Header Ads

test

50 ಮಂದಿಗೆ ಅಕ್ರಮವಾಗಿ ತಂದೆಯಾದ ಡಾಕ್ಟರ್... 40 ವರ್ಷಗಳ ಬಳಿಕ ವಿಷಯ ಬಹಿರಂಗವಾಗಿ ಅರೆಸ್ಟ್!!

ಸಂತಾನ ಇಲ್ಲದ ಮಹಿಳೆಯರಿಗೆ ಕೆಲ ಕಾಲದಿಂದ ಮುಂದುವರೆಯುತ್ತಿರುವ ಪದ್ಧತಿ ವೀರ್ಯದಾನ, ಕೃತಕ ಗರ್ಭಧಾರಣೆ, ಪುರುಷರಲ್ಲಿ ವೀರ್ಯ ಕಡಿಮೆ ಪ್ರಮಾಣದಲ್ಲಿ ಇರುವ ಮಹಿಳೆಯರು ತಾಯಿಯಾಗದ ಸಂದರ್ಭದಲ್ಲಿ ವೀರ್ಯ ದಾನಿಗಳನ್ನು ಹುಡುಕುತ್ತಾರೆ. ವೀರ್ಯ ದಾನಿಗಳ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಆ ವೀರ್ಯ ಯಾರದ್ದು ಎಂದು ಗೊತ್ತಾಗದೆ ವೈದ್ಯರು ಮಹಿಳೆಯರಿಗೆ ನೀಡುತ್ತಾರೆ. ತಮ್ಮ ವೀರ್ಯ ಯಾರಿಗೆ ನೀಡಿದ್ದೇವೆ ಎಂಬುದನ್ನು ವೈದ್ಯರು ಸಹ ಪುರುಷರಿಗೆ ತಿಳಿಸಲ್ಲ. ದೊಡ್ಡ ಪ್ರಮಾಣದಲ್ಲಿ ಈ ವ್ಯವಹಾರಗಳು ನಡೆಯುತ್ತಿರುತ್ತವೆ. ಆದರೆ ಇದೆಲ್ಲಾ ರಹಸ್ಯವಾಗಿ ನಡೆದು ಹೋಗುತ್ತದೆ. ವಿದೇಶಗಳಲ್ಲಿ ಇದು ತುಂಬಾ ಜಾಸ್ತಿ ಇರುತ್ತದೆ.



ವೀರ್ಯ ದಾನ ಎಂಬುದು ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 40, 50 ವರ್ಷಗಳಿಂದ ಮುಂದುವರೆಯುತ್ತಾ ಬಂದಿದೆ. ಅಮೆರಿಕಾದಲ್ಲಿನ ಇಂಡಿಯಾನಾ ಎಂಬ ಪ್ರದೇಶದಲ್ಲಿ ಓರ್ವ ವೈದ್ಯರಿದ್ದಾರೆ. ಅವರ ಬಳಿಗೆ ಬಂದ ಸಂತಾನಹೀನ ಮಹಿಳೆಯರಿಗೆ ವೀರ್ಯವನ್ನು ಇಂಜೆಕ್ಟ್ ಮಾಡುವ ಮೂಲಕ ಅವರಿಗೆ ಮಕ್ಕಳ ಸೌಭಾಗ್ಯ ಕಲ್ಪಿಸುತ್ತಿದ್ದ. ನೂರಾರು ಮಂದಿ ಮಹಿಳೆಯರಿಗೆ ಅವರ ವೀರ್ಯದ ಮೂಲಕ ಮಕ್ಕಳಾಗುವಂತೆ ಮಾಡಿದ. ಆದರೆ ಆ ವೀರ್ಯವನ್ನು ಸಂಪೂರ್ಣ ರಹಸ್ಯವಾಗಿ ಬೇರೆಯವರಿಂದ ಪಡೆಯಬೇಕಾಗುತ್ತದೆ. ಆದರೆ ಅವರು ಮಾತ್ರ ತನ್ನ ವೀರ್ಯವನ್ನೇ ಆ ಮಹಿಳೆಯರೆಲ್ಲರಿಗೂ ನೀಡಿದ. 40 ವರ್ಷಗಳಿಂದ ಆ ವ್ಯಕ್ತಿ ಮಾಡುತ್ತಿರುವ ಮೋಸ ಈಗ ಬಯಲಾಗಿದೆ.

ಅಮೆರಿಕಾದಲ್ಲಿನ ಒಂದು ಆನ್‌ಲೈನ್ ಪೋರ್ಟಲ್ ಡಿಎನ್‍ಎಗಳ ಬಗ್ಗೆ ಪ್ರಯೋಗಗಳನ್ನು ನಡೆಸುತ್ತದೆ. ಆ ಸಂದರ್ಭದಲ್ಲಿ 50 ಮಂದಿ ಡಿಎನ್‍ಎಗಳು ಹೊಂದಾಣಿಕೆಯಾಗಿರುವುದು ಎಲ್ಲರನ್ನೂ ಚಕಿತಗೊಳಿಸಿದೆ. ರಕ್ತ ಸಂಬಂಧಿಗಳಲ್ಲಿ ಮಾತ್ರ ಡಿಎನ್‍ಎ ಹೊಂದಾಣಿಕೆಯಾಗುತ್ತದೆ. ಬೇರೆ ಬೇರೆ ಪ್ರದೇಶದ 50 ಮಂದಿಯ ಡಿಎನ್‍ಎಗಳು ಹೊಂದಾಣಿಕೆಯಾಗಿರುವುದು ಸಹ ಅಚ್ಚರಿಗೆ ಕಾರಣವಾಗಿದೆ. ಆ 50 ಮಂದಿ ತಮ್ಮ ಡಿಎನ್‍ಎ ಹೊಂದಾಣಿಕೆಯಾಗಲು ಕಾರಣ ಏನು ಎಂದು ತಿಳಿದುಕೊಳ್ಳಲು ಮುಂದಾದರು.

ತಾವೆಲ್ಲಾ ವೀರ್ಯದಾನದ ಮೂಲಕ ಜನಿಸಿದವರೆಂದು ಅವರಿಗೆ ತಿಳಿಯಿತು. ಆಗಲೇ ಅರ್ಥವಾಗಿದ್ದು. ಅವರೆಲ್ಲರಿಗೂ ಡಾಕ್ಟರ್ ವೀರ್ಯ ದಾನಿ ಎಂದು. ಹಾಗಾಗಿ ಆ 50 ಮಂದಿ ಡಾಕ್ಟರ್ ಬಳಿಗೆ ಅಪ್ಪಾ ಎಂದು ಹೋದರು. ಅವರು ಸಂತೋಷ, ಅಚ್ಚರಿಯಿಂದ ಆ ಮಕ್ಕಳನ್ನೆಲ್ಲಾ ನೋಡುತ್ತಿರಬೇಕಾದರೆ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ. ವೈದ್ಯ ವೃತ್ತಿಗೇ ಕೆಟ್ಟ ಹೆಸರು ತಂದಿದ್ದಾರೆಂದು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಎಷ್ಟು ಮಂದಿಗೆ ಅವರು ವೀರ್ಯ ದಾನ ಮಾಡಿದ್ದಾರೋ, ಆ ಮಕ್ಕಳು ಎಲ್ಲಿದ್ದಾರೆ ಎಂಬ ವಿಷಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆ ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ಇವರ ವೀರ್ಯದಿಂದ ಜನಿಸಿದ ದಾಖಲೆ ಇವರ ಹೆಸರಲ್ಲಿ ದಾಖಲಾಗಿದೆ. ಒಂದು ಕಡೆ ಇವರು ಹೆಮ್ಮೆಯಿಂದ ಇದ್ದರೂ, ಇನ್ನೊಂದು ಕಡೆ ಪ್ರಕರಣಗಳು ಇವರನ್ನು ಕಾಡುತ್ತಿವೆ. ಆ 50 ಮಂದಿ ಮಾತ್ರ ಆತನನ್ನು ಅನಧಿಕೃತವಾಗಿ ತಮ್ಮ ತಂದೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಅವರೆಲ್ಲಾ ವಿವಿಧ ಕ್ಷೇತ್ರಗಳಲ್ಲಿ ಚೆನ್ನಾಗಿ ಸೆಟ್ಲ್ ಆಗಿರುವವರು. 

No comments