Header Ads

test

ಡ್ರೈವರ್ ಮತ್ತು ಹೆಲ್ಪರ್‌ಗೆ ತಲಾ ರೂ.25 ಲಕ್ಷ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ ಆಲಿಯಾ ಭಟ್!

ಸಾಮಾನ್ಯವಾಗಿ ಯಾರೇ ಆಗಲಿ ಮನೆ ಕೆಲಸದವರು, ಡ್ರೈವರ್‌ಗೆ ಅಬ್ಬಬ್ಬಾ ಎಂದರೆ ಹತ್ತೋ, ಇಪ್ಪತ್ತೋ ಸಾವಿರ ನೀಡಬಹುದು. ಅದು ಬಿಟ್ಟು ಇನ್ನೇನು ಮಾಡಲು ಸಾಧ್ಯ. ಆದರೆ ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಮಾತ್ರ ತನ್ನ ಡ್ರೈವರ್ ಮತ್ತು ಹೆಲ್ಪರ್‌ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ತನ್ನ ಬಳಿ ಸಾಕಷ್ಟು ಸಮಯದಿಂದ ನಂಬಿಕೆಯಿಂದ ಕೆಲಸ ಮಾಡುತ್ತಿದ್ದ ಚಾಲಕ ಹಾಗೂ ಸಹಾಯಕನಿಗೆ ತಲಾ ₹ 25 ಲಕ್ಷಗಳ ಚೆಕ್ ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಈ ಹಣದಲ್ಲಿ ಚಾಲಕ ಮತ್ತು ಸಹಾಯಕ ಮುಂಬೈ ಹೊರ ವಲಯದಲ್ಲಿ ಚಿಕ್ಕ ಫ್ಲಾಟ್ ಖರೀದಿಸಿದ್ದಾರೆ. ಇತ್ತೀಚೆಗೆ ಆಲಿಯಾ ಭಟ್ ತನ್ನ 26ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಗೊತ್ತೇ ಇದೆ. ಹುಟ್ಟುಹಬ್ಬಕ್ಕೂ ಎರಡು ದಿನ ಮುನ್ನ ಆಲಿಯಾ ಅವರಿಗೆ ಸಹಾಯ ಮಾಡಿ ಸರ್‌ಪ್ರೈಸ್ ನೀಡಿದ್ದಾರೆ.'ಸ್ಟುಡೆಂಟ್ ಆಫ್ ದಿ ಇಯರ್' (2012) ಸಿನಿಮಾ ಮೂಲಕ ಬಾಲಿವುಡ್‌ಗೆ ಅಡಿಯಿಟ್ಟವರು ಆಲಿಯಾ. ಅಂದಿನಿಂದ ಅವರೊಂದಿಗೆ ಸುನಿಲ್, ಅನ್ಮೋಲ್ ಎಂಬ ಇಬ್ಬರು ಯುವಕರು ಚಾಲಕ ಹಾಗೂ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಲಿಯಾ ಅವರನ್ನು ಎಂದೂ ಕೆಲಸದವರು ಎಂದು ನೋಡಿಯೇ ಇಲ್ಲವಂತೆ. ತನ್ನ ಮನೆಯ ಸದಸ್ಯರು ಎಂಬಂತೆ ನೋಡಿಕೊಳ್ಳುತ್ತಿದ್ದರು. ಅವರಿಗೂ ಅಷ್ಟೇ ಆಲಿಯಾ ಎಂದರೆ ಅಷ್ಟೇ ಪ್ರೀತಿ, ವಿಶ್ವಾಸ.

ಅವರಿಬ್ಬರಿಗೆ ಸ್ವಂತ ಮನೆ ಇರದಿದ್ದ ಕಾರಣ ಇಬ್ಬರಿಗೂ ಸೇರಿ ₹ 50 ಲಕ್ಷದ ಚೆಕ್ ನೀಡಿದ್ದಾರೆ. ಇವರಿಗಷ್ಟೇ ಅಲ್ಲ ತನ್ನ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಕುಕ್, ಹೀಗೆ ತನ್ನ ಬಳಿ ಕೆಲಸ ಮಾಡುವವರಿಗೆ ಏನೇ ಕಷ್ಟ ಬಂದರೂ ಆಲಿಯಾ ಅವರ ಸಹಾಯಕ್ಕೆ ನಿಲ್ಲುತ್ತಾರೆ.

ಸದ್ಯಕ್ಕೆ ಆಲಿಯಾ ಭಟ್ ಬ್ರಹ್ಮಾಸ್ತ್ರ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಶೀಘ್ರದಲ್ಲೇ ಎಸ್ ಎಸ್ ರಾಜಮೌಳಿ ಅವರ 'ಆರ್ ಆರ್ ಆರ್' ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಲಿಯಾ ನಟಿಸುತ್ತಿರುವ ಮೊದಲ ಟಾಲಿವುಡ್ ಸಿನಿಮಾ ಇದು. ಇದರ ಜತೆಗೆ ಕಳಂಕ್, ಸಡಕ್ 2 ಎಂಬ ಸಿನಿಮಾಗಳಲ್ಲೂ ಬಿಝಿಯಾಗಿದ್ದಾರೆ.

No comments