Header Ads

test

ನಿದ್ದೆಯಿಂದ ಎದ್ದು ನೋಡಿದ ಕೂಡಲೆ ನೀನು ಗರ್ಭಿಣಿ ಎಂದು ಹೇಳಿದ ಡಾಕ್ಟರ್... ಶಾಕ್ ಆದ ಯುವತಿ...

ತಲೆನೋವು ಎಂದು ಹೇಳಿ ಮಲಗಿದ ಯುವತಿ ನಿದ್ದೆಯಿಂದ ಎದ್ದು ನೋಡುವ ವೇಳೆಗೆ ಆಸ್ಪತ್ರೆಯಲ್ಲಿದ್ದಳು. ಇದೇನಿದು ಎಂದು ಕೇಳಿದ ಯುವತಿಗೆ, ಕೋಮಾಗೆ ಹೋದ ಕಾರಣ ಇಲ್ಲೇ ದಾಖಲಿಸಲಾಯಿತು ಎಂದು ಗೊತ್ತಾಯಿತು. ತಾನು ಗರ್ಭಿಣಿ ಎಂಬ ಸಂಗತಿಯನ್ನೂ ತಿಳಿದುಕೊಂಡಳು. ಅದುವರೆಗೂ ಇಲ್ಲದ್ದು ಈಗ ಏಳು ತಿಂಗಳ ಗರ್ಭ ಹೇಗೆ ಬಂತು ಎಂದು ತಿಳಿದು ಚಕಿತಳಾದಳು.


ಆದರೆ ಕೋಮಾಗೆ ಹೋಗಿ ಅದೆಷ್ಟೋ ತಿಂಗಳು ಆಗಿರಲಿಲ್ಲ. ಕೇವಲ ಒಂದು ದಿನ ಮಾತ್ರ ಆಗಿತ್ತು. ಆಕೆ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆದಿರಲಿಲ್ಲ. ಇಷ್ಟಕ್ಕೂ ನಡೆದದ್ದೇನೆಂದರೆ, ವಿಚಿತ್ರ ಖಾಯಿಲೆಯಿಂದ ನರಳುತ್ತಿರುವ ಆಕೆಗೆ ಎರಡು ಗರ್ಭ ಚೀಲಗಳು ಇದ್ದವು. ಕೆಲವು ದಿನಗಳ ಹಿಂದೆ ಆಕೆ ತನ್ನ ಪ್ರಿಯಕರ ಜತೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಳು.

ಎರಡು ಗರ್ಭ ಚೀಲಗಳು ಇದ್ದ ಕಾರಣ ಒಂದು ಗರ್ಭಾಶಯದಿಂದ ಮುಟ್ಟಾಗುವುದು ನಿಂತಿತ್ತು. ಹಾಗಾಗಿ ಆಕೆ ಗರ್ಭಿಣಿ ಎಂಬುದನ್ನು ಗುರುತಿಸಲಿಲ್ಲ. ಇನ್ನೊಂದು ಸಂಗತಿ ಏನೆಂದರೆ ಭ್ರೂಣ ಇದ್ದ ಗರ್ಭಾಶಯ ಬೆನ್ನಹುರಿ ಹಿಂದೆ ಇದ್ದ ಕಾರಣ ಹೊಟ್ಟೆ ಮುಂದೆ ಬಂದಿರಲಿಲ್ಲ. ಹಾಗಾಗಿ ತಾನು ಗರ್ಭಿಣಿ ಎಂಬ ಸಂಗತಿ ಆ ಯುವತಿಯ ಗಮನಕ್ಕೇ ಬಂದಿರಲಿಲ್ಲ.

18 ವರ್ಷದ ಯುವತಿಗೆ ತಲೆನೋವು ಬಂದದ್ದು, ಕೂಡಲೆ ಕೋಮಾಗೆ ಜಾರಿದ್ದು ಇವೆಲ್ಲದಕ್ಕೂ ಕಾರಣ ಆ ಗರ್ಭ ಚೀಲ ಎಂದು ವೈದ್ಯರು ಹೇಳಿದ್ದಾರೆ. ಮಗುವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ ವೈದ್ಯರು. ಪಿಜಿಯೋ ಥೆರಪಿ ಓದುತ್ತಿರುವ ಆ ಯುವತಿ ಈ ರೀತಿ ಮಗುವಿಗೆ ಜನ್ಮ ನೀಡಿದ್ದು ಸಂತೋಷವಾಗಿ ಇದೆ ಎಂದು ತಿಳಿಸಿದ್ದಾಳೆ.

No comments