Header Ads

test

ಗ್ರಾಂ ಚೇಳಿನ ವಿಷ ರೂ.7,30,000..!! ಯಾವುದಕ್ಕೆ ಬಳಸುತ್ತಾರೆ ಗೊತ್ತಾ... ಶಾಕ್ ಆಗ್ತೀರ..!

ಅಬ್ಬಬಾ ಬಂಗಾರಕ್ಕಿಂತ ದುಬಾರಿ ಅನ್ನಿಸುತ್ತದೆ. ಇಷ್ಟಕ್ಕೂ ಇದನ್ನು ಯಾವುದಕ್ಕೆ ಬಳಸುತ್ತಾರೆ? ಆದರೂ ಚೇಳು ಕಡಿದರೆ ವಿಷ ಏರಿ ಸಾಯುತ್ತಾರೆ ಎನ್ನುತ್ತಾರೆ. ಆದರೆ ಇಲ್ಲೇನು ವಿಷಕ್ಕೆ ಇಷ್ಟೊಂದು ಬೆಲೆ... ಕೆಲವು ಚೇಳುಗಳು ಕಡಿದರೆ ಆ ವಿಷ ಮನುಷ್ಯನ ರಕ್ತಕ್ಕೆ ಸೇರಿ ಕ್ಷಣಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾನೆ ಎಂಬುದು ನಿಜ. ಆದರೆ ಹಾಗೆಂದು ಎಲ್ಲಾ ಚೇಳುಗಳು ಪ್ರಾಣ ತೆಗೆಯಲ್ಲ. ಕೆಲವು ಕಚ್ಚಿದರೆ ನೋವಾಗುತ್ತದೆ. ವೈದ್ಯರ ಬಳಿಗೆ ಹೋದರೆ ಔಷಧಿ ನೀಡುತ್ತಾರೆ. ಒಂದೆರಡು ದಿನಗಳಲ್ಲಿ ಕಡೆಮೆಯಾಗುತ್ತದೆ. ಕೆಲವು ವಿಷಪೂರಿತ ಚೇಳುಗಳ ವಿಷವನ್ನು ಮನುಷ್ಯನಿಗೆ ಬರುವ ಕೆಲವು ರೋಗಗಳನ್ನು ಗುಣಪಡಿಸಲು ಉಪಯೋಗಿದರೆ ಒಳ್ಳೆಯದೆಂದು ಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಇದರಿಂದ ಚೇಳಿನ ವಿಷಕ್ಕೆ ಭಾರಿ ಬೇಡಿಕೆ ಬಂದಿದೆ.


ಒಂದು ಗ್ರಾಂ ವಿಷದ ಬೆಲೆ ರೂ.7,30000 ಇದ್ದರೆ... ಲೀಟರ್ ವಿಷದ ಬೆಲೆ ರೂ.73 ಕೋಟಿ ರೂಪಾಯಿವರೆಗೂ ಇದೆ. ಹಾಗಾಗಿಯೇ ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ವಿಷವಾಗಿ ಚೇಳಿನ ವಿಷ ಗುರುತಿಸಿಕೊಂಡಿದೆ. ಚೇಳಿನ ವಿಷದಲ್ಲಿ ಸಂಧಿನೋವನ್ನು ಗುಣಪಡಿಸಬಹುದು ಎಂದು ಅಮೆರಿಕಾದಲ್ಲಿನ ಬೆಲಾರ್ ಕಾಲೇಜ್ ಆಫ್ ಮೆಡಿಸಿನ್ ನಿರ್ವಹಿಸಿದ ಸಂಶೋಧನೆಯಲ್ಲಿ ಗೊತ್ತಾಗಿದೆ. ಒಟ್ಟು 13 ಲಕ್ಷ ಮಂದಿ ಮೇಲೆ ಈ ಔಷಧಿಯನ್ನು ಪ್ರಯೋಗಿಸಿದರು. ಅವರೆಲ್ಲರಿಗೂ ಸಂಧಿ ನೋವಿನಿಂದ ಉಪಶಮನ ಲಭಿಸಿತು. ಚೇಳಿನ ವಿಷದಲ್ಲಿ ಇರುವ ಕಾಂಪೋನೆಂಟ್ಸ್‌ನಿಂದ ಇದು ಸಾಧ್ಯವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನೋವುಗಳನ್ನು ಗುಣಪಡಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

No comments