Header Ads

test

ಆ ಗ್ರಾಮದಲ್ಲಿ ಸೂರ್ಯನು 24 ಗಂಟೆಯೂ ಬೆಳಗುತ್ತಲೇ ಇರುತ್ತಾನೆ, ಎಲ್ಲಿ ಗೊತ್ತಾ...?

ಬೆಳಗ್ಗೆ ಉದಯಿಸಿದ ಸೂರ್ಯ ರಾತ್ರಿ ಅಸ್ತಮಿಸುತ್ತಾನೆ. ಇದನ್ನು ನಾವು ನಿತ್ಯ ನೋಡುತ್ತಲೇ ಇರುತ್ತೇವೆ. ಸಹಜ ಸಿದ್ಧವಾಗಿ ನಡೆಯುವ ಈ ಪ್ರಕ್ರಿಯೆ ಸ್ವಲ್ಪ ಉಲ್ಟಾ ಆದರೆ ಹೇಗಿರುತ್ತದೆ? ಸೂರ್ಯನು ನಾಲ್ಕು ತಿಂಗಳ ಕಾಲ ಅಸ್ತಮಿಸದಿದ್ದರೆ...! ಮತ್ತೆ ನಾಲ್ಕು ತಿಂಗಳ ಕಾಲ ಆಕಾಶದಲ್ಲಿ ಯಾವುದೇ ಕಾರಣಕ್ಕೂ ಸೂರ್ಯ ಕಾಣಿಸದಿದ್ದರೆ..!

ಕೇಳಲು ಅಚ್ಚರಿ ಅನ್ನಿಸುತ್ತದೆ ಅಲ್ಲವೇ. ಆದರೆ ಇಂತಹ ಊಹಿಸಲಾಗದ ಅದ್ಭುತ ನಾರ್ವೆ ದೇಶದಲ್ಲಿ ನಡೆಯುತ್ತಿದೆ. ಆ ದೇಶದಲ್ಲಿ "ಲಾಗಿಯರ್‌ಬೆನ್" ಎಂಬ ಊರಿನಲ್ಲಿ ನಾಲ್ಕು ತಿಂಗಳ ಕಾಲ ಅಂದರೆ ಮೇ ತಿಂಗಳಿಂದ ಆಗಸ್ಟ್ ವರೆಗೂ ಇಪ್ಪತ್ತನಾಲ್ಕು ಗಂಟೆ ಸೂರ್ಯ ಪ್ರಕಾಶಿಸುತ್ತಲೇ ಇರುತ್ತಾನೆ. ಆ ನಾಲ್ಕು ತಿಂಗಳಲ್ಲಿ ಹಗಲಿಗೂ ರಾತ್ರಿಗೂ ಯಾವುದೇ ವ್ಯತ್ಯಾಸ ಇರಲ್ಲ.


ಅಷ್ಟೇ ಅಲ್ಲ ಆ ಗ್ರಾಮದಲ್ಲಿ ನಾಲ್ಕು ತಿಂಗಳ ಕಾಲ ಕಗ್ಗತ್ತಲು ಇರುತ್ತದೆ. ನವೆಂಬರ್‌ನಿಂದ ಫೆಬ್ರವರಿವರೆಗೂ ಆ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಸೂರ್ಯನ ಜಾಡು ಕಾಣಿಸಲ್ಲ. ವಲಯಾಕಾರದಲ್ಲಿರುವ ಭೂಮಿಗೆ ಉತ್ತರ ದಿಕ್ಕಿನ ಕೊಟ್ಟ ಕೊನೆಯಲ್ಲಿ ಇರುವ ಪ್ರದೇಶ ಇದು. ಹಾಗಾಗಿ ಅಲ್ಲಿ ವಿಚಿತ್ರವಾದ ಪರಿಸ್ಥಿತಿ ಕಾಣಿಸುತ್ತದೆ. ಗಡಿಯಾರದ ಕಡೆಗೆ ನೋಡಿದರೆ ಹೊರತು ಸಮಯ ಎಷ್ಟಾಗಿದೆ ಎಂದು ಗೊತ್ತಾಗಲ್ಲ.

ನಾರ್ವೆಯಲ್ಲಿ ಏನೇನಿದೆ ?
ಓಸ್ಲೋ: ಸಮುದ್ರದ ಅಂಚಿನಲ್ಲಿ ಇರುವ ನಾರ್ವೆಯ ಪ್ರಮುಖ ಬಂದರು ಹಾಗೂ ರಾಜಧಾನಿ ಆಗಿರುವ ಓಸ್ಲೋ ನಗರದ ಪ್ರದಕ್ಷಣೆ ಅದೆಷ್ಟು ಥ್ರಿಲ್ ನೀಡುತ್ತೆ ಎಂದರೆ ಓಸ್ಲೋ ಇತಿಹಾಸ ಕೂಡ ಆಶ್ಚರ್ಯಕರವಾಗಿತ್ತು. ಓಸ್ಲೋದಲ್ಲಿ ಎತ್ತರದ ಮರಗಳಿಂದ ಕೂಡಿದ ಪರ್ವತಗಳ ಮಧ್ಯೆ ಸಾಗರದ ಜಲಧಾರೆ ನೋಡಬಹುದು. ದೊಡ್ಡ ಬೆಟ್ಟದ ಮೇಲಿನಿಂದ ಸುರಿಯುವ ಎಂದೂ ಬತ್ತದ ಜಲಧಾರೆಯಿದೆ. ದೆಹಲಿಯ ಕುತುಬ್‌ಮಿನಾರ್‌ನಂತೆ ಇಲ್ಲೊಂದು ಕಂಬವಿದೆ. 17ಅಡಿ ಎತ್ತರ ಮೇಲೆ 212 ಮೂರ್ತಿಗಳನ್ನು ನೋಡುತ್ತಿದ್ದರೆ ಆಶ್ಚರ್ಯ. ಸ್ಕೀಯಿಂಗ್ ತೊಟ್ಟಿಲು ಎಂದೇ ಹೆಸರಾದ ನಾರ್ವೆಯಲ್ಲಿ ಸ್ಕಿಯಿಂಗ್ ಅನುಭವ ಅದ್ಭುತ.

ಕಾರ್ಲ್‌ಜೋಹಾನ್ಸ್
ಸಣ್ಣ ಹೋಟೆಲ್‌ನಿಂದ ಪಂಚತಾರಾ ಹೋಟೆಲ್‌ಗಳು ಇಲ್ಲಿ ಲಭ್ಯ. ನ್ಯಾಶನಲ್ ಥಿಯೇಟರ್, ಯುನಿರ್ವಸಿಟಿ, ಪಾರ್ಲಿಮೆಂಟ್,ಬ್ಯಾಂಕ್ ಅಲ್ಲದೆ ಅನೇಕ ಉದ್ಯಮ ಸಂಸ್ಥೆಗಳು ಇವೆ. ಇಲ್ಲಿನ ಥಿಯೇಟರ್ ಅನುಭವ ಬಣ್ಣಿಸಲಾಗದ್ದು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪ್ರಕಾರ ಥಿಯೇಟರ್ ಜೊತೆ ಇರುವ ಕೆಫೆ ವಿಶ್ವದಲ್ಲೆ ಉತ್ತಮ ಹಾಗೂ ದುಬಾರಿ ಕೆಫೆ ಎನ್ನುವುದು.

ಸಿಟಿಹಾಲ್
ಪ್ರತಿವರ್ಷ ಡಿಸೆಂಬರ್ 10ಕ್ಕೆ ಪ್ರಪಂಚದ ಪ್ರಖ್ಯಾತ ವಿಜ್ಞಾನಿಗಳು, ಸಾಹಿತಿಗಳು,ಸಮಾಜ ಸೇವಕರು ಅನೇಕ ಗಣ್ಯರು ಇಲ್ಲಿ ಸೇರುತ್ತಾರೆ. ಇಲ್ಲೇ ಪ್ರಪಂಚದ ಸರ್ವೋತ್ತಮ ನೊಬೆಲ್ ಪ್ರಶಸ್ತಿಯನ್ನು ನೀಡುತ್ತಾರಂತೆ.

ಬೀಜೋನ್ಸ್ ಮೂಸಿಯಂ
ನಾರ್ಫೋಕ್ ಮ್ಯೂಸಿಯಂ ಇದೊಂದು ಐತಿಹಾಸಿಕ ಮೂಸಿಯಂ. ಇಲ್ಲಿ ವೈಕಿಂಗ್ ಶಿಪ್ ಮ್ಯೂಸಿಯಂ ನಲ್ಲಿ ವೈಕಿಂಗ್ ಜನರು ತಯಾರಿಸಿದ ಹಳೆಯ ಹಡಗನ್ನು ಇಡಲಾಗಿದೆ. ಮೊದಲ ಅನ್ವೇಷಕ ಫ್ರಿಸೋಫ್ ನ್ಯಾನ್ಯಲ್ ಬಳಸಿದ ಪ್ರಸಿದ್ಧ ಹಡಗು ಫ್ರಾಸ್‌ನ್ನು ನೀವು ಇಲ್ಲಿ ನೋಡಬಹುದು. 1947ರಲ್ಲಿ ಥೋರ್ ಹೆರ್‌ದೆಹಲ್ ಪ್ರಯಾಣಿಸಿದ್ದ ಜಲನೌಕೆ ಕೂಡ ಇದೆ. ಪ್ರಾಚೀನ ಕರಕುಶಲ ವಸ್ತುಗಳು, ಚರ್ಚುಗಳ,ಫಾರ್ಮ್‌ಗಳ ನಮೂನೆಗಳನ್ನು ಇಲ್ಲಿ ನೋಡಬಹುದು.

No comments