Header Ads

test

ವಾಟ್ಸಾಪ್ ಗ್ರೂಪ್‌ಗಳಿಂದ ಏಗೋದಕ್ಕೆ ಆಗುತ್ತಿಲ್ಲವೇ..? ನಿಮಗಾಗಿ ಹೊಸ ಆಪ್ಷನ್ ಬರುತ್ತಿದೆ

ಈಗ ಪ್ರತಿಯೊಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಆಕ್ಟೀವ್ ಆಗಿ ಇರುತ್ತಾರೆ ಮುಖ್ಯವಗಿ ಸ್ಮಾರ್ಟ್‌ಫೋನ್ ಎಲ್ಲರಿಗೂ ಲಭ್ಯವಿರುವ ಕಾರಣ ವಾಟ್ಸಾಪ್ ಬಳಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತು ಈಗ ನೆನಪಾಗುತ್ತಿದೆ. ವಾಟ್ಸಾಪ್ ಬಳಸುವವರಲ್ಲಿ ದೊಡ್ಡ ತಲೆನೋವು ಏನಾದರೂ ಇದೆ ಎಂದರೆ... ಅದು ಗ್ರೂಪ್‌ಗಳ ಗೋಳು. ಈಗ ಯಾರೆಂದರೆ ಅವರು ಯವುದೋ ಒಂದು ಹೆಸರಲ್ಲಿ ಗ್ರೂಪ್ ಕ್ರಿಯೇಟ್ ಮಾಡುವುದು ಆ ಗ್ರೂಪ್‌ಗಳಲ್ಲಿ ಮನಬಂದಂತೆ.. ಒಂದಕ್ಕೊಂದು ಸಂಬಂಧ ಇಲ್ಲದಂತೆ ತಲೆಗೆ ತೋಚಿದನ್ನು ಯಾರೆಂದರೆ ಅವರು ಏನೋ ಒಂದು ಹಾಕುತ್ತಾ ಗೊಂದಲಕ್ಕೆ ಗುರಿ ಮಾಡುವುದು ನಡೆಯುತ್ತಲೇ ಇರುತ್ತದೆ.ಈ ರೀತಿಯ ಗ್ರೂಪ್‌ಗಳ ಕಾರಣದಿಂದ ಬಹಳಷ್ಟು ಮಂದಿ ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನೂ ಮುಖ್ಯವಾಗಿ ಆ ಗ್ರೂಪ್‍ಗಳಿಂದ ಹೂರಬಂದರೂ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಇನ್ನೊಂದು ರೂಪದಲ್ಲಿ ನಮ್ಮ ಮೊಬೈಲ್‌ಗೆ ಬರುತ್ತದೆ. ಕೆಲವು ವಾಟ್ಸಾಪ್ ಗ್ರೂಪ್‌ಗಳನ್ನು ಬಿಡಲೂ ಆಗದೆ, ಇರಲೂ ಆಗದಂತಹ ಪರಿಸ್ಥಿತಿ. ಅಂತಹವರಿಗಾಗಿ ವಾಟ್ಸಾಪ್ ಈಗ ಹೊಸ ಆಪ್ಷನನ್ನು ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ಮಗ್ನವಾಗಿದೆ.

ಈ ಆಪ್ಷನ್ ಶೀಘ್ರದಲ್ಲೇ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಆಪ್ಷನ್ ಬಳಕೆಗೆ ಬಂದರೆ... ವಾಟ್ಸಾಪ್ ಗ್ರೂಪ್‌ನಲ್ಲಿ ಯಾರಾದರೂ ನಿಮ್ಮನ್ನು ಆಡ್ ಮಾಡಬೇಕದರೆ... ಇಷ್ಟ ಬಂದಂತೆ ಆಡ್ ಮಾಡಲು ಸಾಧ್ಯವಾಗಲ್ಲ. ಕಡ್ಡಾಯವಾಗಿ ನಿಮ್ಮ ಪರ್ಮಿಷನ್ ಇರಬೇಕು. ಇಷ್ಟ ಇಲ್ಲದೆ ಯಾರೂ ಯಾವ ಗ್ರೂಪ್‌ನಲ್ಲೂ ಆಡ್ ಮಾಡುವಂತಿಲ್ಲ. ಇದಕ್ಕೆ ಮಾಡಬೇಕಾಗಿದ್ದು ವಾಟ್ಸಾಪ್‌ನಲ್ಲಿ ಇರುವ ಸೆಟ್ಟಿಂಗ್ಸ್‌ನಲ್ಲಿ ಕೆಲವು ಆಪ್ಷನ್ಸ್ ಬದಲಾಯಿಸಿಕೊಳ್ಳುವುದು. ಆದರೆ ಈ ಆಪ್ಷನ್ ಸದ್ಯಕ್ಕೆ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಬಳಕೆಗೆ ಬರಲಿದೆ ಎಂದು ವಾಟ್ಸಾಪ್ ಪ್ರಕಟಿಸಿದೆ.

ಹಾಗಾಗಿ ಸ್ವಲ್ಪ ದಿನ ನಿರೀಕ್ಷಿಸೋಣ. ಆ ಆಪ್ಷನ್ ಬಂದರೆ ಕೆಲವು ಗ್ರೂಪ್‌ಗಳ ಕಿರಿಕಿರಿಯಿಂದ ಹೊರಬರಬಹುದು. ಮುಖ್ಯವಾಗಿ ನಮ್ಮ ಒಪ್ಪಿಗೆ ಇಲ್ಲದೆ ಗ್ರೂಪ್‌ನಲ್ಲಿ ಸೇರಿಸುವಂತೆಯೂ ಇಲ್ಲ. ಹಾಗಾಗಿ ಈ ಆಯ್ಕೆಯಾಗಿ ಬಹಳಷ್ಟು ಮಂದಿ ನಿರೀಕ್ಷಿಸುವಂತಾಗಿದೆ.

No comments