Header Ads

test

ಚುಂಬಿಸುವಾಗ ನಮ್ಮ ತಲೆಯನ್ನು ಯಾಕೆ ಬಲಗಡೆಗೆ ಬಾಗಿಸುತ್ತೇವೆ ಗೊತ್ತಾ..!?

ನಮ್ಮಲ್ಲಿ ಬಹಳಷ್ಟು ಮಂದಿ ಚುಂಬಿಸಿಕೊಳ್ಳುವಾಗ ನಮಗೆ ಗೊತ್ತಿಲ್ಲದಂತೆ ನಮ್ಮ ತಲೆ ಬಲಗಡೆಗೆ ಬಾಗಿಸುತ್ತಾರೆ. ಇದು ಕೇಳಲು ತುಂಬಾ ತಮಾಷೆಯಾಗಿದ್ದರು, ಇದು ಹಂಡ್ರಡ್ ಪರ್ಸೆಂಟ್ ನಿಜ. ನಾವು ಯಾಕೆ ಹಾಗೆ ತಲೆಯನ್ನು ಚುಂಬಿಸುವಾಗ ಬಲಗಡೆಗೆ ಬಾಗಿಸುತ್ತೇವೆ ಎಂಬ ಅಚ್ಚರಿಯ ಸಂದೇಹ ಎಂದಾದರೂ ನಿಮಗೆ ಬಂದಿದೆಯೇ? ಎಡಗಡೆಗೆ ಯಾಕೆ ಬಾಗಿಸಲ್ಲ ಎಂಬ ದೌಟ್ ಎಂದಾದದರೂ ಬಂದಿತ್ತೇ?


ಈ ಸಂಗತಿಯ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳು ಒಂದು ಕುತೂಹಲಕರ ಸಂಗತಿಯನ್ನು ತಿಳಿದುಕೊಂಡರು. ಸಾಮಾನ್ಯವಾಗಿ ಬಹಳಷ್ಟು ಮಂದಿ ಮಾಡುವ ಈ ಪ್ರಕ್ರಿಯೆ ಹಿಂದೆ ಅಭಿಜ್ಞಾನ ಶಾಸ್ತ್ರ ಮತ್ತು ನಾಡಿ ಸಂಬಂಧಿಸಿದ ಶಾಸ್ತ್ರಗಳಿರುವ ಕಾರಣ ಬಹಳಷ್ಟು ಮಂದಿ ಈ ರೀತಿ ಮಾಡುತ್ತಾರೆ ಎನ್ನಲಾಗಿದೆ.

ಅಧ್ಯಯನಗಳು ಏನು ಹೇಳುತ್ತವೆ ಎಂದರೆ:

ಅಧ್ಯಯನಗಳ ಪ್ರಕಾರ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರೇ ಹೆಚ್ಚಾಗಿ ಚುಂಬಿಸಲು ವಿಶೇಷ ಆಸಕ್ತಿ ತೋರುತ್ತಾರೆ. ಈ ಪ್ರಕ್ರಿಯಯ ಭಾಗವಾಗಿ ಅವರು ತಲೆಯನ್ನು ಬಲಗಡೆಗೆ ಬಾಗಿಸುತ್ತಾರೆ. ಈ ರೀತಿ ಅವರಿಗೆ ಗೊತ್ತಿಲ್ಲದಂತೆ ಈ ಕ್ರಿಯೆ ನಡೆದು ಹೋಗುತ್ತದೆ. ಇದೇ ರೀತಿ ಮಾಡಬೇಕು ಎಂಬಷ್ಟು ಸಹಜವಾಗಿ ನಡೆಯುತ್ತದೆ.

ಬಹಳಷ್ಟು ಮಂದಿಗೆ ಬಲಗಡೆಗೆ ತಲೆ ಬಾಗಿಸಬೇಕು ಎಂಬುದು ಒಂದು ಧೋರಣೆಯಂತೆ ಬದಲಾಗಿದೆ.

ಗರ್ಭದಲ್ಲಿರುವಾಗ ಭ್ರೂಣ ಸಹ ತಲೆಯನ್ನು ಬಲಗಡೆಗೆ ಬಾಗಿಸುತ್ತದೆ. ನಮ್ಮ ವಯಸ್ಸು ಹೆಚ್ಚಾಗುವ ಹಾಗೆ ಕೆಲಸ ಆರಂಭಿಸಬೇಕು ಎಂದರೂ ಮೊದಲು ಬಹಳಷ್ಟು ಮಂದಿ ಬಲಗೈ ಅಥವಾ ಬಲಗಾಲನ್ನು ಉಪಯೋಗಿಸುತ್ತಾರೆ.

ಅಧ್ಯಯನದ ಭಾಗವಾಗಿ ಬಹಳಷ್ಟು ಜೋಡಿಗಳಿಗೆ ಏಕಾಂತದಲ್ಲಿ ಚುಂಬಿಸಿಕೊಳ್ಳುವಂತೆ ಹೇಳಲಾಯಿತು. ಅಚ್ಚರಿ ಎಂಬಂತೆ ಸರಿಸುಮಾರು ಜೋಡಿಗಳು ತಮ್ಮ ತಲೆಯನ್ನು ಬಲಗಡೆಗೆ ಬಾಗಿಸಿ ಚುಂಬಿಸಿಕೊಳ್ಳುವುದು ಆರಂಭಿಸಿದರು. ಎರಡನೇ ಆಲೋಚನೆ ಇಲ್ಲದಂತೆ ಚುಂಬಿಸಿಕೊಳ್ಳುವುದನ್ನು ಆರಂಭಿಸಿದರು. ಇಬ್ಬರೂ ಬಲಗಡೆಗೆ ತಮ್ಮ ತಲೆಯನ್ನು ಬಾಗಿಸಿ ಚುಂಬಿಸಿಕೊಂಡಿದ್ದಾರೆ.

ಚುಂಬಿಸಿಕೊಳ್ಳುವ ಪ್ರಕ್ರಿಯೆ ಮೇಲ್ಮೋಟಕ್ಕೆ ತುಂಬಾ ಸುಲಭವಾಗಿ, ಸುನಾಯಾಸವಾಗಿ ಕಾಣುತ್ತದೆ. ಆದರೆ ತಲೆಯನ್ನು ಬಲಗಡೆಗೆ ಬಾಗಿಸುವ ಪ್ರಕ್ರಿಯೆ ಕಾರ್ಯರೂಪಕ್ಕೆ ಬರಬೇಕಾದರೆ ಮಿದುಳು ಸಾಕಷ್ಟು ಕಾರ್ಯಕಲಾಪಗಳು ಮಾಡಬೇಕಾಗುತ್ತದೆ ಎಂದಿದ್ದಾರೆ ಸಂಶೋಧಕರು.

ಈ ಪ್ರಕ್ರಿಯೆ ನಡೆಯಲು ವೃಷಣಗಳು (ಟೆಸ್ಟೋಸ್ಟೆರಾನ್) ಮತ್ತು ಡೋಪಮೈನ್‌ನಂತಹ ನಾಡಿ ಪ್ರಸರಣ ಹಾರ್ಮೋನ್‌ಗಳು ಬಹಳಷ್ಟು ಉಪಯೋಗಕ್ಕೆ ಬರುತ್ತವೆ ಎಂದಿದ್ದಾರೆ ಸಂಶೋಧಕರು. ಯಾರು ಎಡಗೈಯನ್ನು ಹೆಚ್ಚಾಗಿ ಬಳಸುತ್ತಾರೋ ಅಂತಹವರು ಎಡಗಡೆಗೆ ತಮ್ಮ ತಲೆಯನ್ನು ಬಾಗಿಸಲು ಇಷ್ಟಪಡುತ್ತಾರೆ. ಅದಕ್ಕಿಂತ ಇದರಲ್ಲಿ ಯಾವುದೇ ರಹಸ್ಯ ಇಲ್ಲ ಎಂದಿದ್ದಾರೆ ಸಂಶೋಧಕರು.

No comments