Header Ads

test

2 ಸಾವಿರ ಮಂದಿ ಅನಾಥರಿಗೆ ಮುಕೇಶ್ ಅಂಬಾನಿ ಅನ್ನದಾನ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮನೆಯಲ್ಲಿ ಮಾರ್ಚ್ 9ರಂದು ಮದುವೆ ಸಂಭ್ರಮ ನಡೆಯಲಿದೆ. ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ, ಪ್ರಮುಖ ವಜ್ರದ ವ್ಯಾಪಾರಿ ರಸ್ಸೆಲ್ ಮೆಹತಾ ಮಗಳು ಶ್ಲೋಕಾ ಮೆಹತಾ ವಿವಾಹ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿನ ಅನಾಥಾಶ್ರಮದಲ್ಲಿ 2000 ಮಂದಿ ಮಕ್ಕಳಿಗೆ ಮುಕೇಶ್ ಅಂಬಾನಿ, ನೀತಾ ಅಂಬಾನಿ ಜತೆಗೆ ಆಕಾಶ್ ಅಂಬಾನಿ, ಶ್ಲೋಕಾ ಮೆಹತಾ ಜತೆಯಾಗಿ ಊಟ ಬಡಿಸಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಕೇಶ್ ಅಂಬಾನಿ ಏಕೈಕ ಪುತ್ರಿ ಇಷಾ ಅಂಬಾನಿ ಮದುವೆ ಸಂಭ್ರಮದಲ್ಲಿ ಡಿಸೆಂಬರ್ 7 ರಿಂದ 10ರವೆಗೂ ನಿತ್ಯ ಅನ್ನದಾನ ಮಾಡಿದರು. 5100 ಅಧಿಕ ಮಂದಿಗೆ 100 ರೀತಿಯ ಅಡುಗೆಗಳಿಂದ ಅನ್ನದಾನ ಮಾಡಿದರು.



ಕಳೆದ ವರ್ಷ ಮಾರ್ಚ್‌ನಲ್ಲಿ ಆಕಾಶ್ ಅಂಬಾನಿ, ಶ್ಲೋಕಾ ಮೆಹತಾ ನಿಶ್ಚಿತಾರ್ಥ ಗೋವಾದಲ್ಲಿನ ಒಂದು ಫೈವ್ ಸ್ಟಾರ್ ರೆಸಾರ್ಟ್‌ನಲ್ಲಿ ನಡೆದ ಸಂಗತಿ ಗೊತ್ತೇ ಇದೆ. ಪ್ರಮುಖ ವಜ್ರವ ವ್ಯಾಪಾರಿ ರಸ್ಸೆಲ್ ಮೆಹತಾ ಮಗಳು ಶ್ಲೋಕಾ ಮೆಹತಾ, ಆಕಾಶ್ ಅಂಬಾನಿ ಇಬ್ಬರೂ ಚಿಕ್ಕಂದಿನಿಂದ ಸ್ನೇಹಿತರು. ಇವರಿಬ್ಬರೂ ಒಂದೇ ಪಾಠಶಾಲೆಯಲ್ಲಿ ಓದಿಕೊಂಡವರು. ಆಕಾಶ್ ರಿಲಯನ್ಸ್ ರೀಟೈಲ್, ಜಿಯೋಗಳಿಗೆ ಸಂಬಂಧಿಸಿದ ವ್ಯವಹಾರಗಳನು ನೋಡಿಕೊಳ್ಳುತ್ತಿರುವ ಸಂಗತಿ ಗೊತ್ತೇ ಇದೆ.

 ಶ್ಲೋಕಾ ಲಂಡನ್‌ನಲ್ಲಿನ ಪ್ರಿನ್ಸ್‌ಟನ್ ಯೂನಿವರ್ಸಿಟಿಯಿಂದ ಎಕನಾಮಿಕ್ಸ್ ಪದವಿ ಪಡೆದಿದ್ದಾರೆ. ಸದ್ಯಕ್ಕೆ ತಮ್ಮ ಡೈಮಂಡ್ ಕಂಪೆನಿಯಲ್ಲಿ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಶ್ಲೋಕಾ. ಕಳೆದ ಡಿಸೆಂಬರ್‌ನಲ್ಲಿ ಮುಕೇಶ್ ಅಂಬಾನಿ ಮಗಳು ಇಷಾ ಅಂಬಾನಿ ವಿವಾಹ ಪಿರಾಮಲ್ ಗ್ರೂಪ್ ಮುಖ್ಯಸ್ಥ ಅಜಯ್ ಪಿರಾಮಲ್ ಪುತ್ರ ಆನಂದ್ ಪಿರಾಮಲ್ ಜತೆಗೆ ಅದ್ದೂರಿಯಾಗಿ ನಡೆಯಿತು.

ಮುಂಬಯಿನಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೊ ವಲ್ಡ್‌ ಸೆಂಟರ್‌ನಲ್ಲಿ ಮೂರು ದಿನಗಳ ಮದುವೆಯು ಮುಂದಿನ ತಿಂಗಳು ನಡೆಯಲಿದೆ. ಆರತಕ್ಷತೆಯು ಮಾ.11ರಂದು ನಡೆಯಲಿದೆ. ಸಹಜವಾಗಿಯೇ ಈ ಮದುವೆಗೆ ಖ್ಯಾತ ಉದ್ಯಮಿಗಳು, ರಾಜಕಾರಣಿಗಳು ಮತ್ತು ನಾನಾ ವಲಯಗಳ ಸೆಲಬ್ರಿಟಿಗಳ ದಂಡೇ ಆಗಮಿಸುವ ನಿರೀಕ್ಷೆ ಇದೆ. ಮದುವೆಗೆ ಮುನ್ನ ಮೂರು ದಿನಗಳ ಕಾರ್ಯಕ್ರಮವನ್ನು ಸ್ವಿಜರ್ಲೆಂಡ್‌ನಲ್ಲಿ ಆಯೋಜಿಸಲಾಗುತ್ತದೆ. ಫೆ.23ರಿಂದ 25ರ ತನಕ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 500 ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ರಣಬೀರ್‌ ಕಪೂರ್‌, ಕರಣ್‌ ಜೋಹಾರ್‌ ಸೇರಿದಂತೆ ಬಾಲಿವುಡ್‌ ತಾರಾ ಬಳಗವೇ ಮದುವೆಗೆ ಹಾಜರಾಗುವ ನಿರೀಕ್ಷೆ ಇದೆ.



No comments