Header Ads

test

ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬಕ್ಕೆ 175 ಎಕರೆ ಜಮೀನು ಬಿಟ್ಟುಕೊಟ್ಟ ಕನ್ನಡ ನಟ ಸುಮನ್

ಯಾರೇ ಆಗಲಿ ದಾನ ಕೊಡುವುದು ಎಂದರೆ ಒಂದು ಅಥವಾ ಎರಡು ಎಕರೆ ಜಮೀನು ನೀಡಬಹುದು. ಒಂದಷ್ಟು ಲಕ್ಷಗಳಲ್ಲಿ ಹಣ ನೀಡಬಹುದು. ಆದರೆ ಕನ್ನಡದ ನಟ ಸುಮನ್ ಅವರು ಏಕಾಏಕಿ 175 ಎಕರೆ ಜಮೀನನ್ನು ಹುತಾತ್ಮ ಯೋಧರ ಕುಟುಂಬಕ್ಕೆ ಬಿಟ್ಟು ಕೊಟ್ಟಿದ್ದಾರೆ. ಕಾರ್ಗಿಲ್‌ನಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 175 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ.

ಹೈದರಾಬಾದ್ ನಗರದಿಂದ ಹೊರವಲಯಲ್ಲಿ ಸ್ಟುಡಿಯೋ ಮಾಡಬೇಕು ಎಂದು ತೆಗೆದುಕೊಂಡ 175 ಎಕರೆ ಜಾಗ ಇದೆ. ಇದನ್ನು ಕಾರ್ಗಿಲ್ ವಾರ್ ಹೀರೋಸ್‌ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ರೀತಿ ಜಮೀನನ್ನು ನೀಡುವಂತೆ ಸಲಹೆ ನೀಡಿದ್ದು ಅವರ ಪತ್ನಿ ಶಿರೀಶಾ ಎಂದಿದ್ದಾರೆ.



ಆಗ ನನ್ನ ಪತ್ನಿ ಶಿರೀಶಾ ಈ ಸಲಹೆ ನೀಡಿದರು. ಮೊದಲು ಕಾರ್ಗಿಲ್ ಹುತಾತ್ಮ ಯೋಧರಿಗೆ ಭೂಮಿ ನೀಡುತ್ತಿದ್ದೇವೆ. ಹೈದರಾಬಾದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ ಈ ಜಾಗ. ಯಾದಗಿರಿ ಗುಟ್ಟ ಎಂಬ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ ಇದೆ. ಆ ಜಾಗ ಸ್ವಲ್ಪ ಗುಡ್ಡಗಳಿಂದ ಕೂಡಿದೆ. ಈ ವರ್ಷಾಂತ್ಯಕ್ಕೆ ಅದನ್ನು ಸಮತಟ್ಟಾಗಿ ಮಾಡುತ್ತೇನೆ. ಮೊದಲು ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬಕ್ಕೆ ನೀಡುತ್ತಿದ್ದೇವೆ.

ನಾವು ಸೈಟ್ ನೀಡುತ್ತೇವೆ. ಅವರು ಮನೆ ಕಟ್ಟಿಕೊಳ್ಳಬಹುದು. ಸಿನಿಮಾ ಕ್ಷೇತ್ರಕ್ಕೆ ಬಂದು 40 ವರ್ಷಗಳಾಗಿದೆ, ಇದುವೆಗೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಸಮಾಜಕ್ಕೆ ಏನು ಮಾಡಿದ್ದೇನೆ ಎಂದು ಕೇಳಿಕೊಂಡಾಗ. ಇದನ್ನು ಮಾಡೋಣ ಅನ್ನಿಸಿತು. ನನ್ನ ಪತ್ನಿ ಈ ರೀತಿ ಮಾಡಿ ಎಂದಾಗ ಓಕೆ ಎಂದು ಹೇಳಿದೆ. ಆ ಜಾಗದಲ್ಲಿ ಸ್ಟುಡಿಯೋ ಮಾಡಬೇಕು ಎಂಬ ಕನಸಿತ್ತು. ಅದನ್ನು ಈಗ ಮರೆತಿದ್ದೇನೆ. ಒಬ್ಬ ನಟನಾಗಿ ನಾನು ಈ ರೀತಿ ಮಾಡಿದರೆ ನಮ್ಮ ರಾಜ್ಯಕ್ಕೂ ಹೆಮ್ಮೆಯ ಸಂಗತಿ ಎಂದಿದ್ದಾರೆ ಸುಮನ್.

No comments