Header Ads

test

ಪ್ರಾಮಿಸರಿ ನೋಟ್ ಬರೆಸಿಕೊಳ್ಳುವಾಗ ಈ ನಿಬಂಧನೆಗಳನ್ನು ಪಾಲಿಸದಿದ್ದರೆ ತುಂಬಾ ನಷ್ಟ ಹೋಗುತ್ತೀರ.

ಕೊಟ್ಟವ ಕೋಡಂಗಿ, ಇಸಕೊಂಡೋನು ಈರಭದ್ರ ಎಂದ ಮಾತು ನೆನಪಿರಬಹುದು. ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ. ಸಾಲ ಕೊಳ್ಳುವಾಗ ಒಂದು ರಾಗ, ಸಾಲ ಹೊಳ್ಳಿ ಕೊಡುವಾಗ ನಾನಾ ರಾಗ. ಸಾಲ ಕೊಳ್ಳುವಾಗ ಹಾಲು ಕುಡಿದಂತೆ, ಸಾಲ ತಿರುಗಿ ಕೊಡುವಾಗ ಕಿಬ್ಬದಿ ಕೀಲು ಮುರಿದಂತೆ ಎಂಬ ಗಾದೆ ಮಾತುಗಳನ್ನು ಕೇಳಿಯೇ ಇರುತ್ತೀರ. ಇವೆಲ್ಲಾ ಸಾಲ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ತಿಳಿಸುವಂತಹವು.


ವಿಷಯ ಅದಲ್ಲ. ಏನೋ ಸಂದರ್ಭ ಬಂದಾಗ ಇತರರಿಂದ ಸಾಲ ಪಡೆಯುವಾಗ ಅಥವಾ ಇನ್ನೇನಾದರೂ ಆರ್ಥಿಕ ಸಹಾಯ ಪಡೆಯುವಾಗ ಅದಕ್ಕೆ ಸಾಕ್ಷಿ ಎಂಬಂತೆ ಸಾಲ ತೆಗೆದುಕೊಂಡವರು ಪ್ರಾಮಿಸರಿ ನೋಟ್ ಬರೆದು ಕೊಡುವುದು ನಡೆಯುತ್ತಾ ಬಂದಿರುವ ಪದ್ಧತಿ. ಆದರೆ ಆ ಪ್ರಾಮಿಸರಿ ನೋಟನ್ನು ಬರೆಯುವಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಅದರಲ್ಲಿನ ತಪ್ಪುಗಳು ಋಣದಾತರು ತೊಂದರೆ ಅನುಭವಿಸುವುದಷ್ಟೇ ಅಲ್ಲದೆ ಆ ಪ್ರಾಮಿಸರಿ ನೋಟ್‌ಗೆ ಬೆಲೆ ಇರಲ್ಲ.

ಹಾಗಾಗಿ ಪ್ರಾಮಿಸರಿ ನೋಟ್ ಬರೆಯುವಾಗ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು ಏನು ಎಂಬುದನ್ನು ಕೆಳಗೆ ನೀಡಲಾಗಿದೆ ಓದಿ. ಪ್ರಾಮಿಸರಿ ನೋಟ್ ಬರೆಯುವಾಗ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು ಈ ರೀತಿ ಇವೆ:

1. ಪ್ರಾಮಿಸರಿ ನೋಟ್ ಲಿಖಿತ ಪೂರಕವಾಗಿ ಇರಬೇಕು.
2. ಸಾಲ ಕೊಟ್ಟ ಮತ್ತು ತೆಗೆದುಕೊಳ್ಳುವವರ ಹೆಸರು ಸರ್ಕಾರ ನೀಡಿರುವ ಯಾವುದಾದರೂ ಗುರುತಿನ ಚೀಟಿಯಲ್ಲಿ ತಿಳಿಸಿದಂತೆ ತಪ್ಪುಗಳು ಇಲ್ಲದಂತೆ ಸ್ಪಷ್ಟವಾಗಿ ಬರೆಯಬೇಕು.
3. ಪ್ರಾಮಿಸರಿ ನೋಟ್ ಯಾವ ಕಾರಣಕ್ಕೆ ಬರೆದುಕೊಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಇರಬೇಕು.
4. ಪ್ರಾಮಿಸರಿ ನೋಟ್ ಬರೆದ ಸ್ಥಳ ಮತ್ತು ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು.
5. ಸಾಲ ಪಡೆದ ಮೊತ್ತವನ್ನು ಅಂಕೆಗಳಲ್ಲಿ, ಅಕ್ಷರಗಳಲ್ಲಿ ಬರೆಯಬೇಕು.
6. ರೆವೆನ್ಯೂ ಸ್ಟಾಂಪ್ ಅಂಟಿಸಿ ಸಾಕ್ಷಿಗಳ ಸಮ್ಮುಖದಲ್ಲಿ ಸಾಲ ಪಡೆಯುವವರು ಸಹಿ ಮಾಡಬೇಕು. ಆ ಬಳಿಕ ಸಾಕ್ಷಿಗಳು ಸಹ ಪ್ರಾಮಿಸರಿ ನೋಟ್ ಮೇಲೆ ಸಹಿ ಹಾಕಬೇಕು.
7. ಸಾಲ ಮತ್ತೆ ಯಾವಾಗ, ಯಾವ ರೀತಿಯಲ್ಲಿ ಹಿಂತಿರುಗಿಸುತ್ತೀರ? ಆ ವಿವರಗಳೆಲ್ಲಾ ಅದರಲ್ಲಿರಬೇಕು
8. ಸಾಲದ ಹಣವನ್ನು ಯಾವ ರೀತಿ ಸ್ವೀಕರಿಸಿದ್ದೀರಾ ಎಂಬುದು, ಅಂದರೆ ನಗದು ಮೂಲಕವೇ, ಚೆಕ್ ಮೂಲಕವೇ ಎಂಬುದನ್ನು ಬರೆಯಬೇಕು.
9. ಕೊಟ್ಟ ಹಣಕ್ಕೆ ಬಡ್ಡಿ ಮತ್ತು ಇತರೆ ಷರತ್ತುಗಳನ್ನು ಸ್ಪಷ್ಟವಾಗಿ ಬರೆಯಬೇಕು.

No comments