ವಿಶ್ವದಲ್ಲಿ ಪ್ರಾಯಶಃ ಇದೇ ಮೊದಲು, ಮಿಗ್ನಿಂದ ಎಫ್-16 ಉರುಳಿಸಿದ ಅಭಿನಂದನ್ ‘ವಿಶ್ವ ದಾಖಲೆ’!
ನವದೆಹಲಿ, ಮಾ.5: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ಉಗ್ರರು ನಡೆಸಿದ್ದ ದಾಳಿಗೆ ಭಾರತ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆ ದಾಟಿದ ವಾಯುಸೇನೆಯು ಉಗ್ರರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿದೆ. ಇನ್ನು ಪ್ರತಿಕಾರ ಸ್ವರೂಪ ಆಕ್ರೋಶದಿಂದ ಕುದಿಯುತ್ತಿದ್ದ ಪಾಕಿಸ್ತಾನವು ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿಗೆ ಸಂಚು ರೂಪಿಸಿತ್ತು. ಇದನ್ನು ಸಾಕಾರಗೊಳಿಸಲು ಪಾಕಿಸ್ತಾನದಿಂದ 8 ಎಫ್-16, 4 ಮಿರಾಜ್-3, 4 ಚೀನಾ ನಿರ್ಮಿತ ಜೆಎಫ್-17 ಥಂಡರ್ ವಿಮಾನಗಳು ಭಾರತದತ್ತ ಹೊರಟಾಗ, ಕೂಡಲೇ ಎಚ್ಚೆತ್ತ ಭಾರತೀಯ ವಾಯುಪಡೆ 4 ಸುಖೋಯ್, 2 ಮಿರಾಜ್, 2 ಮಿಗ್ 21 ಬೈಸನ್ ಸೇರಿ ಒಟ್ಟು 8 ಭಾರತೀಯ ಸಮರ ವಿಮಾನಗಳು ಪ್ರತಿದಾಳಿಗೆ ಸಜ್ಜಾದವು. ಆಗ ಭಾರತದ ದಾಳಿಗೆ ಬೆಚ್ಚಿದ ಪಾಕಿಸ್ತಾನಿ ವಿಮಾನಗಳು ವಾಪಸ್ ಪರಾರಿಯಾಗಲು ಆರಂಭಿಸಿದವು.
ಆ ವೇಳೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಪಾಕಿಸ್ತಾನದ ಎಫ್-16 ವಿಮಾನವೊಂದನ್ನು ಬೆನ್ನತ್ತಿದರು. ಗಡಿ ನಿಯಂತ್ರಣ ರೇಖೆಯಿಂದಾಚೆ ಪಾಕಿಸ್ತಾನ ವಿಮಾನಗಳ ದಂಡೇ ಇದೆ ಎಂದು ಇತರ ವಿಮಾನಗಳ ಪೈಲಟ್ಗಳು ಹೇಳಿದರೂ, ಕೇಳುವ ಸ್ಥಿತಿಯಲ್ಲಿ ಅಭಿನಂದನ್ ಇರಲಿಲ್ಲ. ಪಾಕಿಸ್ತಾನ ವಿಮಾನ ಹೊಡೆದುರುಳಿಸುವ ಛಲದೊಂದಿಗೆ ನುಗ್ಗಿದರು. ಆರ್-73 ಎಂಬ ಕ್ಷಿಪಣಿಯನ್ನು ಪಾಕ್ ವಿಮಾನದತ್ತ ಪ್ರಯೋಗಿಸಿದರು. ಆದರೆ ಪಾಕಿಸ್ತಾನದ ಎಫ್-16 ವಿಮಾನವೊಂದು ‘ಅಮ್ರಾಮ್’ ಎಂಬ ಕ್ಷಿಪಣಿಯಿಂದ ದಾಳಿ ನಡೆಸಿತು. ಅದು ಅಭಿನಂದನ್ ಅವರಿದ್ದ ಮಿಗ್-21 ಬೈಸನ್ ವಿಮಾನದ ರೆಕ್ಕೆಗೆ ಬಡಿದು ವಿಮಾನ ಪತನಗೊಂಡಿತ್ತು.
ಇನ್ನು ಈ ಕುರಿತು, ಗಡಿ ನಿಯಂತ್ರಣ ರೇಖೆ (ಎಲ್ಒಸಿ) ದಾಟಿ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಗ್ಗೆ ನಿವೃತ್ತ ವಾಯುಪಡೆ ಅಧಿಕಾರಿಗಳು ಗುಣಗಾನ ಮಾಡುತ್ತಿದ್ದಾರೆ. ಎಫ್-16ನಂತಹ ವಿಮಾನವನ್ನು ಮಿಗ್ನಂತಹ ಹಳೆಯ ವಿಮಾನ ಪತನಗೊಳಿಸಿದ ನಿದರ್ಶನ ವಿಶ್ವದಲ್ಲಿ ಪ್ರಾಯಶಃ ಇದೇ ಮೊದಲು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಭಾರತೀಯ ವಾಯುಪಡೆಯಲ್ಲಿರುವ ಮಿಗ್-21 ವಿಮಾನಗಳು 1960ರ ದಶಕದ ಮಾಡೆಲ್ಗಳು. ಅವನ್ನು ಭಾರತ ಮೇಲ್ದರ್ಜೆಗೇರಿಸಿ ಇನ್ನೂ ಬಳಸುತ್ತಿದೆ. ಆದರೆ ಪಾಕಿಸ್ತಾನದ ಬತ್ತಳಿಕೆಯಲ್ಲಿರುವ ಎಫ್-16 ಅತ್ಯಾಧುನಿಕ ಸೌಲಭ್ಯ ಹೊಂದಿದ ವಿಮಾನಗಳು. ಅಂತಹ ವಿಮಾನವನ್ನೇ ಅಭಿನಂದನ್ ಅವರು ಹೊಡೆದುರುಳಿಸಿದ್ದಾರೆ. ಆರ್-73 ಎಂಬ ಕ್ಷಿಪಣಿ ಬಳಸಿ ಎಫ್-16 ನೆಲಕ್ಕೆ ಕೆಡವಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಲಾಗುತ್ತಿದೆ.

Post a Comment