Header Ads

test

ಪೇಪರ್ ಓದಿ ಕಾರ್ಯಕ್ರಮದ ನಡುವೆಯೇ ಹೊರಟು ಹೋದ ಮೋದಿ ಏನಾಯಿತು ಎಂದು ಟೆನ್ಷನ್ ಟೆನ್ಷನ್!!

ಪುಲ್ವಾಮಾ ದಾಳಿ ಬಳಿಕ ದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು. ಯಾವ ಕ್ಷಣದಲ್ಲಿ ಏನಾಗುತ್ತದೋ, ಏನಾಗಲಿದೆಯೋ ಗೊತ್ತಾಗುತ್ತಿಲ್ಲ. ಭಾರತ-ಪಾಕ್ ನಡುವೆ ಯುದ್ಧ ತಪ್ಪಿದ್ದಲ್ಲ ಎಂದು ಅನ್ನಿಸುತ್ತಿದೆ. ಭಾರತ ವಾಯು ನೆಲೆಗೆ ನುಗ್ಗಿ ಬಂದ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಭಾರತ ವೈಮಾನಿಕ ದಳ ಹೊಡೆದುರುಳಿಸಿತು. ಇದರಿಂದ ಪರಿಸ್ಥಿತಿ ಇನ್ನಷ್ಟು ಜಟಿಲವಾಯಿತು.


ಪ್ರಧಾನಿ ಮೋದಿ ದಿಲ್ಲಿಯಲ್ಲಿನ ವಿಜ್ಞಾನ್ ಭವನ್‌ದಲ್ಲಿ ನ್ಯಾಷನಲ್ ಯೂತ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಜತೆಗೆ ಮಾತನಾಡುತ್ತಿದ್ದರು. ಅಷ್ಟರಲ್ಲಿ ಏನಾಯಿತೋ ಏನೋ ಗೊತ್ತಿಲ್ಲ. ಆದರೆ ಮೋದಿ ಬಳಿಗೆ ಸೆಕ್ಯುರಿಟಿ ಆಫೀಸರ್ ಬಂದು ಒಂದು ಕಾಗದ ಕೊಟ್ಟ. ಅದನ್ನು ಓದಿದ ಮೋದಿ ಕೂಡಲೆ ಎದ್ದು ಕಾರ್ಯಕ್ರಮಕ್ಕೆ ಬಂದ ಅತಿಥಿಗಳ ಬಳಿಗೆ ಹೋದರು. ಅವರಿಗೆ ಹೊರಡುತ್ತಿದ್ದೇನೆ ಎಂದು ಹೇಳಿ ಅಲ್ಲಿಂದ ದಿಢೀರ್ ಎಂದು ಹೊರಟು ಹೋದರು.

ಆದರೆ ಆ ಕಾಗದಲ್ಲಿ ಏನು ಬರೆದಿದೆ ಎಂಬ ಸಂಗತಿಯನ್ನು ಎಲ್ಲೆಡೆ ಟೆನ್ಷನ್ ಸೃಷ್ಟಿಸಿತು. ಆ ಕಾಗದ ಪಿಎಂಓ ಆಫೀಸ್‌ನಿಂದ ಬಂದಿದೆ ಎಂದು ಭಾವಿಸುತ್ತಿದ್ದಾರೆ. ಅಥವಾ ಅಷ್ಟು ದಿಢೀರ್ ಎಂದು ಪ್ರಧಾನಿ ಯಾಕೆ ಹೊರಡುತ್ತಾರೆಂದು ಅಲ್ಲಿನ ಎಲ್ಲರೂ ಭಾವಿಸುತ್ತಿದ್ದಾರೆ.

ಪ್ರಧಾನಿ ಮೋದಿ ಅಲ್ಲಿಂದ ನೇರವಾಗಿ ಭದ್ರತಾ ಅಧಿಕಾರಿಗಳ ಅತ್ಯುನ್ನತ ಮಟ್ಟದ ಸಮಾವೇಶಕ್ಕೆ ಹೋದರು. ಭಾರತ ವಾಯು ನೆಲೆಗೆ ಪಾಕಿಸ್ತಾನ ಯುದ್ಧ ವಿಮಾನಗಳು ಪ್ರವೇಶಿಸಿದ್ದು, ಬಾಂಬು‌ಗಳನ್ನು ಸುರಿಸಿದ್ದು ಇದಕ್ಕೆ ಸಮರ್ಥವಾಗಿ ಭಾರತ ಆ ಯುದ್ಧ ವಿಮಾನವನ್ನು ಬೆನ್ನಟ್ಟಿದ್ದು ನಡೆಯಿತು. ಆದರೆ ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ಪತ್ರ ಸಿಕ್ಕಿದೆ ಹಾಗಾಗಿ ಮೋದಿ ನಡುವೆಯೇ ಹೊರಟು ಹೋದರು ಎನ್ನುತ್ತಿದ್ದಾರೆ.

No comments