Header Ads

test

ಈಕೆಯ ವಯಸ್ಸು ಇನ್ನೂ 29 ವರ್ಷ, ಓದಿದ್ದು ಪಿಯುಸಿ, ಒಂದೇ ವರ್ಷದಲ್ಲಿ 60 ಕೋಟಿ ರೂ. ವ್ಯವಹಾರ! ಇದೆಲ್ಲಾಹೇಗೆ ಸಾಧ್ಯ

ಈಕೆಯ ಸ್ವಂತ ಊರು ಗ್ವಾಲಿಯರ್. ಹೆಸರು ದೀಪಾಲಿ ಎಂದು. ಎಲ್ಲ ತಂದೆ ತಾಯಿ ರೀತಿ ದೀಪಾಲಿ ಅವರ ತಂದೆ ಸಹ ಒಳ್ಳೆಯ ಶಿಕ್ಷಣ ಕೊಡಿಸಿದರು. ಎಲ್ಲರಂತೆ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಸಂಪಾದಿಸಬೇಕು ಎಂದು ಕನಸು ಕಂಡಿದ್ದಳು ದೀಪಾಲಿ. ತಾನೊಂದು ಬಗೆದರೆ ದೈವ ಒಂದು ಬಗೆಯಿತು ಎನ್ನುತ್ತಾರಲ್ಲ ಹಾಗೆ. ಇದ್ದಕ್ಕಿದ್ದಂತೆ ಅವರ ತಂದೆಯ ಬ್ಯುಸಿನೆಸ್‌ನಲ್ಲಿ ನಷ್ಟ ಉಂಟಾಯಿತು.


ದೀಪಾಲಿ ಓದು ಪ್ರಶ್ನಾರ್ಥಕವಾಯಿತು. ತಂದೆಯ ಪರಿಸ್ಥಿತಿ ನೋಡಿ, ದೀಪಾಲಿ ಕುಟುಂಬಕ್ಕೆ ಆಸರೆಯಾಗಬೇಕು ಎಂದುಕೊಂಡಳು. ಇದಕ್ಕಾಗಿ ಬೆಳಗ್ಗೆ ತಿಂಡಿ ಮಾಡಿ ಮಾರುವುದು, ಹಾಸ್ಟೆಲ್‌ಗಳಿಗೆ ಅಡುಗೆ ಮಾಡಿಕೊಡುವಂತಹ ಕೆಲಸಗಲನ್ನು ಮಾಡುತ್ತಿದ್ದಳು. ಬಾಂದ ದುಡ್ಡಲ್ಲಿ ಮನೆ ನಿಭಾಯಿಸುತ್ತಿದ್ದಳು.

ಕೆಲವರಿಗೆ ಎಷ್ಟೇ ಕೆಲಸ ಮಾಡಿದರೂ ಕೈಯಲ್ಲಿ ಬಿಡಿಗಾಸು ಉಳಿಯಲ್ಲ. ಅದೇ ರೀತಿಯ ಸ್ಥಿತಿ ದೀಪಾಲಿಯದ್ದೂ ಆಯಿತು. ಇಲ್ಲೇ ನೋಡಿ ದೀಪಾಲಿ ಜೀವನದಲ್ಲಿ ತಿರುವು ಎಂಬುದು ಬಂದಿದ್ದು. ದೀಪಾಲಿ ಹೊಸ ಕೆಲಸ ಹುಡುಕಿಕೊಂಡು ಇಂಧೋರ್‌ಗೆ ಹೋಗುತ್ತಾಳೆ. ಅಲ್ಲಿ ಒಂದು ಉಗ್ರಾಣದಲ್ಲಿ ಕೆಲಸಕ್ಕೆ ಸೇರುತ್ತಾಳೆ. ಅಂತಹ ಪರಿಸ್ಥಿತಿಯಲ್ಲೇ ದೀಪಾಲಿಗೆ ಒಂದು ಐನಾತಿ ಐಡಿಯಾ ಬರುತ್ತದೆ.

ಮಾರುಕಟ್ಟೆ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ದೀಪಾಲಿಗೆ ತಾನೇಕೆ ಮೀಡಿಯೇಟರ್ ಕೆಲಸ ಮಾಡಬಾರದು ಎಂಬ ಐಡಿಯಾ ತಲೆಗೆ ಹೊಳೆಯುತ್ತದೆ. ಈ ಐಡಿಯಾ ಹೊಳೆದದ್ದೇ ತಡ ಗೋಧಿ ವ್ಯಾಪಾರ ಮತ್ತು ಕಮೋಡಿಯಲ್ಲಿ ಬ್ರೋಕರ್ ಕೆಲಸ ಆರಂಭಿಸುತ್ತಾಳೆ.

ಸಾಮಾನ್ಯವಾಗಿ ಈ ರೀತಿಯ ಕೆಲಸಗಳನ್ನು ಪುರುಷರು ಹೆಚ್ಚಾಗಿ ನಿಭಾಯಿಸುತ್ತಿದ್ದರು. ಆದರೆ ದೀಪಾಲಿ ಇದೇ ಮೊದಲ ಬಾರಿಗೆ ಈ ಕ್ಷೇತ್ರಕ್ಕೆ ಅಡಿಯಿಟ್ಟದ್ದನ್ನು ನೋಡಿ ಎಲ್ಲರೂ ಲೇವಡಿ ಮಾಡಲು ಆರಂಭಿಸುತ್ತಾರೆ. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದೆ ಮುನ್ನುಗ್ಗಿದಳು ದೀಪಾಲಿ. ನೋಡ ನೋಡುತ್ತಿದ್ದಂತೆ ವ್ಯವಹಾರ ಕೈಹತ್ತಿತು.

ಒಂದು ಹಂತಕ್ಕೆ ಬಂದ ಬಳಿಕ ತನ್ನದ್ಡೇ ಆದಂತಹ ಟ್ರೇಡಿಂಗ್ ಫಾರ್ಮ್ ಆರಂಭಿಸಿದಳು. ಒಂದೇ ವರ್ಷದಲ್ಲಿ 30 ವರ್ಷದ ದೀಪಾಲಿ ಸರಿಸುಮಾರು ರೂ.60 ಕೋಟಿ ವ್ಯವಹಾರ ಮಾಡಿ ಎಲ್ಲರನ್ನೂ ಚಕಿತಗೊಳಿಸಿದಳು. ಇದರ ಜತೆಗೆ ಫುಲ್ ಟೈಮ್ ಟ್ರೇಡಿಂಗ್ ಮಾಡುತ್ತಿರುವ ಮೊದಲ ಭಾರತೀಯ ಮಹಿಳೆ ಎನ್ನಿಸಿಕೊಂಡಳು. ಓದಿದ್ದು ಕೇವಲ ಪಿಯುಸಿ, ವಯಸ್ಸು ಇನ್ನೂ ಚಿಕ್ಕದು, ಆದರೂ ಸಾಧನೆ ಮಾತ್ರ ನಿಜಕ್ಕೂ ಎಲ್ಲರನ್ನೂ ಬೆರಗುಗೊಳಿಸುವಂತಿದೆ.



No comments