Header Ads

test

ನಟ ದರ್ಶನ್ ಖರ್ಚಿಗೆ ಕಾಸಿಲ್ಲದೇ ಮೈಸೂರಿನ ಸಾಡೆ ರಸ್ತೆಯಲ್ಲಿ ದನದ ಮಾಂಸ ತಿನ್ನಲು ಬರುತ್ತಿದ್ದ: ಜೆಡಿಎಸ್ಉಪಾಧ್ಯಕ್ಷ ಹೇಳಿಕೆಗೆ ಭಾರಿ ವಿರೋಧ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕೆಸರೆರೆಚಾಟ ಜೋರಾಗಿದೆ. ಮುಖ್ಯವಾಗಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿದ್ದಾರೆ. ಇವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ ಮತ್ತು ರಾಕಿಂಗ್ ಸ್ಟಾರ್ ಯಶ್ ಬೆಂಬಲಕ್ಕೆ ನಿಂತಿದ್ದು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಇದನ್ನು ಸಹಿಸಲಾಗದ ರಾಜಕೀಯ ಪಕ್ಷಗಳು ಇದೀಗ ದರ್ಶನ್ ವಿರುದ್ಧ ತಿರುಗಿ ಬಿದ್ದಿವೆ. ನಟ ದರ್ಶನ್ ಖರ್ಚಿಗೆ ಕಾಸಿಲ್ಲದೇ ಮೈಸೂರಿನ ಸಾಡೆ ರಸ್ತೆಯಲ್ಲಿ ದನದ ಮಾಂಸ ತಿನ್ನಲು ಬರುತ್ತಿದ್ದ. ಅವರು ಮೈಸೂರಿನಲ್ಲಿ ಹೇಗೆ ಇದ್ದರು ಎಂಬುದು ಗೊತ್ತು. ಈಗ ಮಂಡ್ಯದಲ್ಲಿ ರಾಜಕೀಯ ಮಾಡಲು ಬಂದಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್ ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
 ಮುಖ್ಯವಾಗಿ ದರ್ಶನ್ ಅಭಿಮಾನಿಗಳು ಕೆರಳಿದ್ದಾರೆ. ಹಸು ಸೇರಿದಂತೆ ಇತರೆ ಪ್ರಾಣಿ ಗಳ ಬಗ್ಗೆ ದರ್ಶನ್ ಗೆ ಇರೋ ಕಾಳಜಿ ನಿಮ್ಮಂತ ರಾಜಕೀಯದವರು ರೈತರ ಬಗ್ಗೆ ತೋರಿಸಿದ್ರೆ ಮಂಡ್ಯ ಜಿಲ್ಲೆಯಲ್ಲಿ ಇಷ್ಟೊಂದು ರೈತರ ಆತ್ಮಹತ್ಯೆ ಯಾಕೆ ಆಗುತ್ತಿತ್ತು ಎಂದಿದ್ದಾರೆ.

ಇನ್ನು ಕೆಲವರು, "ಅದರಲ್ಲಿ ತಪ್ಪೇನಿದೆ ಶ್ರಮಪಟ್ಟು ಈ ಮಟ್ಟಕ್ಕೆ ಬೆಳೆದಿದ್ದಾರೆ , ಖುಷಿ ಪಡ್ರಿ. ಉರ್ಕೋಬೇಡಿ , ಅಪ್ಪ ನ ಹೆಸರೇಳ್ಕೊಂಡು , ಫೇಸ್ ವ್ಯಾಲ್ಯು ಇಲ್ಲದಿರೋರೆಲ್ಲ ಹೀರೋ ಆಗಿದ್ದಾರಲ್ಲ , ಅವರಿಗೇನ್ ಹೇಳ್ತಿರಿ ಎಂದಿದ್ದಾರೆ. ಒಟ್ಟಾರೆ ದರ್ಶನ್ ಮ್ಯಾಟರ್ ವೈರಲ್ ಆಗಿದೆ.

ಚಿತ್ರನಟ ಯಶ್ ಅವರು ತಪ್ಪು ಮಾಡುವುದಕ್ಕೆ ಮಂಡ್ಯಕ್ಕೆ ಬರುತ್ತೇನೆ ಎಂದು ಕೈ ತಿರುಗಿಸಿ ಉದ್ದಟತನದಿಂದ ಮಾತನಾಡಿರುವುದು ಸರಿಯಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿರುವುದು ಇನೊಂದು ತಿರುವು ಪಡೆದಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪಟ್ಟಣದಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಅಂಬರೀಶ್ ಕುಟುಂಬಕ್ಕೆ ಜಿಲ್ಲೆಯ ಜನರು 20 ವರ್ಷ ಅಧಿಕಾರ ನೀಡಿದ್ದಾರೆ. ಸಮುದಾಯ ಭವನ, ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದೇ ಅಂಬರೀಶ್ ಎಂದು ಹೇಳುತ್ತಾರೆ. ಅದಕ್ಕಾಗಿ ನಾಲ್ಕಾರು ಜನ ಶ್ರಮಿಸಿದ್ದಾರೆ. ಸಿ ಎಂ ಜಿಲ್ಲೆಗೆ ದಾಖಲೆ ಪ್ರಮಾಣದ ಅನುದಾನ ನೀಡಿದ್ದು, ಹಾಸನ ಮಾದರಿಯಲ್ಲಿ ಮಂಡ್ಯ ಅಭಿವೃದ್ದಿಯಾಗಬೇಕಾದರೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ. ಸಂತೋಷ್ ಮಾತನಾಡಿ, ದರ್ಶನ್ ಮತ್ತು ಯಶ್ ಮಂಡ್ಯದಲ್ಲಿ ರಾಜಕಾರಣ ಮಾಡಲು ಬಂದಿದ್ದಾರೆ. ಪಡುವಾರಳ್ಳಿ, ಸಾಡೆ ರಸ್ತೆಗಳಲ್ಲಿ ದರ್ಶನ ಖರ್ಚಿಗೆ ಕಾಸಿಲ್ಲದೇ ದನದ ಮಾಂಸ ತಿನ್ನಲು ಬರುತ್ತಿದ್ದರು ಇಬ್ಬರು ನಟರು ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದು ಗೊತ್ತಿದೆ. ಮಂಡ್ಯ ಜನರಿಗೆ ಸವಾಲು ಹಾಕಿರುವ ನಟರಿಗೆ ಚುನಾವಣೆಯಲ್ಲಿ ಮಂಡ್ಯ ಮತದಾರರು ಉತ್ತರ ಕೊಡಲಿದ್ದಾರೆ. ನೋಡೋಣ ಏನಾಗುತ್ತದೋ.

No comments