Header Ads

test

ತಾಯ್ನೆಲಕ್ಕೆ ಅಡಿ ಇಟ್ಟ ಬಳಿಕ ಅಭಿನಂದನ್ ಅವರು ಹೇಳಿದ ಮೊದಲ ಮಾತು ಇದೇ..!

ಪಾಕ್ ಜೆಟ್‌ಗಳ ಬೆನ್ನಟ್ಟಿ ಆ ಜೆಟ್ಟನ್ನು ಹೊಡೆದುರಿಳಿಸಿ, ಭಾರತದ ಜೆಟ್ ಸಹ ಅಪಘಾತಕ್ಕೀಡಾಗಿ ಪಾಕಿಸ್ತಾನ್ ಸೈನಿಕರಿಗೆ ಸೆರೆಯಾದ ಭಾರತ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಶುಕ್ರವಾರ ತಾಯ್ನಾಡಿಗೆ ಅಡಿಯಿಟ್ಟರು. ಅವರ ಆಗನದಿಂದ ಎಲ್ಲರೂ ಖುಷಿಪಟ್ಟರು. ಭಾರತೀಯರು ಅದ್ದೂರಿ ಸ್ವಾಗತ ಕೋರಿದರು. ಜೈಹಿಂದ್ ನಿನಾದಗಳಿಂದ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತು.


ಅವರು ಹೇಳಿದ ಮೊದಲ ಮಾತು:
ಗುಡ್ ಟು ಬಿ ಬ್ಯಾಕ್ ಎಂದು ತನ್ನ ಪ್ರತಿಕ್ರಿಯೆ ತಿಳಿಸಿದ. ಅಮೃತ್ ನಗರ ಡೆಪ್ಯುಟಿ ಕಮೀಷನರ್‌ರೊಂದಿಗೆ ಮಾತನಾಡಿದ ಸಮಯದಲ್ಲಿ ಈ ಹೇಳಿಕೆ ನೀಡಿದ್ದಾರೆ ಅಭಿನಂದನ್. ಮರಳಿ ಬಂದದ್ದು ಸಂತೋಷವಾಗಿದೆ ಎಂದಿದ್ದಾರೆ. ಅವರ ಆಗಮನಕ್ಕಾಗಿ ಸಾಕಷ್ಟು ನಿರೀಕ್ಷಿಸಿದ ಅವರ ಕುಟುಂಬಿಕರ ಆನಂದಕ್ಕೆ ಪಾರವೇ ಇರಲಿಲ್ಲ.

ವೈದ್ಯ ಪರೀಕ್ಷೆಗಳು..:
ಸ್ವದೇಶಕ್ಕೆ ಬಂದ ಅಭಿನಂದನ್‌ರನ್ನು ಇಂಟೆಲಿಜೆನ್ಸ್ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ. ವೈದ್ಯ ಪರೀಕ್ಷೆಗಳನ್ನು ಸಹ ನಿರ್ವಹಿಸಲಾಗುತ್ತದೆ ಎಂದು ವಾಯುಪಡೆ ಅದಿಕಾರಿಗಳು ತಿಳಿಸಿದ್ದಾರೆ. ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಪಾಕಿಸ್ತಾನ ನಮಗೆ ಹಸ್ತಾಂತರಿಸಿದ್ದು ತುಂಬಾ ಸಂತೋಷದ ಸಂಗತಿ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಅಭಿನಂದನ್‌ರನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ಕಳುಹಿಸಲಿದ್ದಾರೆ.

ಪಾಕಿಸ್ತಾನದಲ್ಲಿ ಅಭಿನಂದರ್ ಕುಡಿದ ಟೀ ಬಿಲ್..:
ಆದರೆ ಅಭಿನಂದನ್ ಅವರು ಪಾಕಿಸ್ತಾನದಲ್ಲಿ ಕುಡಿದ ಟೀ ಬಿಲ್ ಎಷ್ಟು ಎಂದು ಗೊತ್ತಾದರೆ ಚಕಿತರಾಗುತ್ತೀರ. ಅವರು ಹಣ ಕೇಳಲಿಲ್ಲ. ಅದಕ್ಕೆ ಬದಲಾಗಿ ಅವರು ಹಾರಾಟ ನಡೆಸಿದ ಜೆಟ್ ಕೇಳಿದರು. ಅಭಿನಂದನ್ ಹಾರಾಟ ನಡೆಸಿದ MIG-21 ಜೆಟ್ ಹೆಸರನ್ನು ಬೆಲೆ ವಿಭಾಗದಲ್ಲಿ ಬರೆದರು. ಅಂದರೆ ಆ ಟೀ ಬೆಲೆ ಅವರ ಜೆಟ್. ಸಾಮಾಜಿಕ ಮಾಧ್ಯಮಗಳಲ್ಲಿ ಈ ಪಿಕ್ ಈಗ ವೈರಲ್ ಆಗುತ್ತಿದೆ. ಫನ್ನಿ ಆಗಿ ಇರುವ ಈ ಪಿಕ್ ಈಗ ಎಲ್ಲೆಡೆ ಹರಿದಾಡುತ್ತಿದೆ.

No comments