Header Ads

test

ಭಲೇ ತಾತಾ... 86 ವರ್ಷಗಳಲ್ಲಿ 4 ಲಕ್ಷ ಕಿ.ಮೀ ಸೈಕಲಿಂಗ್, 20 ಸಲ ಹಿಮಾಲಯ ಸುತ್ತಿ ಬಂದಿದ್ದಾರೆ !

ಕೆಲವರು ಒಂದು ಅರ್ಧಗಂಟೆ ಸೈಕಲ್ ತುಳಿದರೆ ಸುಸ್ತಾಗುತ್ತಾರೆ. ಆದರೆ ಇವರು ಒಟ್ಟು 4 ಲಕ್ಷ ಕಿ.ಮೀ ಸೈಕ್ಲಿಂಗ್ ಮಾಡಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಹೌದು ನಿಮಗೆ ನಂಬಲಿಕ್ಕೆ ಆಗುತ್ತಿಲ್ಲ ಅಲ್ಲವೇ..? ಹಾಗಿದ್ದರೆ ಇವರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಲೇಬೇಕು. ಯಾಕೆಂದರೆ, ಅವರು ಕೇವಲ ಸೈಕ್ಲಿಂಗ್ ಮಾತ್ರವಷ್ಟೇ ಅಲ್ಲ.. 20 ಸಲ ಹಿಮಾಲಯವನ್ನೂ ಸುತ್ತಿದ್ದಾರೆ. ಅದೂ ಸಹ ಕಾಲ್ನಡಿಗೆಯಲ್ಲೇ...


ಇವರ ಹೆಸರು ಬೆಲಹಳ್ಳಿ ರಘುನಾಥ್ ಜನಾರ್ಧನ್. ವಯಸ್ಸು 86 ವರ್ಷ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುತ್ತಾರೆ. ಅವರಿಗೆ ಸೈಕ್ಲಿಂಗ್, ಟ್ರೆಕ್ಕಿಂಗ್ ಎಂದರೆ ಪ್ರಾಣ. ಆದರೆ ಅವರಿಗೆ ಮೂರ್ಛೆ ರೋಗ ಇದೆ. ಆ ಖಾಯಿಲೆಯೇ ಅವರಲ್ಲಿ ಅಡಗಿದ್ದ ವ್ಯಕ್ತಿಯನ್ನು ಹೊರಗೆ ತಂದಿತು.

58 ವರ್ಷಗಳ ವಯಸ್ಸಲ್ಲಿ ಮೂರ್ಛೆ ರೋಗಕ್ಕೆ ತುತ್ತಾದ ಜನಾರ್ಧನ್... ನಿತ್ಯ ಧ್ಯಾನದಿಂದ ಅದನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ. ಆದರೆ ಅದು ಸಾಧ್ಯವಾಗಲಿಲ್ಲ. ಒಂದು ದಿನ ಅವರು ನಡಿಗೆ ಆರಂಭಿಸಿ ಬಹಳ ದೂರ ಪ್ರಯಾಣಿಸಿದರು. ಅಂದಿನಿಂದ ಅವರಿಗೆ ಮೂರ್ಛೆ ಬರಲಿಲ್ಲ. ಇದರಿಂದ ನಿತ್ಯ ನಡಿಗೆಯನ್ನು ಅಭ್ಯಾಸ ಮಾಡಿಕೊಂಡರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, "ನಾನು 64 ವರ್ಷಗಳ ವಯಸ್ಸಲ್ಲಿ ಸೈಕ್ಲಿಂಗ್ ಆರಂಭಿಸಿದೆ. ಅಂದಿನಿಂದ ಸುಮಾರು 265 ತಿಂಗಳು ಸೈಕಲ್ ತುಳಿಯುತ್ತಲೇ ಇದ್ದಾನು. ಆ ರೀತಿ 4 ಲಕ್ಷ ಕಿ.ಮೀಗೂ ಅಧಿಕ ಸೈಕಲ್ ಹೊಡೆದಿದ್ದೇನೆ. ಇದು ಭೂಮಿಯಿಂದ ಚಂದ್ರನ ಆಚೆಕಡೆ ವರೆಗೂ ಇರುವ ದೂರಕ್ಕೆ ಸಮಾನ. ನನ್ನಲ್ಲಿ ಆತ್ಮವಿಶ್ವಾಸ ಬೆಳೆದ ಬಳಿಕ 68ರಲ್ಲಿ ಟ್ರೆಕ್ಕಿಂಗ್ ಮಾಡಲು ಆರಂಭಿಸಿದೆ. ಇದುವರೆಗೆ 20 ಸಲ ಹಿಮಾಲಯಗಳಲ್ಲಿ ಟ್ರೆಕ್ಕಿಂಗ್ ಮಾಡಿದ್ದೇನೆ. ಮೌಂಟ್ ಕೈಲಾಸ ಪರ್ವತವನ್ನು ಸಹ ಸುತ್ತಿ ಬಂದಿದ್ದೇನೆ" ಎನ್ನುತ್ತಾರೆ. 

No comments