Header Ads

test

ಹತ್ತು ವರ್ಷದ ಬಾಲಕಿಯನ್ನು ತಾಯಿ ಮಾಡಿದ ಉಗ್ರರು... ಬಯಕೆ ತೀರಿದ ಬಳಿಕ ಮತ್ತೊಬ್ಬರಿಗೆ ಮಾರಾಟಇರಾನ್‍ನಲ್ಲಿ ದಾರುಣ!!

ಮನುಷ್ಯರು ಪಶುಗಳಂತೆ ಬದಲಾಗುತ್ತಿದ್ದಾರೆ. ಅಲ್ಲ ಅಲ್ಲ ಪಶುವಿಗಿಂತಲೂ ಹೀನವಾಗಿ ವರ್ತಿಸುತ್ತಿದ್ದಾರೆ. ಇರಾಕ್‌ನಲ್ಲಿ ನಡೆದ ದಾರುಣ ಘಟನೆ ಇಡೀ ಜಗತ್ತು ತಲೆತಗ್ಗಿಸುವಂತೆ ಮಾಡಿದೆ. ಏನೇನೋ ಗೊತ್ತಿಲ್ಲದ ಮುಗ್ಧ ಹತ್ತು ವರ್ಷದ ಬಾಲಕಿಯ ಮೇಲೆ ನೂರು ಮಂದಿಗೂ ಹೆಚ್ಚು ಅತ್ಯಾಚಾರ ಎಸಗಿದ್ದಾರೆ ಇಸ್ಲಾಮಿಕ್ ಉಗ್ರರು. ಹತ್ತು ವರ್ಷದ ಮಗು ಎಂದು ನೋಡದೆ ಪ್ರತಿ ದಿನ ಅತ್ಯಾಚಾರ ಮಾಡುತ್ತಿದ್ದರು. ತಾಯಿಯ ಮಡಿಲಲ್ಲಿ ಆಡಿಕೊಳ್ಳಬೇಕಾದ ಬಾಲಕಿ ತಾನೇ ಸ್ವತಃ ತಾಯಿಯಾದಳು.


ಇರಾಕ್‌ನಲ್ಲಿ ಯಾಜಿದಿ ಜನಾಂಗಕ್ಕೆ ಸೇರಿದ ಪುರುಷರನ್ನು ಉಗ್ರವಾದಿಗಳು ಹತ್ಯೆ ಮಾಡುತ್ತಿದ್ದಾರೆ. ಮಹಿಳೆಯರನ್ನು ಮಾತ್ರ ಬಂಧಿಸಿ ಲೈಂಗಿಕ ಬಯಕೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಅವರ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳಲು 10 ರಿಂದ 20 ವರ್ಷದ ಒಳಗಿನ ಬಾಲಕಿಯರನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ ಸೀನಿಯರ್ ಉಗ್ರವಾದಿಗಳು. ಅವರ ಮೇಲೆ ಅತ್ಯಾಚಾರ ಎಸಗುತ್ತಾ ಪೈಶಾಚಿಕ ಆನಂದ ಪಡೆಯುತ್ತಾರೆ. ಅತ್ಯಾಚಾರ ಎಸಗುವುದಷ್ಟೇ ಅಲ್ಲದೆ ಮತ್ತೆ ಬೇರೆಯವರಿಗೆ ಮಾರಾಟ ಮಾಡುತ್ತಾರೆ.

ಉಗ್ರರ ಬಂಧನದಿಂದ ಯಾಜಿದಿಗಳನ್ನು ಅಲ್ಲಿನ ಸ್ಥಳೀಯ ಒಂದು ಎನ್‍ಜಿಒ ಆಶ್ರಯ ಕಲ್ಪಿಸುತ್ತಿದೆ. ಆದರೆ ಬಾಲಕಿ ಸೋದರತ್ತೆ ಉಗ್ರರ ಸೆರೆಯಿಂದ ತಪ್ಪಿಸಿಕೊಂಡು ಎನ್‍ಜಿಒ ಬಳಿಗೆ ಬಂದ ಬಳಿಕ ಈ ಸಂಗತಿ ಗೊತ್ತಾಗಿದೆ. ಈಕೆ ಸಹ ಉಗ್ರವಾದಿಗಳ ಸೆರೆಯಲ್ಲಿ ಲೈಂಗಿಕ ಗುಲಾಮಳಾಗಿದ್ದಳು, ಅಲ್ಲಿ ಚಿತ್ರವಧೆ ಅನುಭವಿಸಿದ್ದಳು.

ಇಬ್ಬರು ಮಕ್ಕಳಿರುವ ಈಕೆಯನ್ನು ಕುಟುಂಬ ಸಮೇತ ಐಸಿಸ್ ಉಗ್ರವಾದಿಗಳು ಕಿಡ್ನಾಪ್ ಮಾಡಿದರು. ಆಕೆಯನ್ನು ಸೆಕ್ಸ್ ಗುಲಾಮಳನ್ನಾಗಿ ಮಾಡಿ ಮಕ್ಕಳನ್ನು ಮಾರಿದರು. ಇರಾನ್‌ನಲ್ಲಿನ ಸಿಂಜಾರ್ ಪ್ರದೇಶದಲ್ಲಿ ಇವರನ್ನು ಇಡುತ್ತಿದ್ದರಂತೆ. ಸರಿಯಾಗಿ ಊಟ ಹಾಕದೆ.. ಚಿತ್ರ ಹಿಂಸೆಗೆ ಗುರಿ ಮಾಡುತ್ತಿದ್ದರು. ಹಸಿವು ತಾಳಲಾರದೆ ಪ್ರಾಣಿಗಳು ವಿಸರ್ಜಿಸಿದ ಸಗಣಿ ತಿನ್ನುತ್ತಿದ್ದರಂತೆ. ತನ್ನ ಸೋದರ ಸೊಸೆಯನ್ನು ಹತ್ತು ವರ್ಷದ ಮಗು ಎಂದೂ ನೋಡದೆ ಆಕೆಯ ಮೇಲೆ ನಿತ್ಯ ಅತ್ಯಾಚಾರ ಮಾಡುತ್ತಿದ್ದರು. ಬಯಕೆ ತೀರಿದ ಬಳಿಕ ಸಂತೆಯಲ್ಲಿ ಹಸುಗಳಂತೆ ಮಾರುತ್ತಿದ್ದರು ಎಂದು ಗೊಳೋ ಎಂದು ಕಣ್ಣೀರಿಡುತ್ತಾ ಹೇಳಿದಳು. ಗರ್ಭಿಣಿಯಾದ ತನ್ನ ಸೋದರ ಸೊಸೆ ಎಲ್ಲಿದ್ದಾಳೋ ಗೊತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

No comments