Header Ads

test

ಗ್ರೇಟ್, 47 ವರ್ಷದ ತಾಯಿ, 28 ವರ್ಷದ ಮಗಳಿಗೆ ಒಂದೇ ಸಲ ಸರಕಾರಿ ಉದ್ಯೋಗಗಳು

ತಮಿಳುನಾಡಿನ ಥೆನಿ ಜಿಲ್ಲೆಯ ಮೂವರು ಮಕ್ಕಳ ತಾಯಿ ಶಾಂತಿಲಕ್ಷ್ಮಿ, ಆಕೆ 28 ವರ್ಷದ ಮಗಳು ಆರಾ ಥೆನಿಮೊಝಿ ತಮಿಳುನಾಡು ಸವೀಸ್ ಕಮೀಷನ್ ನಿರ್ವಹಿಸಿದ ಗ್ರೂಪ್ 4 ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರಕಾರಿ ಉದ್ಯೋಗ ದಕ್ಕಿಸಿಕೊಂಡಿದ್ದಾರೆ. ಶಾಂತಿಲಕ್ಷ್ಮಿ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಆಯ್ಕೆಯಾದರೆ, ಆರಾ ಥೆನಿಮೊಝಿಗೆ ಮುಜರಾಯಿ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿದೆ.


ಶಾಂತಿ ಲಕ್ಷ್ಮಿ ತಾನಿರುವ ಜಿಲ್ಲೆಯಲ್ಲೇ ಪೋಸ್ಟಿಂಗ್ ಸಿಗಲಿದೆ ಎಂದು ಭಾವಿಸುತ್ತಿದ್ದಾರೆ. ಬಿ.ಎಡ್ ಮಾಡಿರುವ ಶಾಂತಿಲಕ್ಷ್ಮಿ, ತಮಿಳು ಸಾಹಿತ್ಯದಲ್ಲಿ ಬಿಎ ಮಾಡಿದ ಆರಾ ಥೆನಿಮೋಝಿ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಒಂದು ವರ್ಷ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಿಕ್ಷಣ ಪಡೆದಿದ್ದಾರೆ.

ಈ ಬಗ್ಗೆ ಶಾಂತಿ ಲಕ್ಷ್ಮಿ ಮಾತನಾಡುತ್ತಾ, "2014ರಲ್ಲಿ ತನ್ನ ಪತಿ ನಿಧನರಾದರು. ಬಳಿಕ ಕುಟುಂಬದ ಜವಾಬ್ದಾರಿ ಎಲ್ಲಾ ತನ್ನ ಹೆಗಲ ಮೇಲೆ ಬಿತ್ತು. ಹಾಗಾಗಿ ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಎದುರಾಯಿತು." ಎಂದಿದ್ದಾರೆ ಬಿಎ ಬಳಿಕ ಬಿ.ಎಡ್ ಮಾಡಿದ ಶಾಂತಿಲಕ್ಷ್ಮಿ ತನ್ನ ಮಗಳ ಜತೆಗೆ ಕೋಚಿಂಗ್ ಸೆಂಟರ್ ಸೇರಿದರು. ಮಕ್ಕಳನ್ನು ನೋಡಿಕೊಳ್ಳುವುದು, ಕುಟುಂಬದ ಜವಾಬ್ದಾರಿಗಳ ಕಾರಣ ಶಾಂತಿ ಲಕ್ಷ್ಮಿ ಒಮ್ಮೊಮ್ಮೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಮಗಳು ಕೋಚಿಂಗ್ ಕ್ಲಾಸ್‌ನಿಂದ ಬಂದ ಬಳಿಕ ತಾಯಿಗೆ ಅಂದಿನ ಪಾಠಗಳನ್ನು ಹೇಳುತ್ತಿದ್ದರು..

ಸಾಧಿಸಬೇಕು ಎಂಬ ಛಲ ಇದ್ದರೆ ಏನು ಬೇಕಾದರೂ ಮಾಡಬಹುದು. ಇದಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ನಿದರ್ಶನ ಶಾಂತಿ ಲಕ್ಷ್ಮಿ. ಒಟ್ಟಾರೆ ಇದೊಂದು ಅಪರೂಪದ ಘಟನೆ ಎನ್ನಬಹುದು. 47 ವರ್ಷದ ತಾಯಿ ಮಗಳ ಜತೆಗೆ ಓದಿ ಉದ್ಯೋಗ ಸಂಪಾದಿಸಿರುವುದು ನಿಜಕ್ಕೂ ಮೆಚ್ಚಬೇಕಾದದ್ದು.

ಸಾಮಾನ್ಯವಾಗಿ ತಂದೆತಾಯಿ ತಮ್ಮ ಮಕ್ಕಳನ್ನು ಓದಿಸಲು ಸಾಕಷ್ಟು ಶ್ರಮಿಸುತ್ತಾರೆ. ಅವರ ಕಾಲ ಮೇಲೆ ಅವರು ನಿಂತುಕೊಂಡರೆ ಸಾಕು ಎಂದು ಭಯಸುತ್ತಾರೆ. ಆದರೆ ಶಾಂತಿ ಲಕ್ಷ್ಮಿ ಮಕ್ಕಳನ್ನು ದಟ ಮುಟ್ಟಿಸುವುದರ ಜತೆಗೆ ತಾವೂ ಸಾಧಿಸಿ ತೋರಿಸಿದ್ದಾರೆ. ನಿಜಕ್ಕೂ ಅದೆಷ್ಟೋ ತಾಯಂದಿರಿಗೆ ಶಾಂತಿ ಲಕ್ಷ್ಮಿ ಸ್ಫೂರ್ತಿಯ ಸೆಲೆ ಎನ್ನಬಹುದು.

No comments