ಅತಿರೇಖದ ಅಭಿಮಾನ: ಏರ್ಪೋರ್ಟ್ನಲ್ಲಿ ಪ್ರಭಾಸ್ ಕೆನ್ನೆಗೆ ಬಾರಿಸಿದ ಅಭಿಮಾನಿ
ಸೆಲೆಬ್ರಿಟಿ ಸ್ಟಾರ್ಗಳಿಗೆ ಆಗಾಗ ಕ್ರೇಜಿ ಅಭಿಮಾನಿಗಳು ಎದುರಾಗುತ್ತಾರೆ. ಅಂತಹವರನ್ನು ಕಂಡಾಗ ಅವರಿಗೆ ಅಳಬೇಕೋ, ನಗ ಬೇಕೋ ಅಂತ ಅರ್ಥವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ಗೂ ಎದುರಾಗಿದ್ದೂ ಇಂತಹದ್ದೇ ಪರಿಸ್ಥಿತಿ. ಅದೂ ಸಹ ಓರ್ವ ಕ್ರೇಜಿ ಅಭಿಮಾನಿಯಿಂದಾಗಿ.ಸಿನಿಮಾ ತಾರೆಯರಿಗೆ ಕೆಲವೊಮ್ಮೆ ಎಂಥಾ ಕ್ರೇಜಿ ಅಭಿಮಾನಿಗಳು ಎದುರಾಗುತ್ತಾರೆ ಎಂದರೆ ಆಗ ಅವರಿಗೆ ಏನು ಮಾಡಬೇಕು ಎಂದೂ ಅರ್ಥವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೆ ಕೆಲವೊಮ್ಮೆ ಅಭಿಮಾನಿಗಳು ತೋರಿಸುವ ಅತ್ಯುತ್ಸಾಹವನ್ನು ಕಂಡು ಸೆಲೆಬ್ರಿಟಿಗಳೇ ನಕ್ಕು ಸುಮ್ಮನಾಗುತ್ತಾರೆ. ಈಗ ಇಂತಹದ್ದೇ ಪರಿಸ್ಥಿತಿ ನಟ ಪ್ರಭಾಸ್ಗೆ ಎದುರಾಗಿದೆ.
ಹೌದು, ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಪ್ರಭಾಸ್ರನ್ನು ಕಂಡ ಅಭಿಮಾನಿಯೊಬ್ಬರು ಖುಷಿ ತಡೆಯಲಾಗದೆ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಬಂದಿದ್ದಾರೆ. ಆಗ ಪ್ರಭಾಸ್ ಜತೆ ಫೋಟೋ ತೆಗೆದುಕೊಂಡ ಆ ಹುಡುಗಿ ಖಷಿಯಲ್ಲಿ, ಪ್ರಭಾಸ್ ಕೆನ್ನೆಗೆ ಬಾರಿಸಿದ್ದಾರೆ.ಹುಡುಗಿ ಪ್ರಭಾಸ್ ಕೆನ್ನೆ ಬಾರಿದ್ದನ್ನು ಒಮ್ಮೆ ಪ್ರಭಾಸ್ಗೆ ನಂಬಲಾಗಲಿಲ್ಲ. ನಂತರ ಅವರೇ ನಕ್ಕು ಸುಮ್ಮನಾಗಿದ್ದಾರೆ. ನಂತರ ಆ ಹುಡುಗಿಯ ಸ್ನೇಹಿತರೊಂದಿಗೂ ಪ್ರಭಾಸ್ ಫೋಟೋಗೆ ಪೋಸ್ ನೀಡಿ ಸುಮ್ಮನಾಗಿದ್ದಾರೆ.ಸದ್ಯ ಪ್ರಭಾಸ್ 'ಸಾಹೋ' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಈ ಸಿನಿಮಾ ಮೂಲಕ ಮತ್ತೊಮ್ಮೆ ಪ್ರಭಾಸ್ ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸಲಿದ್ದಾರೆ ಎನ್ನುತ್ತಿದ್ದಾರೆ ಸಿನಿ ಪಂಡಿತರು.
https://www.instagram.com/p/BumBLdvnEqw/?utm_source=ig_embed

Post a Comment