Header Ads

test

ರಾಹುಲ್ ಗಾಂಧಿ ಜತೆಗೆ ಡೇಟಿಂಗ್ ಮಾಡಬೇಕೆಂದಿದೆ: ಕರೀನಾ ಕಪೂರ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಬಾಲಿವುಡ್ ಸ್ಟಾರ್ ಹೀರೋಯಿನ್ ಕರೀನಾ ಕಪೂರ್‌ಗೆ ಮನಸಾಗಿದೆ. ರಾಹುಲ್ ಜತೆಗೆ ಡೇಟಿಂಗ್‍ಗೆ ಹೋಗಬೇಕೆಂದಿದೆ ಎಂದು ಕರೀನಾ ಹೇಳಿದ್ದಾರೆ. ಈ ವಿಷಯವನ್ನು ಸ್ವತಃ ಕರೀನಾ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.


ಇತ್ತೀಚೆಗೆ ಸಂದರ್ಶನದಲ್ಲಿ ಪಾಲ್ಗೊಂಡ ಅವರು ತನ್ನ ಜೀವನದ ಕೆಲವು ಮುಖ್ಯ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಆಕೆಗೆ ಕುತೂಹಲಕರ ಪ್ರಶ್ನೆ ನಿರೂಪಕರಿಂದ ಎದುರಾಯಿತು. ನೀವು ಯಾರೊಂದಿಗೆ ಡೆಟ್‌ಗೆ ಹೋಗಬೇಕು ಎಂದಿದ್ದೀರಿ? ಎಂಬ ಪ್ರಶ್ನೆಗೆ "ಈ ಉತ್ತರ ಕೊಡಬಹುದೋ ಕೊಡಬಾರದೋ ನನಗೆ ಗೊತ್ತಿಲ್ಲ.. ಆದರೂ ಹೇಳುತ್ತೇನೆ ಎಂದು ಥಟ್ಟನೆ ರಾಹುಲ್" ಎಂದು ಹೆಸರು ಹೇಳಿದರು.

ಅಷ್ಟೇ ಅಲ್ಲ ರಾಹುಲ್ ಗಾಂಧಿ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಜತೆಗೆ ಡೇಟ್‌ಗೆ ಹೋಗಬೇಕೆಂದು ಉತ್ತರ ನೀಡಿದ್ದನ್ನು ಕೇಳಿ ನಿರೂಪಕ ಶಾಕ್ ಆಗಿದ್ದಾನೆ. ಸೈಫ್ ಆಲಿ ಖಾನ್‌ರನ್ನು ಪ್ರೀತಿಸಿ ಮದುವೆಯಾಗಿದ್ದು ಗೊತ್ತೇ ಇದೆ. ಇವರ ಪ್ರೀತಿಯ ದ್ಯೋತಕವಾಗಿ ಜನಿಸಿರುವ ಮಗುವಿಗೆ ತೈಮೂರ್ ಆಲಿ ಖಾನ್ ಎಂದು ಹೆಸರಿಟ್ಟಿದ್ದಾರೆ. ಅವನು ಕುಳಿತರೆ, ನಿಂತರೆ ಸುದ್ದಿ ಎಂಬಂತಾಗಿದೆ.

ದಬಾಂಗ್‌ 2 ರಲ್ಲಿ ಸ್ಪೆಷಲ್‌ ಸಾಂಗ್‌ಗೆ ಡಾನ್ಸ್‌ ಮಾಡಿದ್ದ ಕರೀನಾ ಕಪೂರ್‌ ಅವರೇ ದಬಾಂಗ್‌ 3 ಯಲ್ಲಿ ಇರಲಿದ್ದಾರೆ. ಇದರ ಪ್ರಿಕ್ವೆಲ್‌ನಲ್ಲಿ ಮಲೈಕಾ ಅರೋರಾ ಮಾಡಿದ್ದ ಮುನ್ನಿ ಬದ್ನಾಮ್‌ ಹುಯಿ ಡಾರ್ಲಿಂಗ್‌ ತೇರೆ ಲಿಯೆ ಎಂಬ ಸ್ಪೆಷಲ್‌ ಸಾಂಗ್‌ ಕೂಡಾ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು.

ದಬಾಂಗ್‌ 2 ರಲ್ಲಿ ಕರೀನಾ ಕಪೂರ್‌ ಮೇರೆ ಫೋಟೊ ಕೊ ಚಿಪ್ಕಾಲೆ ಸಯ್ಯಾ... ಎಂಬ ಮಾದಕವಾದ ಸ್ಪೆಷಲ್‌ ಸಾಂಗ್‌ಗೆ ಮಾಡಿದ ನೃತ್ಯವೂ ಸೂಪರ್‌ಹಿಟ್‌ ಆಗಿತ್ತು. ದಬಾಂಗ್‌ 3 ರ ಐಟಂ ಸಾಂಗ್‌ ಬಗ್ಗೆ ಈಗಾಗಲೇ ಕುತೂಹಲ ಕೆರಳಿದೆ. ಚಿತ್ರತಂಡ ಈ ಬಾರಿಯೂ ಕರೀನಾ ಕಪೂರ್‌ ಹೆಸರನ್ನೇ ಈ ಹಾಡಿಗೆ ಅಂತಿಮಗೊಳಿಸಿದ್ದಾರೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ಸ್ಪೆಷಲ್‌ ಸಾಂಗ್‌ ಇರಲಿದೆ ಎಂದು ಹೇಳಲಾಗುತ್ತಿದೆ. ಕರೀನಾ ಕಪೂರ್‌ ಸದ್ಯಕ್ಕೆ ಗುಡ್‌ ನ್ಯೂಸ್‌ ಸಿನಿಮಾ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ.

ಕರೀನಾ ಕಪೂರ್ ರಾಜಕೀಯಕ್ಕೂ ಅಡಿಯಿಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಈ ಬಗ್ಗೆ ಸ್ಪಷ್ಟಪಡಿಸಿರುವ ಕರೀನಾ, ಇದು ವದಂತಿ ಅಷ್ಟೇ. ಈ ಬಗ್ಗೆ ನನ್ನನ್ನು ಯಾರು ಕೂಡ ಸಂಪರ್ಕಿಸಿಯೂ ಇಲ್ಲ. ನನ್ನ ಆದ್ಯತೆ ಕೇವಲ ಸಿನಿಮಾ ಎಂದವರು ಹೇಳಿದ್ದಾರೆ.

No comments