ಪ್ರಣಯ್-ಅಮೃತಾ ಪ್ರೀತಿಯ ಕುಡಿಗೆ ನಾಮಕರಣ: ಹೆಸರೇನು ಗೊತ್ತೆ?
ವರ್ಲ್ಡ್ ಕನ್ನಡಿಗ ವರದಿ, ಮಾ.3: ಕಳೆದ ವರ್ಷ (2018) ಸೆಪ್ಟಂಬರ್ 14ರಂದು ತನ್ನ ಪತ್ನಿ ಹಾಗೂ ತಾಯಿಯ ಎದುರಲ್ಲೇ, ಪತ್ನಿಯ ತಂದೆಯ ಕಡೆಯವರಿಂದ, ಬರ್ಬರವಾಗಿ ಹತ್ಯೆಗೆ ಒಳಗಾದ ಪ್ರಣಯ್ ಪತ್ನಿ ಅಮೃತಾ ಇದೇ ವರ್ಷ ಜನವರಿ ತಿಂಗಳಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಮೃತಾ ತನ್ನ ಮಗುವನ್ನು ಪತಿಯ ಪೋಟೋ ಎದುರಲ್ಲೇ ಎತ್ತಿಕೊಂಡ ‘ಮೈ ಪಾದರ್ ಇಸ್ ಮೈ ಹೀರೋ ಫಾರ್ಎವರ್’ ಎಂದು ಬರೆಸಿಕೊಂಡ ಪೋಸ್ಟರ್ ಹಾಕಿಸಿದ್ದರು. ಆದರೀಗ ಅದೇ ಮಗುವಿಗೆ ನಾಮಕರಣ ಮಾಡಲಾಗಿದೆ. ಪ್ರಣಯ್ ಮಗುವಿನ ನಾಮಕರಣ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.ಅಮೃತಾ ತನ್ನ ಮುದ್ದಾದ ಮಗುವಿಗೆ ‘ನಿಹಾನ್ ಪ್ರಣಯ್’ ಎಂದು ನಾಮಕರಣ ಮಾಡಿದ್ದಾರೆ.
ಅಮೃತಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆಕೆಯ ಗರ್ಭವನ್ನು ತೆಗಿಸುವಂತೆ ಬಹಳಷ್ಟು ಒತ್ತಡಗಳು ಅವರ ಮೇಲೆ ಬಂದಿದ್ದವು. ಆದರೆ ಇದು ಯಾವುದಕ್ಕೂ ಜಗ್ಗದ ಅಮೃತಾ ತನ್ನ ಹಾಗೂ ಪ್ರಣಯ್ ಪ್ರೀತಿಯ ಸಂಕೇತಾವಾದ ಮಗುವನ್ನು ಹಾಗೆ ಉಳಿಸಿಕೊಂಡು ನಿಜವಾದ ಪ್ರೀತಿ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ.

Post a Comment