Header Ads

test

ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು, ಮೂಗಿನಲ್ಲಿ ಸೆಲೈನ್‌ನೊಂದಿಗೆಅಸೆಂಬ್ಲಿಯಲ್ಲಿ ಬಜೆಟ್ ಮಂಡಿಸಿದ ಗ್ರೇಟ್ ಲೀಡರ್

ಗೋವಾಗೆ ನಾಲ್ಕು ಸಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಮನೋಹರ್ ಪರಿಕ್ಕರ್ ಇನ್ನಿಲ್ಲ. ಅವರು ಮಾರ್ಚ್ 17ರಂದು ಸಂಜೆ ಕೊನೆಯುಸಿರೆಳಿದ್ದಾರೆ. ಅವರು ಓದಿದ್ದು ಐಐಟಿಯಲ್ಲಾದರೂ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಐಐಟಿಯಂತಹ ಉನ್ನತ ಶಿಕ್ಷಣ ಪಡೆದು ರಾಜ್ಯವೊಂದಕ್ಕೆ ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ಸಹ ಅವರು.

ಗೋವಾದಲ್ಲಿನ ಮಪೂಸರಿಯಲ್ಲಿ 1955, ಡಿಸೆಂಬರ್ 3ರಂದು ಮನೋಹರ್ ಜನಿಸಿದರು. ತನ್ನ ಶಾಲಾ ದಿನಗಳಿಂದಲೇ ಆರ್‌ಎಸ್‌ಎಸ್‌ನಲ್ಲಿ ಕ್ರಿಯಾಶೀಲವಾಗಿದ್ದರು. 1994ರಲ್ಲಿ ಮೊದಲ ಸಲ ಗೋವಾ ಶಾಸಕರಾಗಿ ಆಯ್ಕೆಯಾದರು. 1988, 99ರಲ್ಲಿ ಗೋವಾ ಪ್ರತಿಪಕ್ಷದ ಮುಖಂಡರಾಗಿ ಬೆಳೆದರು. 2000 ಅಕ್ಟೋಬರ್ 24ರಂದು ಮನೋಹರ್ ಪರಿಕ್ಕರ್ ಮೊದಲ ಸಲ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ದೇಶಭಕ್ತಿ ಹೆಚ್ಚು, ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಅವರ ಹೋರಾಟವೇ ನಾಲ್ಕು ಸಲ ಗೋವಾ ಸಿಎಂ ಪೀಠದ ಮೇಲೆ ಕೂರಿಸಿತು.



ಮನೋಹರ್ ಪರಿಕ್ಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು

1. ಮನೋಹರ್ ಮುಖ್ಯಮಂತ್ರಿ ಆಗಿದ್ದರು ಅವರು ತನ್ನ ಸ್ವಂತ ಮನೆಯಲ್ಲೇ ವಾಸವಾಗಿದ್ದರು. ಅವರು ವಿರೋಧ ಪಕ್ಷದಲ್ಲಿದ್ದಾಗ ಬಳಸಿದ ಇನ್ನೋವಾ ಕಾರನ್ನೇ ಮುಖ್ಯಮಂತ್ರಿ ಆದ ಬಳಿಕವೂ ಬಳಸಿದರು.

2. ಮನೋಹರ್ ಅವರು ಮುಖ್ಯಮಂತ್ರಿಯಾಗಿ ಅಲ್ಲದೆ ಸಾಮಾನ್ಯ ಜನರಂತೆ ಹೊರಗೆ ಸುತ್ತುತ್ತಿದ್ದರು. ಅವರು ಹೆಚ್ಚಾಗಿ ರಿಕ್ಷಾ, ಆಟೋಗಳಲ್ಲಿ ಪ್ರಯಾಣಿಸುತ್ತಿದ್ದರು. ಅವರು ವಿಮಾನಗಳಲ್ಲೂ ಸಹ ಎಕನಾಮಿಕ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

3. ಅವರು 60 ವರ್ಷ ವಯಸ್ಸಾಗಿದ್ದರೂ ಸಹ ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು.

4. ಗೋವಾದಲ್ಲಿ ಅಕ್ರಮ ಮೈನಿಂಗ್ ಮಾಡುವವರ ಲೈಸೆನ್ಸ್ ರದ್ದು ಮಾಡಿದರು. ಹಾಗಾಗಿಯೇ ಗೋವಾ ಜನ ಇವರನ್ನು "ಗೋವಾದ ಮಿಸ್ಟರ್ ಕ್ಲೀನ್" ಎನ್ನುತ್ತಾರೆ.

5. ಮನೋಹರ್ ಪರಿಕ್ಕರ್ ಮೊದಲ ಸಲ 2000ನೇ ವರ್ಷದಲ್ಲಿ ಮುಖ್ಯಮಂತ್ರಿಯಾಗಿ ಜವಾಬ್ದಾರಿ ಸ್ವೀಕರಿಸಿದ ಮರು ವರ್ಷವೆ ಪತ್ನಿಯನ್ನು ಕಳೆದುಕೊಂಡಿದ್ದರು. ಅವರು ಮನೋಧೈರ್ಯದಿಂದ ಮುಖ್ಯಮಂತ್ರಿ ಜವಾಬ್ದಾರಿಯನ್ನು ಮಾತ್ರ ಮರೆಯಲ್ಲಿಲ್ಲ. ಅವರಿಗೆ ಇಬ್ಬರು ಗಂಡು ಮಕ್ಕಳು ಉತ್ಪಲ್, ಅಭಿಜಿತ್.

6. ಇವರ ಪೂರ್ಣ ಹೆಸರು ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್.

7. ಅವರು ಸ್ವಲ್ಪ ಸಮಯ ಲಿವರ್ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಮೆರಿಕದಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯ ಸುಧಾರಿಸಲಿಲ್ಲ. ಇತ್ತೀಚೆಗೆ ಅವರು ರಾಜ್ಯ ಬಜೆಟನ್ನು ಮಂಡಿಸಲು ಮೂಗಿನಲ್ಲಿ ಸೆಲೈನ್ ಪೈಪ್‌ನೊಂದಿಗೆ ಗೋವಾ ಅಸೆಂಬ್ಲಿಗೆ ಬಂದರು. ರಾಜ್ಯ ಬಜೆಟನ್ನು ಮಂಡಿಸಿ ತನಗಿರುವ ಬದ್ಧತೆಯನ್ನು ಸಾರಿದ್ದರು.

No comments