Header Ads

test

18 ಲಕ್ಷ ನೀಡಿ ಬೈಕ್ ಕೊಂಡ ಹೀರೋ, ಆ ಹೀರೋ ಯಾರು ಗೊತ್ತಾ...?

ಸಿನಿಮಾ ತಾರೆಗಳಿಗೆ ಬೈಕ್‌ಗಳು, ಕಾರುಗಳು ಎಂದರೆ ಎಲ್ಲಿಲ್ಲದ ಕ್ರೇಜ್ ಇರುತ್ತದೆ. ಇದಕ್ಕೆ ನಮ್ಮ ಸ್ಯಾಂಡಲ್‍ವು‌ನಿಂದ ಬಾಲಿವುಡ್ ತನಕ ಹೀರೋಗಳನ್ನು ಹೆಸರಿಸಬಹುದು. ಇದೀಗ ಬಾಲಿವುಡ್ ಹೀರೋ ಶಾಹಿದ್ ಕಪೂರ್ ಐಶಾರಾಮಿ ಬೈಕನ್ನು ತನ್ನದಾಗಿಸಿಕೊಂಡಿದ್ದಾರೆ. ಅತ್ಯಂತ ಪವರ್‌ಫುಲ್ ಆದ ಬಿಎಂಡಬ್ಲ್ಯು ಆರ್ 1250 ಜಿಎಸ್ ಎಡ್‌ವೆಂಚರಸ್ ಮೋಟರ್ ಸೈಕಲ್ ಖರೀದಿಸಿದ್ದಾರೆ.


ಇದರ ಬೆಲೆ ರೂ.18.25 ಲಕ್ಷ (ಎಕ್ಸ್‌ಶೋ ರೂಂ ಬೆಲೆ) ನೀಡಿ ಖರೀದಿಸಿದ್ದಾನೆ ಚಾಕೋಲೇಟ್ ಹೀರೋ. ಹೊಸ ಬೈಕ್ ಜತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹೈ ಎಂಡ್ ಬೈಕ್‌ಗಳೆಂದರೆ ಅಪಾರ ಆಸಕ್ತಿ ತೋರಿಸುವ ಶಾಹಿದ್ ಕಪೂರ್ ಬಳಿ ಡುಕಾಟಿ ಸ್ಕಾಂಬ್ಲರ್ 1200, ಹಾರ್ಲೆ ಡೇವಿಡ್‌ಸನ್ ಫಾಟ್ ಬಾಯ್, ಯಮಹ ಎಂಟಿ 01 ಬೈಕ್‌ಗಳಿವೆ.

ಬಿಎಂಡಬ್ಲ್ಯು ಜಿ310 ಆರ್ ಬೈಕನ್ನು ಟೆಸ್ಟ್ ರೈಡ್ ಮಾಡಿದ ಫೋಟೋವನ್ನು ಕೆಲವು ದಿನಗಳ ಹಿಂದೆ ಟ್ವಿಟರ್‌ನಲ್ಲಿ ಹಾಕಿದ್ದರು. ಮುಂಬೈ ಟ್ರಾಫಿಕ್‌ನಲ್ಲಿ ಓಡಿಸಲು ಅತ್ಯಂತ ಅನುಕೂಲವಾಗಿ ಈ ಬೈಕ್ ಇದೆ ಎಂದಿದ್ದಾರೆ. ಆದರೆ ಈ ಬೈಕನ್ನೂ ಖರೀದಿಸಿದ್ದಾರಾ, ಇಲ್ಲವೆ ಎಂಬುದನ್ನು ಮಾತ್ರ ತಿಳಿಸಿಲ್ಲ. ಸುಶಾಂತ್ ಸಿಂಗ್ ರಾಜ್‌ಪೂತ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್ ಇನ್ನಿತರ ತಾರೆಗಳು ಸಹ ಬಿಎಂಡಬ್ಲ್ಯು ಬೈಕ್‌ಗಳನ್ನು ಬಳಸುತ್ತಿದ್ದಾರೆ.

https://www.instagram.com/p/Butg4_GHbrt/?utm_source=ig_embed

ಶಾಹಿದ್ ಕಪೂರ್ ಸದ್ಯಕ್ಕೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅರ್ಜುನ್ ರೆಡ್ಡಿ ಹಿಂದಿ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಕಬೀರ್ ಸಿಂಗ್ ಎಂಬ ಟೈಟಲ್ ಇಡಲಾಗಿದೆ. ಟಿ ಸೀರೀಸ್, ಸಿನಿ 1 ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಕಿಯಾರಾ ಅದ್ವಾನಿ ಹೀರೋಯಿನ್ ಆಗಿದ್ದಾರೆ. ಈ ಸಿನಿಮಾವನ್ನು 2019 ಜೂನ್ 21ರಂದು ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.

No comments