ ನಿಮಗೆ ಗೊತ್ತಾ? ಅದೇನು ಅಂತನೋಡಿ...

ಸಿನಿಮಾಗಳಲ್ಲಿ ಒಬ್ಬೊಬ್ಬ ಹೀರೋಗೆ ಒಂದೊಂದು ಹೇರ್ ಸ್ಟೈಲ್ ಇರುತ್ತದೆ. ಅವರ ಹೇರ್ ಸ್ಟೈಲನ್ನು ಯುವಕರು ಫಾಲೋ ಮಾಡುತ್ತಿರುತ್ತಾರೆ. ಹೀರೋಗಳಷ್ಟೇ ಅಲ್ಲದೆ ಕ್ರಿಕೆಟ್ ಆಟಗಾರರು ಸಹ ನಾನಾ ರೀತಿಯ ಹೇರ್ ಸ್ಟೈಲ್ ಮಾಡುತ್ತಿರುತ್ತಾರೆ. ಅವರಿಗೆ ತಕ್ಕಂತೆ ದೇಶವೆಲ್ಲಾ ಚರ್ಚಿಸಿದ ಹೇರ್ ಸ್ಟೈಲ್ ಮಾಜಿ ರಾಷ್ಟ್ರಪತಿ ಭಾರತ ರತ್ನ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಹೇರ್ ಸ್ಟೈಲ್. ನಮ್ಮ ದೇಶದಲ್ಲೇ ಅವರ ಹೇರ್ ಸ್ಟೈಲ್ ಒಂದು ಟ್ರೇಡ್ ಮಾರ್ಕ್. ಇಷ್ಟಕ್ಕೂ ಅವರ ಉದ್ದವಾದ ಹೇರ್ ಸ್ಟೈಲ್ ಹಿಂದಿನ ಕಥೆ ನಿಮಗೆ ಗೊತ್ತಾ? ಅವರ ಹೇರ್ ಸ್ಟೈಲ್ ಬಗ್ಗೆ ನಾನಾ ರೀತಿಯ ಕಥೆಗಳು ಇವೆ. ಅವೇನು ಎಂಬುದನ್ನು ಈಗ ನೋಡೋಣ.


ಅಬ್ದುಲ್ ಕಲಾಂ ಅವರ ಹೇರ್ ಸ್ಟೈಲ್‌ಗೆ ಕಾರಣ

ತಮಿಳುನಾಡಿನ ರಾಮನಾಥಪುರಂನಲ್ಲಿ ಅಬ್ದುಲ್ ಕಲಾಂ ಅವರ ಪೂರ್ವಿಕರಿಗೆ ಉದ್ದವಾದ ಕೂದಲು ಬೆಳೆಸುವುದು ಆಚಾರವಾಗಿತ್ತಂತೆ. ಅಬ್ದುಲ್ ಕಲಾಂ ಸಹ ಅವರ ಪೂರ್ವಿಕರ ಆಚಾರಗಳನ್ನು ಚಿಕ್ಕಂದಿನಿಂದ ಪಾಲಿಸುತ್ತಿದ್ದರು. ಆ ಆಚಾರವನ್ನು ಎಂದಿಗೂ ಬಿಡಲಿಲ್ಲ ಅವರು. ಅವರು ನಿಧನರಾಗುವವರೆಗೂ ಅದೇ ಹೇರ್ ಸ್ಟೈಲ್ ಫಾಲೋ ಆದರು. ಹೊಸದಿಲ್ಲಿಯಲ್ಲಿ ಅವರ ಪೂರ್ವಿಕರಿಗೆ ಸಂಬಂಧಿಸಿದ ಸೆಲೂನ್ ಇತ್ತು. ಅವರು ಯಾವಾಗಲೂ ಅಲ್ಲೇ ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದರು. ಮಾಡಿಸಿಕೊಂಡ ಪ್ರತಿ ಸಲ ಕನಿಷ್ಠ 500 ರೂಪಾಯಿ ನೀಡುತ್ತಿದ್ದರು.

ಅಜ್ಮದ್ ಹಬೀಬ್ ಅವರ ತಂದೆ ಹಬೀಬ್ ಅಹ್ಮದ್ ಇಬ್ಬರೂ ಸಲೂನ್ ನಡೆಸುತ್ತಿದ್ದರು. ಅವರೇ ಕೆಲವು ವರ್ಷಗಳ ಕಾಲ ಕಲಾಂರಿಗೆ ಕಟಿಂಗ್ ಮಾಡುತ್ತಿದ್ದರು. ಅಬ್ದುಲ್ ಕಲಾಂ ಅವರಿಗೆ ಚಿಕ್ಕದಾಗಿ ಕಟಿಂಗ್ ಮಾಡಿದರೆ ಅಬ್ದುಲ್ ಕಲಾಂಗೆ ಇಷ್ಟವಾಗುತ್ತಿರಲಿಲ್ಲವಂತೆ. ಅಬ್ದುಲ್ ಕಲಾಂ ಅವರು ಹೇರ್ ಸ್ಟೈಲ್‌ಗೆ ಮಾತ್ರ ಖ್ಯಾತರಾಗಿರಲಿಲ್ಲ. ಅವರು ದೇಶಕ್ಕೆ ಮಾಡಿದ ಸೇವೆ, ಅವರ ನಿಷ್ಕಲ್ಮಷ ನಗೆ ಅವರ ಮೇಧಸ್ಸಿಗೆ, ಅವರ ಸ್ಫೂರ್ತಿದಾಯಕ ಮಾತುಗಳಿಂದ ಅಷ್ಟೇ ಅಲ್ಲ ಜಗತ್ತಿನಾದ್ಯಂತೆ ಅಭಿಮಾನಿಗಳು ಇದ್ದಾರೆ.

ಅಬ್ದುಲ್ ಕಲಾಂ ಅವರಿಗೆ ಚಿಕ್ಕಂದಿನಿಂದ ಒಂದು ಕಿವಿ ಚಿಕ್ಕದಾಗಿ ಅರ್ಧಭಾಗದಷ್ಟು ಮಾತ್ರ ಇತ್ತಂತೆ. ಹಾಗಾಗಿ ಕಲಾಂ ಅದನ್ನು ಕವರ್ ಮಾಡಿಕೊಳ್ಳಲು ತನ್ನ ಕೂದಲನ್ನು ಉದ್ದವಾಗಿ ಬೆಳೆಸಿದರಂತೆ. ಅದೇ ಹೇರ್ ಸ್ಟೈಲ್‌ನ್ನು ನಿಧನರಾಗುವವರೆಗೂ ಫಾಲೋ ಆದರು.

No comments