ಅಪ್ಪ ನನಗೆ ಬರ್ತ್ ಡೇ ಪಾರ್ಟಿ ಬೇಡ ; ಪೊಲೀಸರಿಗೆ 30 ಸಿಸಿ ಕ್ಯಾಮರಾ ನೀಡಿದ ಪುಟ್ಟ ಹುಡುಗಿ
3ನೇ ತರಗತಿ ವಿದ್ಯಾರ್ಥಿ. ಕೇವಲ 9 ವರ್ಷದ ಎಸ್.ಶ್ರೀಹಿತಾ ವಿಶೇಷ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಸಿ.ಸಿ.ಟಿ.ವಿ ಕ್ಯಾಮೆರಾಗಳು ಪೊಲೀಸರ ‘ಮೂರನೇ ಕಣ್ಣು’ ಎಂದು ಆಕೆಗೆ ಮನವರಿಕೆ ಆದಾಗ ಆಕೆ ಪೊಲೀಸರಿಗೆ ನೆರವಾಗಬೇಕು ಎಂಬ ಬಯಕೆ ಹೊಂದಿದಳು.ತನ್ನ ಮಗಳ ಆಸೆಯಂತೆ ಕೆಲವು ದಿನಗಳ ಬಳಿಕ ಶ್ರೀಹಿತಾ ತಂದೆ 30 ಸಿಸಿಟಿವಿ ಕ್ಯಾಮೆರಾಗಳನ್ನು ತಂದರು. ತನ್ನ ಹುಟ್ಟು ಹಬ್ಬಕ್ಕೆ ಖರ್ಚು ಮಾಡಬೇಕಾದ ಹಣದಲ್ಲಿ ಪೊಲೀಸರಿಗೆ ಸಿಸಿ ಕ್ಯಾಮೆರಾ ಕೊಡಬೇಕು ಎಂದು ಆಕೆ ತೀರ್ಮಾನಿಸಿದಳು ಮತ್ತು ತನ್ನ ಬಯಕೆಯಂತೆ ಪೊಲೀಸರಿಗೆ ಅದನ್ನು ಗಿಫ್ಟ್ ಮಾಡಿದಳು..
ಆ ಪುಟ್ಟ ಹುಡುಗಿಯ ದೊಡ್ಡ ಮನಸ್ಸನ್ನು ಗೌರವಿಸುವ ಸಲುವಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಚೆನ್ನೈ ಪೊಲೀಸ್ ಕಮಿಷನರ್ ಎ.ಕೆ. ವಿಶ್ವನಾಥನ್ ಶ್ರೀಹಿತಳನ್ನು ಸನ್ಮಾನಿಸಿದರು.
https://www.facebook.com/Chennai.Police/posts/2116593685093977

Post a Comment