Header Ads

test

ಅಮೆಜಾನ್‌ನಲ್ಲಿ ಒಮ್ಮೊಮ್ಮೆ "ಚಿಕ್ಕ ವಸ್ತು" ಖರೀದಿಸಿದರೂ "ದೊಡ್ಡ ಬಾಕ್ಸ್"ನಲ್ಲಿ ಬರುತ್ತದೆ.! ಯಾಕೆ ಗೊತ್ತಾ?4 ಕಾರಣಗಳು ಇವು.!

ಇಂದಿನ ಜಮಾನದಲ್ಲಿ ಆನ್‍ಲೈನ್ ಶಾಪಿಂಗ್ ಹೆಚ್ಚಾಗಿದೆ. ಯಾವುದೇ ಸಣ್ಣಪುಟ ವಸ್ತು ಖರೀದಿಸಬೇಕದರೂ ಬಹಳಷ್ಟು ಮಂದಿ ಆನ್‍ಲೈನ್ ಮೊರೆ ಹೋಗುತ್ತಿದ್ದಾರೆ. ತಮ್ಮ ಅಭಿರುಚಿಗೆ ಅನುಗುಣವಾಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹೊರಗೆ ಓಡಾಡುವ ಕಿರಿಕಿರಿ ಇಲ್ಲದೆ ಮನೆಯಲ್ಲೇ ಕುಳಿತು ಕೇವಲ ಒಂದು ಕ್ಲಿಕ್‌ನಿಂದ ಐಟಂಸ್ ಆರ್ಡರ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಳಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಇ-ಕಾಮರ್ಸ್ ಕಂಪೆನಿಗಳು ಸಹ ಬಹಳ ಅನುಕೂಲವಾಗುವಂತೆ ಡೆಲಿವರಿ ಮಾಡುತ್ತಿವೆ. ಆದರೆ ಡೆಲಿವರಿ ವಿಷಯಕ್ಕೆ ಬಂದರೆ ಮುಖ್ಯವಾಗಿ ಅಮೆಜನ್ ಕಂಪೆನಿ ಮೂಲಕ ನಮಗೆ ಆರ್ಡರ್ ಬಂದಾಗ ನಾವು ಆರ್ಡರ್ ಮಾಡುವ ವಸ್ತುಗಳು ಚಿಕ್ಕದಾಗಿದ್ದರೂ ದೊಡ್ಡ ದೊಡ್ಡ ಬಾಕ್ಸ್‌ಗಳಲ್ಲಿ ಬರುತ್ತವೆ ಅಲ್ಲವೇ. ಇದನ್ನು ಗಮನಿಸಿದ್ದೀರಾ? ಆದರೆ ಈ ರೀತಿ ಯಾಕೆ ಮಾಡುತ್ತಾರೆ ಗೊತ್ತಾ? ಅದನ್ನೇ ಈಗ ನೋಡೋಣ.



ಅಮೆಜಾನ್ ಕಂಪೆನಿ ಚಿಕ್ಕ ವಸ್ತುಗಳನ್ನೂ ಸಹ ದೊಡ್ಡ ಬಾಕ್ಸ್‌ನಲ್ಲಿ ಕಳುಹಿಸಲು ಹಲವು ಕಾರಣಗಳಿವೆ. ಅವು ಏನು ಎಂಬುದನ್ನು ಈಗ ನೋಡೋಣ.....

1. ಇ-ಕಾಮರ್ಸ್‌ನ ಎಲ್ಲಾ ವೆಬ್‌ಸೈಟ್‌ಗಳಲ್ಲಿ ಮಾರುವವರು ಇರುತ್ತಾರೆ. ಅವರನ್ನು ಸೆಲ್ಲರ್ಸ್ ಎಂದು ಕರೆಯುತ್ತಾರೆ ಅಲ್ಲವೇ. ಆದರೆ ಅವರು ತಮ್ಮ ವಸ್ತುಗಳಿಗೆ ಸಂಬಂಧಿಸಿದ ಅಳತೆಗಳು, ಗಾತ್ರವನ್ನು ಆನ್‍ಲೈನ್ ಡಾಟಾಬೇಸ್‌ನಲ್ಲಿ ತಪ್ಪಾಗಿ ಎಂಟರ್ ಮಾಡುತ್ತಾರೆ. ಅಥವಾ ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲ್ಲ. ಇದರಿಂದ ಯಾವ ವಸ್ತುವನ್ನು ಯಾವ ಗಾತ್ರದ ಬಾಕ್ಸ್‌ನಲ್ಲಿ ಹಾಕಬೇಕು ಎಂಬುದು ಆಟೋಮ್ಯಾಟಿಕ್ ಪ್ಯಾಕಿಂಗ್ ಮೆಷಿನ್‌ಗಳಿಗೆ ಗೊತ್ತಾಗಲ್ಲ. ಈ ಕಾರಣದಿಂದಾಗಿ ಚಿಕ್ಕ ವಸ್ತುಗಳು ಸಹ ದೊಡ್ಡ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ.

2. ತಪ್ಪು ಮಾಡುವುದು ಮಾನವ ಸಹಜ. ಆದರೆ ಮನುಷ್ಯರಷ್ಟೇ ಅಲ್ಲ. ರೋಬೋಗಳು ಸಹ ತಪ್ಪು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ರೋಬೋಟಿಕ್ ಟೆಕ್ನಾಲಜಿಯಿಂದ ಕೆಲಸ ಮಾಡುವ ಆಟೋಮೇಟೆಡ್ ಪ್ಯಾಕಿಂಗ್ ಮೆಷಿನ್‌ಗಳು ಸಹ ಕೆಲವು ಸಲ ತಪ್ಪು ಮಾಡುತ್ತವೆ. ಚಿಕ್ಕ ವಸ್ತುವಿಗೂ ಸಹ ದೊಡ್ಡ ಬಾಕ್ಸನ್ನು ಆಯ್ಕೆ ಮಾಡುತ್ತವೆ. ಇದರಿಂದ ಆಯಾ ವಸ್ತುಗಳು ದೊಡ್ಡ ಬಾಕ್ಸ್‌ಗಳಲ್ಲಿ ಆಟೋಮ್ಯಾಟಿಕ್ ಆಗಿ ಪ್ಯಾಕ್ ಆಗುತ್ತವೆ. ಆ ರೀತಿ ಪ್ಯಾಕ್ ಆದಂತಹವನ್ನು ಮತ್ತೆ ಓಪನ್ ಮಾಡಲು ಆಗಲ್ಲ. ಹಾಗಾಗಿ ಅವನ್ನು ಹಾಗೆಯೇ ಕಳುಹಿಸುತ್ತಾರೆ.

3. ಇ-ಕಾಮರ್ಸ್ ಕಂಪೆನಿ ಐಟಂಸನ್ನು ಡೆಲಿವರಿ ಮಾಡಲು ಉಪಯೋಗಿಸುವ ಬಾಕ್ಸ್‌ಗಳನ್ನು ಹೊರಗಿನ ಕಂಪೆನಿಗಳಿಗೆ ಕಾಂಟ್ರಾಕ್ಟ್ ಕೊಟ್ಟು ತರಿಸಿಕೊಳ್ಳುತ್ತಾರೆ. ಆದರೆ ಇಂದು ಚಿಕ್ಕ ಬಾಕ್ಸ್‌ಗಳ ಉತ್ಪಾದನೆ ಅಷ್ಟಾಗಿ ಇಲ್ಲ. ಕೇವಲ ದೊಡ್ಡ ಬಾಕ್ಸ್‌ಗಳನ್ನೇ ಹೆಚ್ಚಾಗಿ ಕಾಂಟ್ರಾಕ್ಟ್ ಕಂಪೆನಿಗಳು ತಯಾರಿಸುತ್ತಿವೆ. ಇದರಿಂದ ದೊಡ್ಡ ಬಾಕ್ಸ್‌ಗಳನ್ನು ಚಿಕ್ಕ ವಸ್ತುಗಳಿಗೆ ಬಳಸುವಂತಾಗಿದೆ.

4. ಸಾಮಾನ್ಯವಾಗಿ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳಲ್ಲಿ ಟ್ರಾನ್ಸ್‌ಪೋರ್ಟ್‌ನವರು ಯಾವುದೇ ಕಾರಣಕ್ಕೂ ಖಾಲಿ ಬಿಡಲ್ಲ. ಆ ರೀತಿ ಬಿಟ್ಟರೆ ಒಂದು ವಸ್ತುವಿನ ಮೇಲೆ ಮತ್ತೊಂದು ಬಿದ್ದು ಅವು ಡ್ಯಾಮೇಜ್ ಆಗುವ ಸಾಧ್ಯತೆಗಳಿವೆ. ಆದಕಾರಣ ಸಾಧ್ಯವಾದಷ್ಟು ಟ್ರಕ್ಕನ್ನು ಸಂಪೂರ್ಣ ಪ್ಯಾಕೇಜಿನಿಂದ ತುಂಬಿಸುತ್ತಾರೆ. ಆದರೆ ಆ ರೀತಿ ತುಂಬಿಸಬೇಕಾದರೆ ದೊಡ್ಡ ಬಾಕ್ಸ್‌ಗಳಾದದರೆ ಅನುಕೂಲವಾಗಿರುತ್ತದೆ. ಹಾಗಾಗಿ ಚಿಕ್ಕ ವಸ್ತುಗಳನ್ನೂ ದೊಡ್ಡ ಬಾಕ್ಸ್‌ಗಳಲ್ಲಿ ಹಾಕಿ ಪ್ಯಾಕ್ ಮಾಡುತ್ತಾರೆ. ಟ್ರಕ್‌ಗಳಲ್ಲಿ ತುಂಬಲೂ ಅನುಕೂಲ. ಬಾಕ್ಸ್ ಒಳಗಿನ ವಸ್ತುಗಳು ಹಾಳಾಗಲ್ಲ.

No comments