Header Ads

test

ಚಲಿಸುತ್ತಿರುವ ಬಸ್ಸಿನ ಕೊನೆಯ ಸೀಟ್‌ನಲ್ಲಿನ ಜೋಡಿ ಆ ಕೆಲಸ ಮಾಡಿ ಮುಗಿಸಿತು... ಸಹ ಪ್ರಯಾಣಿಕರು, ಡ್ರೈವರ್ಅವರನ್ನು ಏನು ಮಾಡಿದರು ಗೊತ್ತಾ?

ಅಭಿವೃದ್ಧಿ ಹೆಸರಲ್ಲಿ ಕೆಲವು ದೇಶಗಳಲ್ಲಿ ಮನಬಂದಂತೆ ವರ್ತಿಸುವುದು ಮಿತಿ ಮೀರುತ್ತಿದೆ. ನಮ್ಮ ದೇಶದಲ್ಲಿ ಸ್ವಲ್ಪ ಇದು ಕಡಿಮೆ ಇದ್ದರೂ ಸಹ ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಇದು ಮಿತಿ ಮೀರಿದೆ. ಮುಖ್ಯವಾಗಿ ಶೃಂಗಾರದ ವಿಚಾರದಲ್ಲಿ ಅಮೆರಿಕಾ, ಇಂಗ್ಲೆಂಡ್ ಇನ್ನೂ ಕೆಲವು ದೇಶಗಳಲ್ಲಿ ಹದ್ದು ಮೀರಿ ವರ್ತಿಸುವುದು ಜಾಸ್ತಿ. ಅತ್ಯಂತ ನೀಚವಾಗಿ ರಸ್ತೆಗಳ ಮೇಲೆ, ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳು ಸಹ ಶೃಂಗಾರದಲ್ಲಿ ಪಾಲ್ಗೊಳ್ಳುವುದು ಇತ್ತೀಚೆಗೆ ಮಾಧ್ಯಮಗಳ ಮೂಲಕ ಗೊತ್ತಾಗುತ್ತಿದೆ. ಇತ್ತೀಚೆಗೆ ಇಂಗ್ಲೆಂಡ್‌ನಲ್ಲೂ ಒಂದು ಘಟನೆ ನಡೆಯಿತು. ಇದು ಅಲ್ಲಿನ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.


ಸಂಪೂರ್ಣ ವಿವರಗಳನ್ನು ನೋಡುವುದಾದರೆ, ಇಂಗ್ಲೆಂಡ್‌ನಲ್ಲಿನ ಮಾಂಚೆಸ್ಟರ್‌ನಿಂದ ಎಕ್ಸೆಟರ್‌ಗೆ ಹೋಗುತ್ತಿರುವ ಬಸ್‌ನಲ್ಲಿ ಪ್ರಯಾಣಿಕರು ಸ್ವಲ್ಪ ಕಡಿಮೆ ಸಂಖ್ಯೆಯಲ್ಲಿದ್ದರು. ಹಿಂದಿನ ಸೀಟಿನಲ್ಲಿ ಹೆಚ್ಚು ಜನ ಇರಲಿಲ್ಲ. ರಾತ್ರಿ ಸಮಯದಲ್ಲಿ ಆ ಬಸ್ಸು ಹೊರಡಿತು. ರಾತ್ರಿ ಹತ್ತು ಗಂಟೆ ಸಮಯದಲ್ಲಿ ಬಸ್ ಹಿಂದಿನ ಸೀಟಿನಲ್ಲಿ ಕುಳಿತ 32 ವರ್ಷದ ಮಹಿಳೆ ಮತ್ತು 30 ವರ್ಷದ ವ್ಯಕ್ತಿ ಬಟ್ಟೆ ಬಿಚ್ಚಿ ತಮ್ಮ ಕೆಲಸ ಆರಂಭಿಸಿದರು. ಅದನ್ನು ಕೆಲವು ಪ್ರಯಾಣಿಕರು ನೋಡಿದರು. ಪ್ರಯಾಣಿಕರು ನೋಡುತ್ತಿದ್ದಾರೆ ಎಂಬ ಪರಿವೇ ಇಲ್ಲದಂತೆ ಅವರಿಬ್ಬರು ಶೃಂಗಾರದಲ್ಲಿ ಮುಳುಗಿದರು. ಅವರ ಬಗ್ಗೆ ತೀವ್ರ ಅಸಹನೆ ವ್ಯಕ್ತಪಡಿಸಿದ ಸಹ ಪ್ರಯಾಣಿಕರು ಡ್ರೈವರ್‌ಗೆ ದೂರಿದರು.

ಡ್ರೈವರ್ ಅವರ ವಿರುದ್ಧ ಮಾರ್ಗ ಮಧ್ಯೆಯೇ ಪೊಲೀಸರಿಗೆ ದೂರು ನೀಡಿದ. ಇಂಗ್ಲೆಂಡ್‍ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೃಂಗಾರ ಕಾರ್ಯಕಲಾಪಗಳಲ್ಲಿ ತೊಡಗುವುದು ಕಾನೂನು ರೀತಿ ಅಪರಾಧ. ಹಾಗಾಗಿ ಅವರಿಬ್ಬರನ್ನೂ ಬಸ್ ಎಕ್ಸ್‌‍ಟರ್‌ಗೆ ಹೋದ ಕೂಡಲೆ ಬಂಧಿಸಿದರು. ಅವರಿಂದ ಸಹ ಪ್ರಯಾಣಿಕರೆಲ್ಲಾ ಸುಮಾರು ನಾಲ್ಕು ಗಂಟೆಗಳ ಕಾಲ ಅತ್ಯಂತ ಅಸಹನೆಗೆ ಗುರಿಯಾಗಬೇಕಾಯಿತು ಎಂದು ಡ್ರೈವರ್ ಪೊಲೀಸರಿಗೆ ನೀಡಿನ ದೂರಿನಲ್ಲಿ ತಿಳಿಸಿದ್ದಾರೆ.

ಅವರಿಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿದರೂ ಯಾವುದೇ ರೀತಿ ಪಶ್ಚಾತ್ತಾಪ ಇಲ್ಲದಂತೆ ಪೊಲೀಸರ ಜತೆಗೆ ಹೊರಟರು. ಅವರಿಬ್ಬರೂ ಕೇವಲ ಶೃಂಗಾರಕ್ಕಾಗಿ ಮಾತ್ರ ಬಸ್ ಹತ್ತಿದಂತಿದೆ ಇದ್ದಾರೆ ಎಂದು ಬಸ್‌ನಲ್ಲಿ ಪ್ರಯಾಣಿಸಿದ ಒಬ್ಬರು ಹೇಳಿದ್ದಾರೆ. ಇಂತಹ ಪ್ರಯಾಣವನ್ನು ಮತ್ತೊಮ್ಮೆ ನನಗೆ ಆಗದಿದ್ದರೆ ಸಾಕು, ಇಂತಹವರಿಂದಲೇ ದೇಶದ ಗೌರವ ಹಾಳಾಗುತ್ತಿದೆ ಎಂದಿದ್ದಾರೆ.

No comments