Header Ads

test

ಆನ್‌ಲೈನ್ ಭಿಕ್ಷುಕ... ಕ್ರೇಜಿ ಐಡಿಯಾದಿಂದ ಲಕ್ಷಾಂತರ ಸಂಪಾದಿಸುತ್ತಿರುವ ಮಾಡ್ರನ್ ಭಿಕ್ಷುಕ!!

ಕಾಲು, ಕೈಗಳಿಲ್ಲದೆ ರಸ್ತೆ ಮೇಲೆ ಭಿಕ್ಷೆ ಬೇಡಿ ತಿನ್ನುವ, ಚಕ್ರಗಳ ಬಂಡಿ ತಳ್ಳುತ್ತಾ ಭಿಕ್ಷೆ ಬೇಡುವವರ ಬಗ್ಗೆ ಜನ ಅಷ್ಟಾಗಿ ಆಸಕ್ತಿ ತೋರಲ್ಲ. ದೇವಸ್ಥಾನದ ಮುಂದೆ ಅದೆಷ್ಟೋ ಮಂದಿ ಭಿಕ್ಷಾಟನೆ ಮಾಡುತ್ತಿರುತ್ತಾರೆ. ಅವರಿಗೆ ಯಾರೋ ಕೆಲವರು ಮಾತ್ರ ದಾನ ಧರ್ಮ ಮಾಡುತ್ತಾರೆ. ಹೆಚ್ಚಿನ ಪ್ರಮಾಣದ ಮಂದಿ ಮಾತ್ರ ಭಿಕ್ಷೆ ಹಾಕಲು ಆಸಕ್ತಿ ತೋರಲ್ಲ. ಯಾಕೆಂದರೆ ಕಾಲು, ಕೈ ಚೆನ್ನಾಗಿದ್ದರೆ ಕಷ್ಟಪಟ್ಟು ಕೆಲಸ ಮಾಡಬಹುದು ಅಲ್ಲವೇ ಎಂದು ಕೇಳುವ ಪ್ರಶ್ನೆ. ಆದರೆ ಅಮೆರಿಕ ಮೂಲದ ಓರ್ವ ವ್ಯಕ್ತಿ ಅದ್ಯಾವುದನ್ನೂ ಮಾಡದೇನೇ ನೂರಾರು ಡಾಲರ್‌ಗಳನ್ನು ಅವನಿಗೆ ನೀಡುತ್ತಿದ್ದಾರೆ. ಆ ಡಾಲರ್‌ಗಳೊಂದಿಗೆ ಆತ ಮಜಾ ಉಡಾಯಿಸುತ್ತಾ ಜೀವನವನ್ನು ಎಂಜಾಯ್ ಮಾಡುತ್ತಿದ್ದಾನೆ.


ನ್ಯೂಯಾರ್ಕ್ ಮೂಲದ ಜೋವಾನ್ ಹಿಲ್ ಬಹಳಷ್ಟು ಕೆಲಸಗಳನ್ನು ಮಾಡಿದ. ಯಾವ ಕೆಲಸವೂ ಆತನಿಗೆ ಕೈಗೂಡಲಿಲ್ಲ. ಕಡೆಗೆ ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡ ಕಾರಣ ಆರ್ಥಿಕವಾಗಿ ಸಂಕಷ್ಟ ಶುರುವಾಯಿತು. ಅಂತಹ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲಿ ತಮ್ಮ ಖಾತೆ ಸಂಖ್ಯೆ ನೀಡಿ ತನಗೆ ಭಿಕ್ಷೆ ಹಾಕಿ ಎಂದು ಕೇಳಿದ. ಆತನ ಪೋಸ್ಟ್ ನೋಡಿ ಕೆಲವರು ಚಕಿತರಾದರು. ಈ ರೀತಿಯೂ ಭಿಕ್ಷಾಟನೆ ಮಾಡುತ್ತಾರಾ ಎಂದುಕೊಂಡರು. ಆತನಿಗೆ ಯಾರೂ ಭಿಕ್ಷೆ ಹಾಕಲ್ಲ ಎಂದುಕೊಂಡರು. ಆದರೆ ಕೆಲವರು ಆತ ಕೇಳಿದ ಗಂಟೆಗಳಲ್ಲೇ ನೂರಾರು ಡಾಲರ್ ಭಿಕ್ಷೆ ಹಾಕಿದರು. ಆನ್‌ಲೈನ್‌ನಲ್ಲಿ ಈತ ಮಾಡುತ್ತಿರುವ ಭಿಕ್ಷಾಟನೆ ಈಗ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈತ ಸರಿಸುಮಾರು ಒಂದೂವರೆ ಲಕ್ಷ ಫಾಲೋವರ್ಸ್ ಇದ್ದಾರೆ. ಅವರಲ್ಲಿ ಎಷ್ಟೋ ಮಂದಿ ಈತನಿಗೆ ತಿಂಗಳಿಗೆ ಇಷ್ಟು ಎಂದು ಭಿಕ್ಷೆ ಹಾಕುತ್ತಿದ್ದಾರೆ. ತನಗೆ ಭಿಕ್ಷೆ ಹಾಕಿದವರ ಋಣ ತೀರಿಸಲು ತಮಾಷೆ ವಿಡಿಯೋಗಳನ್ನು ಪೋಸ್ಟ್ ಮಾಡುವುದು ಅಥವಾ ಯಾವುದಾದರೂ ಕಾಮಿಡಿ ಸ್ಕಿಟ್‌ಗಳನ್ನು ಹಾಕುತ್ತಾ ಎಲ್ಲರನ್ನು ನಗಿಸುತ್ತಿದ್ದಾನೆ. ಆ ರೀತಿ ಇವ ತನಗೆ ಭಿಕ್ಷೆ ಮಾಡಿದವರ ಋಣ ತೀರಿಸಿಕೊಳ್ಳುತ್ತಿದ್ದಾನೆ.

ಸಾಕಷ್ಟು ಕೆಲಸಗಳಿದ್ದರೂ ಈತ ಈ ಕೆಲಸವನ್ನೇ ಆಯ್ಕೆ ಮಾಡಿಕೊಂಡಿರುವುದು ಅಚ್ಚರಿಯಾಗಿದೆ ಎಂದು ಆತನ ಫಾಲೋ ಆಗುತ್ತಿರುವವರು ಹೇಳುತ್ತಿದ್ದಾರೆ. ಇತ್ತೀಚೆಗೆ ಜೋವಾನ್ ಹಿಲ್ ತಾನೊಬ್ಬ ಸಲಿಂಗ ಕಾಮಿ ಎಂಬ ಸಂಗತಿಯನ್ನೂ ಹೇಳಿಕೊಂಡಿದ್ದಾನೆ. ಈ ಸಂಗತಿ ತಿಳಿದ ಬಳಿಕ ಆತನ ಬಗ್ಗೆ ಇನ್ನಷ್ಟು ಅನುಕಂಪ ಜಾಸ್ತಿಯಾಗಿ ಡಾಲರ್‌ಗಳ ಸುರಿಮಳೆಯಾಗುತ್ತಿದೆ. ಸರಿಸುಮಾರು ಆತ ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ. ಆನ್‌ಲೈನ್ ಮೂಲಕ ಆತನ ಖಾತೆ ತುಂಬುತ್ತಿದೆ. ಒಟ್ನಲ್ಲಿ ಭಿಕ್ಷೆ ಎಂಬುದು ಕಡೆಗೆ ಆನ್‌ಲೈನ್‌ನಲ್ಲೂ ಶುರುವಾಯಿತು. ಮುಂದೆ ಈ ರೀತಿಯ ಭಿಕ್ಷುಕರ ಸಂಖ್ಯೆ ಜಾಸ್ತಿ ಆಗುತ್ತದೋ ಇಲ್ಲವೆ ಕಾದು ನೋಡಬೇಕು.

No comments