Header Ads

test

ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವೃದ್ಧನಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಬಿಗ್ ಬಾಸ್ ಸೋನುಪಾಟೀಲ್!

ಕನ್ನಡ ಬಿಗ್ ಬಾಸ್ 6ನೇ ಸೀಸನ್‌ನಲ್ಲಿ ಮಿಂಚಿದ ಬೆಡಗಿ ಸೋನು ಪಾಟೀಲ್. ಸದಾ ಮನೆಯಲ್ಲಿ ಮಾತಿನ ಪಟಾಕಿ ತರಹ ಸಿಡಿಯುತ್ತಿದ್ದರು ಅವರು. ಗಾಯಕ ನವೀನ್ ಸಜ್ಜು ಜತೆಗೆ ತೀರಾ ಆತ್ಮೀಯವಾಗಿದ್ದ ಕಾರಣ ಗಾಸಿಪ್‌ಗೂ ಕಾರಣವಾಗಿದ್ದರು. ಇದೀಗ ಅವರು ಮಾಡಿರುವ ಕೆಲಸವೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಪಘಾತದಲ್ಲಿ ಗಾಯಗೊಂಡು ಬಿದ್ದು ನರಳಾಡುತ್ತಿದ್ದ ವೃದ್ಧರೊಬ್ಬರಿಗೆ ಆರೈಕೆ ಮಾಡಿರು ಘಟನೆ ನಡೆದಿದೆ.ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಓಮ್ನಿ ಕಾರೊಂದು ಸುಮಾರು 75 ವರ್ಷದ ವಯಸ್ಸಾದವರಿಗೆ ಗುದ್ದಿ ಎಸ್ಕೇಪ್ ಆಗಿದೆ. ಕಾರು ಗುದ್ದಿದ ರಭಸಕ್ಕೆ ಅವರು ರಸ್ತೆ ನಡುವೆ ಬಿದ್ದಿದ್ದರು. ಅವರ ಹೆಸರು ಎಂ ರಾಘವೇಂದ್ರ ಎಂದು. ಇದನ್ನು ಗಮನಿಸಿದ ಸೋನು ಪಾಟೀಲ್ ಹಿರಿಯ ಬಳಿ ಬಂದು ಅವರಿಗೆ ಆರೈಕೆ ಮಾಡಿದ್ದಾರೆ.

ರಾಘವೇಂದ್ರ ಅವರ ಕಾಲಿಗೆ ಗಾಯವಾಗಿದ್ದು ರಕ್ತ ಸುರಿಯುತ್ತಿತ್ತು. ಸೋನು ಅವರಿಗೆ ಅದಕ್ಕೆ ಅರಿಶಿಣ ಹಚ್ಚಿ ರಕ್ತಸ್ರಾವ ತಡೆಯಲು ಪ್ರಯತ್ನಿಸಿದ್ದಾರೆ. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನೂ ಕೊಡಿಸಿದ್ದಾರೆ.

ರಾಘವೇಂದ್ರ ಅವರು ಉಡುಪಿ ಮೂಲದವರಾಗಿದ್ದು ಮಕ್ಕಳನ್ನು ನೋಡುವ ಸಲುವಾಗಿ ಬೆಂಗಳುರಿಗೆ ಆಗಮಿಸಿದ್ದರು. ಆದರೆ ಮಾರುತಿ ಓಮ್ನಿ ಕಾರು ಗುದ್ದಿ ಎಸ್ಕೇಪ್ ಆದ ಕಾರಣ ಅವರು ಗಾಯಗೊಂಡು ರಸ್ತೆ ನಡುವೆ ಬಿದ್ದರು. ಮಾರುತಿ ಓಮ್ನಿ ಕಾರಿನ ನಂಬರ್ ಸಂಗ್ರಹಿಸಿರುವ ಸೋನು ಪಾಟೀಲ್ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಆದರೂ ಪೊಲೀಸರು ಸ್ಥಳಕ್ಕೆ ಬಂದಿಲ್ಲ.

ಏನೇ ಆಗಲಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಯಾರಾದರೂ ಈ ರೀತಿ ಅಪಾಯಕ್ಕೆ ಸಿಲುಕಿದಾಗ ಮುಂದೆ ಬರುವವರು ತುಂಬಾ ಕಡಿಮೆ. ಇನ್ನು ಅಪಘಾತ ಎಂದರೆ ನಮಗ್ಯಾಕೆ ಬಂದ ಉಸಾಬರಿ ಎಂದು ದೂರ ಸರಿಯುತ್ತಾರೆ. ಇಂತಹದ್ದರಲ್ಲಿ ಸೋನು ಪಾಟೀಲ್ ಮಾಡಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

No comments