Header Ads

test

ಬೆಂಕಿ ಹೊತ್ತಿಸಿಕೊಂಡು... ಟೈಟಲ್ ಘೋಷಿಸಿದ ಹೀರೋ ಅಕ್ಷಯ್ ಕುಮಾರ್.. ವೈರಲ್

ಬಾಲಿವುಡ್ ಟಾಪ್ ಹೀರೋ ಆಗಿ ಮುನ್ನುಗ್ಗುತ್ತಿದ್ದಾರೆ ಅಕ್ಷಯ್ ಕುಮಾರ್. ಸಿನಿಮಾದಿಂದ ಸಿನಿಮಾಗೆ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ ಅಕ್ಷಯ್. ಸಾಮಾಜಿಕ ಜವಾಬ್ದಾರಿಯಿಂದ ಸಿನಿಮಾಗಳನ್ನು ಮಾಡುತ್ತಾ... ರಿಯಲ್ ಲೈಫ್‌ನಲ್ಲೂ ಕೂಡ ಒಳ್ಳೆಯ ಮಾನವೀಯತೆಯನ್ನು ಸಾರುತ್ತಿದ್ದಾರೆ ರಿಯಲ್ ಹೀರೋ. ಇತ್ತೀಚೆಗೆ ಅಕ್ಷಯ್ ಮಾಡಿದ ಸಾಹಸ ಎಲ್ಲರನ್ನೂ ಚಕಿತಗೊಳಿಸಿದೆ. ಅವರ ಸಾಹಸ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.


ಅಕ್ಷಯ್ ಸದ್ಯಕ್ಕೆ ಕೇಸರಿ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ.. ಜೊತೆಗೆ ಒಂದು ವೆಬ್ ಸೀರೀಸ್‌ನಲ್ಲೂ ನಟಿಸುತ್ತಿದ್ದಾರೆ. ಅಕ್ಷಯ್ ಬೆಂಕಿಯಲ್ಲಿ ಸುಡುತ್ತಾ... ಈ ಟೈಟಲನ್ನು ಘೋಷಿಸಿದ್ದಾರೆ. ದಿ ಎಂಡ್ ಎಂದು ಇದು ಕೇವಲ ಆರಂಭ.. ಎಂದು ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೀ ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿದೆ. ಇತ್ತೀಚೆಗೆ ರಿಲೀಸ್ ಮಾಡಿದ ಅಕ್ಷಯ್ ಕೇಸರಿ ಟ್ರೈಲರ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಸಂಗತಿ ಗೊತ್ತೇ ಇದೆ.

ಮೈಗೆ ಬೆಂಕಿ ಹಚ್ಚಿಕೊಂಡು ಸ್ಟಂಟ್ ಮಾಡಿದ್ದಕ್ಕೆ ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಗರಂ ಆಗಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, "ಛೇ.. ನಿನ್ನ ಮೈಗೆ ನೀನೇ ಬೆಂಕಿ ಹಚ್ಚಿಕೊಳ್ಳಲು ಈ ರೀತಿ ಮಾಡಿದ್ರಾ. ಈ ಸಾಹಸ ಮಾಡಿದ ಬಳಿಕವೂ ಬದುಕಿದ್ದರೆ ಮನೆಗೆ ಬಾ...ನಿನ್ನನ್ನು ನಾನು ಸಾಯಿಸುತ್ತೇನೆ" ಎಂದು ಬುಸುಗುಟ್ಟಿದ್ದಾರೆ.

ಇದರ ಜತೆಗೆ ದೇವರೇ ನನ್ನನ್ನು ಕಾಪಾಡು ಎಂಬ ಹ್ಯಾಶ್ ಟ್ಯಾಗ್ ಸಹ ಹಾಕಿದ್ದಾರೆ. ಟ್ವಿಂಕಲ್ ಟ್ವೀಟ್‌ಗೆ ಅಕ್ಷಯ್ ಪ್ರತಿಕ್ರಿಯಿಸುತ್ತಾ, "ಈಗ ನನಗೂ ಈ ವಿಚಾರವಾಗಿ ಭಯವಾಗುತ್ತಿದೆ" ಎಂದು ಪತ್ನಿಗೆ ಟಾಂಗ್ ನೀಡಿದ್ದಾರೆ.

https://twitter.com/akshaykumar/status/1102925544415477760

ಈ ಸಾಹಸಭರಿತ ಘಟನೆ ಬಗ್ಗೆ ಅಕ್ಷಯ್ ಕುಮಾರ್ ಇನ್ನಷ್ಟು ಮಾಹಿತಿಯನ್ನೂ ನೀಡಿದ್ದಾರೆ. "ಆ್ಯಕ್ಷನ್ ನನ್ನ ರಕ್ತದಲ್ಲೇ ಇದೆ. ಮೊದಲು ನಾನು ಸ್ಟಂಟ್‍ಮ್ಯಾನ್. ಆ ಬಳಿಕ ಆಕ್ಟರ್" ಎಂದಿದ್ದಾರೆ. ಆದರೆ ತಾನು ಮಾಡುತ್ತಿರುವ ವೆಬ್ ಸೀರೀಸ್ ಬಗ್ಗೆ ಅಕ್ಷಯ್ ಹೆಚ್ಚಿನ ಮಾಹಿತಿ ನೀಡಿಲ್ಲ. ತನ್ನ ಪುತ್ರ ಆರವ್ ಸೂಚನೆ ಮೇರೆಗೆ ಈ ವೆಬ್‌ ಸೀರೀಸ್‌ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ. ಈ ವೆಬ್ ಸೀರೀಸ್ ಜತೆಗೆ ಅಕ್ಷಯ್ ಕೇಸರಿ, ಸೂರ್ಯವಂಶಿ ಚಿತ್ರಗಳಲ್ಲೂ ಬಿಝಿಯಾಗಿದ್ದಾರೆ. ಮಾರ್ಚ್ 21ರಂದು ಕೇಸರಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ಏನೇ ಆಗಲಿ ಅಕ್ಕಿಯ ಸಾಹಸ ನೋಡಿದ ಮೇಲೆ ರಿಯಲ್ ಆಕ್ಷನ್ ಕಿಂಗ್ ಎನ್ನಿಸುತ್ತದೆ ಅಲ್ಲವೇ?

No comments