Header Ads

test

ಆತ ’ಅಮ್ಮ’ ಆದ... ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ..

ಇಷ್ಟದಿಂದ ಮಾಡಿದಾಗ ಯಾವುದೂ ಕಷ್ಟ ಅನ್ನಿಸಲ್ಲ.. ಗಂಡಸಾಗಿ ಹುಟ್ಟಿದರೂ ಹೆಂಗಸಾಗಿ ಬದಲಾಗಬೇಕು ಅನ್ನಿಸಿತು... ತಾಯ್ತನ ಆಕೆಗೆ ಮಾತ್ರ ಸಾಧ್ಯ ಎಂದು ತಿಳಿದು ಗರ್ಭ ಕೂಡ ಧರಿಸಿದ.. ಸಾರಿ... ಧರಿಸಿದಳು ಈ ಟ್ರಾನ್ಸ್ ಜಂಡರ್. ಅಮೆರಿಕಾದ ಟೆಕ್ಸಾಸ್ ನಗರದ ವಿಲ್ಲೇ ಸಿಮ್ಸನ್ ಏಳು ವರ್ಷಗಳ ಹಿಂದೆ ಲಿಂಗ ಪರಿವರ್ತನೆ ಮಾಡಿಕೊಂಡು ಹುಡುಗಿಯಾಗಿ ಬದಲಾದ. ಪ್ರಿಯಕರ ಸ್ಟೀಫೆನ್ ಗೇ ಜತೆಗೆ ಜತೆಯಾಗಿ ವಾಸವಾಗಿದ್ದ. ಅವರ ಏಳು ವರ್ಷಗಳ ಸಹ ಜೀವನದ ನೆನಪಿಗೆ ಒಂದು ಮಗುವಿಗೆ ಜನ್ಮ ನೀಡಬೇಕು ಎಂದು ಭಾವಿಸಿದ ವಿಲ್ಲೇ. ಆತನ ಬಯಕೆ ನೆರವೇರುವ ಅವಕಾಶ ಕಾಣಿಸಲಿಲ್ಲ. ಲಿಂಗ ಪರಿವರ್ತನೆ ಮಾಡಿಸಿಕೊಂಡ ಮಾತ್ರಕ್ಕೆ ಪುರುಷರಲ್ಲಿ ಗರ್ಭ ಚೀಲ ಇರಲ್ಲ, ಹಾಗಾಗಿ ಗರ್ಭ ಧರಿಸುವುದು ಅಸಾಧ್ಯ ಎಂದು ವೈದ್ಯರು ಹೇಳಿದರು.


ಆದರೆ ವಿಚಿತ್ರವಾಗಿ ವಿಲ್ಲೇ ಜೀವನದಲ್ಲಿ ವೈದ್ಯರಿಗೆ ವಿಸ್ಮಯಗೊಳಿಸುವ ಘಟನೆಯೊಂದು ನಡೆಯಿತು. ಫೆಬ್ರವರಿ 2018ರಲ್ಲಿ ಆತನಿಗೆ ಮುಟ್ಟಾಗುವುದು ನಿಂತಿತು. ಅನುಮಾನ ಬಂದು ವೈದ್ಯರ ಬಳಿಗೆ ಹೋಯಿತು ಆ ಜೋಡಿ. ವಿಲ್ಲೇಯನ್ನು ಪರೀಕ್ಷಿಸಿದ ವೈದ್ಯರು ಕೆಲವು ಪರೀಕ್ಷೆಗಳನ್ನು ಮಾಡಿದರು. ಪರೀಕ್ಷೆಯಲ್ಲಿ ವಿಲ್ಲೇ ಬಸುರಾಗಿದ್ದಾರೆಂದು ನಿರ್ಧರಿಸಲಾಯಿತು. ಗರ್ಭಿಣಿಯಾಗಲು ಯಾವುದೇ ಚಿಕಿತ್ಸೆ ಪಡೆಯದೆ "ಅಮ್ಮ" ಆಗುವ ಅವಕಾಶ ಸಿಕ್ಕಿದ್ದಕ್ಕೆ ಆನಂದದಿಂದ ಕುಣಿದಾಡಿದ. ಸ್ವಲ್ಪ ಕಷ್ಟ ಅನ್ನಿಸಿದರೂ ಕೊನೆಗೆ ಆತನಿಗೆ ಆರೋಗ್ಯಕರವಾದ ಮಗು ಜನಿಸಿತು. ಆ ಮಗುವನ್ನು ನೋಡಿ ವಿಲ್ಲೇ, ಸ್ಟೀಫನ್ ಆನಂದದಿಂದ ಸಂಭ್ರಮಿಸುತ್ತಿದ್ದಾರೆ. ಮಗುವನ್ನು ವಿಶೇಷ ಕಾಳಜಿಯಿಂದ ಬೆಳೆಸುತ್ತಿದ್ದಾರೆ.

ತಮಾಷೆ ಸಂಗತಿ ಏನೆಂದರೆ ವಿಲ್ಲೇ ತುಂಬು ಗರ್ಭಿಣಿಯಾಗಿ ರಸ್ತೆ ಮೇಲೆ ನಡೆಯುತ್ತಿದ್ದರೆ ಜನ ನೋಡಿ ನಗುತ್ತಿದ್ದರು. ಆದರೆ ಅದ್ಯಾವುದನ್ನೂ ಅಷ್ಟಾಗಿ ತಲೆಗೆ ಹಾಕಿಕೊಳ್ಳದೆ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಿದ್ದ. ಇಷ್ಟಪಟ್ಟು ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ಅವರ ಮಾತುಗಳೇನು ಅವನಿಗೆ ಅಷ್ಟಾಗಿ ಮನ ನೋಯಿಸುತ್ತಿರಲಿಲ್ಲ. ಜನಿಸಿದ ಮಗುವಿಗೆ ರೋವನ್ ಎಂದು ಹೆಸರಿಟ್ಟಿದ್ದಾರೆ. ಅವನೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ವಿಲ್ಲೇ ಸ್ಪೀಫನ್.

No comments