Header Ads

test

ಒಂದು ಗ್ಲಾಸ್ ನೀರು ಕೊಟ್ಟಿದ್ದಕ್ಕೆ, 7 ಲಕ್ಷ ರುಪಾಯಿ ಟಿಪ್ಸ್! ಇಷ್ಟಕ್ಕೂ ವಿಷಯ ಗೊತ್ತಾದರೆ ಶಾಕ್ ಆಗ್ತೀರ

ವಿದೇಶಗಳಲ್ಲಿ ಇರುವ ರೆಸ್ಟೋರೆಂಟ್‌ಗಳಲ್ಲಿ ತಿನ್ನಲು ಬಂದ ಜನರಿಗೆ ವೇಯ್ಟರ್‌ಗಳು ಫುಡ್ ಸರ್ವ್ ಮಾಡಲು ಅಥವಾ ಅವರಿಗೆ ಬೇಕಾದ ಅಡುಗೆ, ಡ್ರಿಂಕ್ಸ್ ತಂದು ಸರ್ವ್ ಮಾಡಿದರೆ ಅವರಿಗೆ ಇಷ್ಟಬಂದ ಮೊತ್ತದಲ್ಲಿ ಬಹುಮಾನವಾಗಿ ಟಿಪ್ ನೀಡುತ್ತಾರೆ. ನಮ್ಮ ದೇಶದಲ್ಲಿ 50, 100 ರೂಪಾಯಿ ಅಬ್ಬಬ್ಬಾ ಎಂದರೆ 500 ರೂಪಾಯಿ ಟಿಪ್ಸ್ ನೀಡಬಹುದು. ಆದರೆ ಯುಎಸ್‌ನಲ್ಲಿನ ನಾರ್ತ್ ಕರೋಲಿನಾ ಎಂಬ ಸ್ಟೇಟ್‌ನಲ್ಲಿನ ಒಂದು ರೆಸ್ಟೋರೆಂಟ್‌ನಲ್ಲಿ ಒಂದು ಲೋಟ ನೀರು ತಂದುಕೊಟ್ಟಿದ್ದಕ್ಕೆ 7 ಲಕ್ಷ ರೂಪಾಯಿಗಳನ್ನು ಟಿಪ್ ಆಗಿ ನೀಡಿದ. ಇಷ್ಟಕ್ಕೂ ಕಥೆ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಓದಲೇಬೇಕು ನೀವು.


ಅಮೆರಿಕಾದಲ್ಲಿನ ಓರ್ವ ಯುವತಿ ಒಂದು ವರ್ಷ ಸಂಪಾದಿಸಿದರೂ ಬಾರದ ಹಣ ಒಂದು ನಿಮಿಷದಲ್ಲಿ ಸಂಪಾದಿಸಿದಳು. ಅಮೆರಿಕಾದಲ್ಲಿನ ಅಲೈನಾ ಎಂಬ ಯುವತಿ ಯೂನಿವರ್ಸಿಟಿಯೊಂದರಲ್ಲಿ ಓದುತ್ತಿದ್ದಾರೆ. ತನ್ನ ಟ್ಯೂಷನ್ ಫೀಜು ಸಂಪಾದಿಸಲು ’ಸೂಪ್ ಡಾಗ್ಸ್’ ಎಂಬ ರೆಸ್ಟೋರೆಂಟ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಳು. ಒಂದು ದಿನ ಎಂದಿನಂತೆ ತನ್ನ ಕ್ಲಾಸ್ ಮುಗಿದ ಬಳಿಕ ರೆಸ್ಟೋರೆಂಟ್‌ಗೆ ಬಂದು ಕಸ್ಟಮರ್ಸ್‌ಗೆ ಸರ್ವ್ ಮಾಡುತ್ತಾ ಕೆಲಸದಲ್ಲಿ ಮುಳುಗಿದ್ದಳು.

ನಿತ್ಯ ಆ ಹೋಟೆಲ್‌ಗೆ ಬಂದ ಅದೆಷ್ಟೋ ಮಂದಿ ಕಸ್ಟಮರ್ಸ್ ಆಕೆಗೆ ಟಿಪ್ ಆಗಿ ನೂರು ಇನ್ನೂರು ಕೊಡುತ್ತಿದ್ದರು. ಆ ಹಣವನ್ನು ಬಳಸಿಕೊಳ್ಳುತ್ತಿದ್ದಳು. ಆದರೆ ಎಂದಿನಂತೆ ಒಂದು ದಿನ ಆ ಹೋಟೆಲ್‍ಗೆ ಒಬ್ಬಾತ ಬಂದು ನೀರು ಆರ್ಡರ್ ಮಾಡಿದ. ಆ ಯುವತಿ ಕೂಡಲೆ ಹೋಗಿ ಒಂದು ಗ್ಲಾಸ್‌ನಲ್ಲಿ ನೀರು ತೆಗೆದುಕೊಂಡು ಆ ಟೇಬಲ್‌ಗೆ ಸರ್ವ್ ಮಾಡಿದಳು. ಆತ ಆ ವಾಟರ್ ಕುಡಿದು ಅಲ್ಲಿಂದ ಹೋಗುತ್ತಾ ಒಂದು ಹಣದ ಕಂತೆಯನ್ನು, ಒಂದು ಲೆಟರನ್ನು ಇಟ್ಟ.

ಸ್ವಲ್ಪ ಹೊತ್ತಿಗೆ ಆ ಯುವತಿ ಟೇಬಲ್ ಕ್ಲೀನ್ ಮಾಡಲು ಬಂದು ಆ ಟೇಬಲ್ ಮೇಲಿನ ಪತ್ರ ಮತ್ತು ನೋಟಿನ ಕಂತೆ ನೋಡಿದ ಕೂಡಲೆ ಶಾಕ್ ಆದಳು. ಆ ಲೆಟರ್ ಓಪನ್ ಮಾಡಿ ನೋಡಿದರೆ ಅದರಲ್ಲಿ "ನಾನು ದಾಹದಿಂದ ಇದ್ದಾಗ ಒಳ್ಳೆಯ ರುಚಿಕರವಾದ ನೀರು ನೀಡಿದ್ದಕ್ಕೆ ಥ್ಯಾಂಕ್ಸ್" ಎಂದು ಬರೆದಿದ್ದು. ಆ ಹಣದ ಕಟ್ಟನ್ನು ಲೆಕ್ಕ ಹಾಕಿದಾಗ 10 ಸಾವಿರ ಡಾಲರ್ ಇತ್ತು. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 7 ಲಕ್ಷ ರೂಪಾಯಿ. ಇದರಿಂದ ಅಲೈನಾ ಇನ್ನಷ್ಟು ಚಕಿತಳಾದಳು. ಆತನಿಗಾಗಿ ನೋಡುತ್ತಿದ್ದಾಗ ಮತ್ತೆ ರೆಸ್ಟೋರೆಂಟ್‍ಗೆ ಬಂದು ಆಕೆಗೆ ಒಂದು ಹಗ್ ಕೊಟ್ಟು ವಿಶ್ ಮಾಡಿ ನಗುತ್ತಾ ಹೊರಟು ಹೋದ. ಆತ ಬೇರಾರು ಅಲ್ಲ ಯೂಟ್ಯೂಬ್‌ನಲ್ಲಿ ಮಿಸ್ಟರ್ ಬೆಸ್ಟ್ ಆಗಿ ಗುರುತಿಸಿಕೊಂಡಿರುವ ಜಿಮ್ಮಿ ಡೊನಾಲ್ಡ್‌ಸನ್. ಬಳಿಕ ತನಗೆ ಟಿಪ್ ರೂಪದಲ್ಲಿ ಬಂದ 10 ಸಾವಿರ ಡಾಲರ್‌ಗಳನ್ನು ತೆಗೆದುಕೊಳ್ಳಲು ಇಷ್ಟವಿಲ್ಲದೆ ಸ್ವಲ್ಪ ಭಾಗವನ್ನು ತನ್ನೊಂದಿಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಹಂಚಿದ್ದಾಳೆ.

No comments