Header Ads

test

ಇಡೀ ದೇಶವೇ ಕುದಿಯುವಂತಹ ನ್ಯೂಸ್ ಇದು... ಅಭಿನಂದನ್ ಜಾತಿ ಬಗ್ಗೆ ಹುಡುಕಾಟ...ಛೇ?

ಅಭಿನಂದನ್ ವರ್ಧಮಾನ್ ಈ ಹೆಸರು ಈಗ ದೇಶದಾದ್ಯಂತ ಮಾರ್ದನಿಸುತ್ತಿದೆ. ಶತ್ರು ದೇಶದಿಂದ ನುಗ್ಗಿ ಬಂದ ವಿಮಾನವನ್ನು ಹೊಡೆದುರುಳಿಸಿದ ವೀರ ಯೋಧ ವರ್ಧಮಾನ್. ಪಾಕ್ ಸೈನ್ಯಕ್ಕೆ ಸಿಕ್ಕಿದರೂ ಸ್ವಲ್ಪವೂ ಬೆದರಲಿಲ್ಲ, ಹೆದರಲಿಲ್ಲ. ಪಾಕ್ ಆರ್ಮಿ ಕೈಯಿಂದ ಸುರಕ್ಷಿತವಾಗಿ ಹೊರಬಂದರು. ಇದರಿಂದ ಇಡೀ ದೇಶವೇ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರನ್ನು ದೇಶವೆಲ್ಲಾ ಹೀರೋ ರೀತಿ ನೋಡಲಾಗುತ್ತಿದೆ. ಇನ್ನು ಅಭಿನಂದನ್ ಪೂರ್ವಾಪರ ತಿಳಿದುಕೊಳ್ಳಲು ದೇಶದಾದ್ಯಂತ ಆಸಕ್ತಿ ನೆಲೆಸಿದೆ.

ಮುಖ್ಯವಾಗಿ ಅಭಿನಂದನ್ ಅವರದು ಯಾವ ಜಾತಿ ಎಂಬುದನ್ನು ಹುಡುಕಲು ಪ್ರಾರಂಭಿಸಿರುವುದು. "ಅಭಿನಂದನ್ ಕ್ಯಾಸ್ಟ್", "ಅಭಿನಂದನ್ ಕ್ಯಾಸ್ಟ್ ಜೈನ್", "ಅಭಿನಂದನ್ ವರ್ಧಮಾನ್ ಕ್ಯಾಸ್ಟ್ ಇನ್ ಸೌತ್ ಇಂಡಿಯಾ" ಎಂದು ಗೂಗಲ್‌ನಲ್ಲಿ ಸಿಕ್ಕಾಪಟ್ಟೆ ಹುಡುಕಲಾಗಿದೆ.


ಮುಖ್ಯವಾಗಿ ಅಭಿನಂದನ್ ಜಾತಿ ಬಗ್ಗೆ ಹುಡುಕಲಾದ ರಾಜ್ಯಗಳಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಅವರ ಜಾತಿ ಬಗ್ಗೆ ತಿಳಿದುಕೊಳ್ಳಲು ಗುಜರಾತಿಗಳು ತುಂಬಾ ಆಸಕ್ತಿ ತೋರಿದ್ದಾರೆ. ಸದ್ಯಕ್ಕೆ ಈ ಟಾಪಿಕ್ ಗೂಗಲ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

ನಮ್ಮ ದೇಶದಲ್ಲಿ ಜಾತಿ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿರುವುದು ಇದೇ ಮೊದಲ ಸಲ ಅಲ್ಲ. ಪಿವಿ ಸಿಂಧು ಒಲಂಪಿಕ್‌ನಲ್ಲಿ ಸಿಲ್ವರ್ ಮೆಡಲ್ ಸಾಧಿಸಿದ ಸಂದರ್ಭದಲ್ಲೂ ದೇಶದ ಜನ ಆಕೆ ಯಾವ ಜಾತಿ ಎಂದು ತಿಳಿದುಕೊಳ್ಳಲು ಗೂಗಲ್‌ಗೆ ಮೊರೆ ಹೋಗಿದ್ದರು. ಭಾರತ ಆರ್ಮಿ ಪೋಸ್ಟ್‌ಗಳ ಮೇಲೆ ದಾಳಿ ಮಾಡಲು ಯತ್ನಿಸಿದ ಪಾಕ್ ಯುದ್ಧ ವಿಮಾನಗಳನ್ನು... ತನ್ನ ಪ್ರಾಣವನ್ನೂ ಒತ್ತೆ ಇಟ್ಟು ಅಭಿನಂದನ್ ತಡೆದರು. ಅವನ್ನು ಹಿಮ್ಮೆಟ್ಟಿಸಿದರು. ಒಂದು ವಿಮಾನವನ್ನು ಹೊಡೆದುರುಳಿಸಿದರು. ಈ ಹಿನ್ನೆಲೆಯಲ್ಲಿ ಅಭಿನಂದನ್ ಇರುವ ಮಿಗ್ 21 ಯುದ್ಧ ವಿಮಾನ ಧರೆಗುರುಳಿತು. ಅಭಿನಂದನ್ ಪ್ಯಾರಾಚ್ಯೂಟ್ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇಳಿದರು. ಕೂಡಲೆ ಅವರನ್ನು ಸುತ್ತುವರೆದ ಕೆಲವರು ಹಲ್ಲೆ ಮಾಡಿದರು. ಮನಬಂದಂತೆ ಥಳಿಸಿದರು. ಆ ಬಳಿಕ ಪಾಕ್ ಆರ್ಮಿ ಅಭಿನಂದನ್‌ರನ್ನು ವಶಕ್ಕೆ ಪಡೆಯಿತು.

ಆ ಸಮಯದಲ್ಲಿ ಆರ್ಮಿ ಬಿಡುಗಡೆ ಮಾಡಿದ ಒಂದು ವಿಡಿಯೋದಲ್ಲಿ ಅಭಿನಂದನ್‌ರನ್ನು ಹೀರೋ ಮಾಡಿತು. ಪಾಕ್ ಆರ್ಮಿ ಕೇಳಿದ ಪ್ರಶ್ನೆಗಳಿಗೆ ಅಭಿನಂದನ್ ಕೊಟ್ಟ ಉತ್ತರಗಳಿಗೆ ದೇಶದ ಜನ ಫಿದಾ ಆದರು. ಕೇವಲ ತಾನು ದಕ್ಷಿಣ ಭಾರತೀಯ ಎಂದು ಹೇಳಿದ ಅಭಿನಂದನ್ ಇನ್ನು ಪಾಕ್ ಆರ್ಮಿ ಕೇಳಿದ ಯಾವ ಪ್ರಶ್ನೆಗೂ ಉತ್ತರ ನೀಡದೆ ಧೈರ್ಯವಾಗಿ ಪಾಕ್ ಆರ್ಮಿ ಮುಂದೆ ಸಿಂಹದಂತೆ ನಿಂತಿದ್ದರು.

No comments