Header Ads

test

ಮೊದಲ ಸಲ ವಿಮಾನ ಹತ್ತಿದ 4 ತಿಂಗಳ ಹಸುಗೂವಿನ ವಿನಂತಿ ಸೂಪರ್. ಆ ಮಗುವಿನ ತಾಯಿ ಆಲೋಚನೆಗೆ ಸಾಮಾಜಿಕಮಾಧ್ಯಮದಲ್ಲಿ ಪ್ರಶಂಸೆ

"ನಾನು ವಿಮಾನ ಹತ್ತುತ್ತಿರುವುದು ಇದೇ ಮೊದಲ ಸಲ. ಭಯದಿಂದ ನಾನು ಜೋರಾಗಿ ಅತ್ತರೆ ನೀವು ಡಿಸ್ಟರ್ಬ್ ಆಗಬಹುದು. ಕ್ಷಮಿಸಿ" ಎಂದು ನಾಲು ತಿಂಗಳ ಮಗು ವಿಮಾನದಲ್ಲಿ ಸಹ ಪ್ರಯಾಣಿಕರನ್ನು ವಿನಂತಿಸಿಕೊಂಡಿದೆ. ಇದೇನಿದು? ಹಸುಗೂಸು ಮಾತನಾಡಲು ಸಾಧ್ಯವೇ? ಎಂಬುದೇ ತಾನೆ ನಿಮ್ಮ ಪ್ರಶ್ನೆ. ಅದೂ ನಿಜ. ಆ ವಿನಂತಿ ಮಾಡಿದ್ದು ಆ ಹಸುಗೂಸಿನ ತಾಯಿ ತನ್ನ ಮಗುವಿನ ಅಳು, ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತದೆ ಎಂಬ ಉದ್ದೇಶದಿಂದ ಆ ತಾಯಿ ಮಾಡಿದ ಪ್ರಯತ್ನ ಇದು.


ವಿಮಾನಗಳಲ್ಲಿ ಪುಟ್ಟ ಮಕ್ಕಳ ಅಳು.. ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದರ ಬಗ್ಗೆ ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ದೂರು ನೀಡಿದ ಸಂದರ್ಭಗಳು ಸಾಕಷ್ಟು ಇವೆ. ಈ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ತನ್ನ ನಾಲ್ಕು ತಿಂಗಳ ಮಗು ಹೇಳುತ್ತಿರುವಂತೆ ಒಂದು ಪತ್ರ ಬರೆದರು. ಆ ಪತ್ರದ ಜತೆಗೆ ಕ್ಯಾಂಡಿಗಳು, ಇಯರ್ ಪ್ಲಗ್ಸ್‌ಗಳಿಂದ 200 ಕವರ್‌ಗಳಿಂದ ತಯಾರಿಸಿದರು. ಅವೆಲ್ಲವನ್ನೂ ವಿಮಾನದ ಪ್ರಯಾಣಿಕರಿಗೆಲ್ಲಾ ಹಂಚಿದರು. ಅವನ್ನು ನೋಡಿದ ಪ್ರಯಾಣಿಕರು ಆಕೆಯ ಮುಂಜಾಗ್ರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಶಂಸೆಯ ಮಳೆ ಗರೆದಿದ್ದಾರೆ.

"ಹಲೋ... ನನ್ನ ಹೆಸರು ಜುನ್ವೂ. ನನ್ನ ವಯಸ್ಸು 4 ತಿಂಗಳು. ಈ ದಿನ ಅಮ್ಮನ ಜತೆಗೆ ಅಜ್ಜಿ, ಆಂಟಿಯನ್ನು ನೋಡಲು ಅಮೆರಿಕಾಗೆ ಹೋಗುತ್ತಿದ್ದೇನೆ. ನನ್ನ ಜೀವನದಲ್ಲಿ ವಿಮಾನ ಹತ್ತುತ್ತಿರುವುದು ಇದೇ ಮೊದಲು. ಆದಕಾರಣ ನನಗೆ ತುಂಬಾ ಭಯ, ಗಾಬರಿ ತರಹ ಇದೆ. ಇದರಿಂದ ನಾನು ಅಳಬಹುದು ಅಥವಾ ಕೇಕೆ ಹಾಕಬಹುದು. ನಾನು ನಿಶ್ಯಬ್ದವಾಗಿ ಪ್ರಯಾಣಿಸಲು ಪ್ರಯತ್ನಿಸುತ್ತೇನೆ. ಆದರೆ ಗ್ಯಾರಂಟಿ ಕೊಡಲ್ಲ. ಪ್ಲೀಸ್ ನನ್ನನ್ನು ಕ್ಷಮಿಸಿ. ಅಮ್ಮ ನಿಮಗಾಗಿ ಒಂದು ಚಿಕ್ಕ ’ಗೂಡಿ’ ಬ್ಯಾಗ್ ತಯಾರಿಸಿದ್ದಾಳೆ. ಇದರಲ್ಲಿ ಕ್ಯಾಂಡಿಗಳು, ಇಯರ್ ಪ್ಲಗ್ಸ್ ಇವೆ. ನಾನು ಜೋರಾಗಿ ಅತ್ತರೆ ಅವನ್ನು ಕಿವಿಯಲ್ಲಿ ಇಟ್ಟುಕೊಳ್ಳಿ. ಈ ಪ್ರಯಾಣವನ್ನು ಎಂಜಾಯ್ ಮಾಡಿ. ಥ್ಯಾಂಕ್ಯೂ ಎಂದು ಆ ಮಗುವಿನ ತಾಯಿ ಬರೆದಿದ್ದಾರೆ."

ಈ ಪತ್ರವನ್ನು ಡವೆ ಕರೋನಾ ಎಂಬ ಮಹಿಳೆ ಫೇಸ್‍ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಕೊರಿಯಾದಲ್ಲಿನ ಸಿಯೋಲ್‌ನಿಂದ ಅಮೆರಿಕ‌ದಲ್ಲಿನ ಸ್ಯಾನ್ ಫ್ರಾನ್ಸಿಸ್ಕೋ ಹೋಗುತ್ತಿರುವ ವಿಮಾನದಲ್ಲಿ ಓರ್ವ ಮಹಿಳೆ 200 ಗೂಡಿ ಬ್ಯಾಗ್‌ಗಳನ್ನು ಪ್ರಯಾಣಿಕರಿಗೆ ಹಂಚಿದರು. ಅದರಲ್ಲಿ ಕ್ಯಾಂಡಿಗಳು, ಇಯರ್ ಫ್ಲಗ್ಸ್‌ಗಳು ಇವೆ. ಆಕೆಯ ನಾಲ್ಕು ವರ್ಷದ ಹಸುಗೂಸು ಅತ್ತರೆ ಉಪಯೋಗಕ್ಕೆ ಬರುತ್ತದೆ ಎಂಬ ಉದ್ದೇಶದಿಂದ ಆಕೆ ಈ ಪ್ರಯತ್ನ ಮಾಡಿದರು" ಎಂದಿದ್ದಾರೆ. ಸದ್ಯಕ್ಕೆ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

No comments