Header Ads

test

15 ದಿನ ಕ್ರಮ ತಪ್ಪದೆ ಮಾಡಿದರೆ ಬಿಳಿ ಕೂದಲು ಸಂಪೂರ್ಣ ಕಪ್ಪಾಗಿ ಬದಲಾಯಿಸುವ ಅದ್ಭುತವಾದ ಪದ್ಧತಿ, ಹೇಗೆತಿಳಿದುಕೊಳ್ಳಿ.

ಇಂದು ಕೂದಲನ್ನು ಕಪ್ಪಗೆ ಮಾಡಲು ಮಾರುಕಟ್ಟೆಯಲ್ಲಿ ನಾನಾ ರೀತಿಯ ಹೇರ್ ಡೈ, ಬಣ್ಣಗಳು ಲಭ್ಯವಿದೆ. ಆದರೆ ಅವುಗಳಿಂದ ನಮಗೆ ತಾತ್ಕಾಲಿಕ ಉಪಶಮನ ಸಿಗುತ್ತದೆ. ಅವು ನೆತ್ತಿಯ ಮೇಲಿನ ಕೂದಲನ್ನು ಮಾತ್ರ ಕಪ್ಪಾಗಿಸುತ್ತವೆ. ಬಳಿಕ ಕೂದಲು ಬೆಳೆಯುತ್ತಿದ್ದಂತೆ ಮತ್ತೆ ಹೇರ್ ಡೈ ಬಳಸಬೇಕಾಗುತ್ತದೆ.

ಈ ರೀತಿಯ ಹೇರ್ ಡೈಗಳಿಂದ ನಾನಾ ರೀತಿಯ ಸಮಸ್ಯೆಗಳೂ ಬರುತ್ತವೆ. ಮುಖ್ಯವಾಗಿ ಇವೆಲ್ಲಾ ರಾಸಾಯನಿಕಗಳಿಂದ ಮಾಡಿರುವಂತಹವು. ಕೂದಲು ಕಪ್ಪಗೆ ಮಾಡುವುದರ ಜತೆಗೆ ಕೂದಲ ಆರೋಗ್ಯಕ್ಕೂ ಮಾರಕ. ಹಾಗಾಗಿ ಈ ರೀತಿಯ ಕೆಮಿಕಲ್ಸ್ ಬಳಸುವ ಬದಲು ಮನೆಯಲ್ಲೇ ಶಾಶ್ವತ ಪರಿಹಾರ ಸಿಗುವಂತೆ ಮಾಡುವ ಅದ್ಭುತ ಔಷಧಿಯೊಂದಿದೆ.

ನಮ್ಮ ಪ್ರಾಚೀನ ಆಯುರ್ವೇದ ಶಾಸ್ತ್ರದಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸುವ ಅನೇಕ ಪದ್ಧತಿಗಳು ಲಭ್ಯವಿದೆ. ಕೇವಲ ನಾವು ಮನೆಯಲ್ಲಿ ತಯಾರಿಸಿಕೊಂಡು ಆಚರಿಸಿ ಕೂಡ ಸಮಸ್ಯೆಯಿಂದ ಹೊರ ಬರಬಹುದು. ಕೂದಲು ಉದುರುವುದು ನಿಲ್ಲುವುದಷ್ಟೇ ಅಲ್ಲ ಬೆಳ್ಳಗೆ ಆಗುವುದೂ ಕಡಿಮೆಯಾಗುತ್ತದೆ. ಇನ್ನು ಅಲ್ಲಿಂದ ಕೂದಲು ಸೊಂಪಾಗಿ, ಕಡು ಕಪ್ಪಗೆ ಬೆಳೆಯಲು ಪ್ರಾರಂಭಿಸುತ್ತದೆ.

ಇದನ್ನು ವಂಶಪಾರಂಪರೆಯಿಂದ ಬಕ್ಕ ತಲೆ ಇರುವ ಸಾವಿರಾರು ಮಂದಿ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದೆ. ಹಲವು ಪ್ರಕರಣಗಳಲ್ಲಿ 70 ವರ್ಷ ವಯಸ್ಸಿನವರಿಗೂ ಕಪ್ಪಾಗುವುದು ಕಂಡು ಬಂತು. ಅಲ್ಲಿಂದ ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಭಾಗವಾಗಿಸಿದರು. ಕೆಳಗೆ ಕೆಲವು ಪದಾರ್ಥಗಳಲ್ಲಿ ಕೆಲವು ನಮ್ಮ ಮನೆಯಲ್ಲಿ ಲಭಿಸುತ್ತವೆ. ಉಳಿದವು ಆಯುರ್ವೇದ ಮಳಿಗೆಗಳಲ್ಲಿ ಲಭಿಸುತ್ತವೆ.


ಬೇಕಾದ ಪದಾರ್ಥಗಳು:

* ನುಣ್ಣಗೆ ರುಬ್ಬಿದ್ದ ಗೋರಂಟಿ ಸೊಪ್ಪು - 100 ಗ್ರಾಂ
* ಕಾಫಿ ಪುಡಿ - 3 ಗ್ರಾಂ
* ಮೊಸರು - 25 ಗ್ರಾಂ
* ನಿಂಬೆರಸ - 4 ಸ್ಫೂನ್
* ಕಾಚು (ಕಗ್ಗಲಿ) - 3 ಗ್ರಾಂ
* ಬ್ರಾಹ್ಮಿ ಚೂರ್ಣ - 10 ಗ್ರಾಂ
* ಬೆಟ್ಟದ ನೆಲ್ಲಿ - 10 ಗ್ರಾಂ

ಎಲ್ಲವನ್ನೂ ಚೆನ್ನಾಗಿ ಬೆರೆಸಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ನೀರಿನಲ್ಲಿ ಸ್ವಚ್ಛಗೊಳಿಸಿಕೊಳ್ಳಬೇಕು. ಈ ರೀತಿ 15 ದಿನಗಳ ಕಾಲ ಕಡ್ಡಾಯವಾಗಿ ಮಾಡಿದರೆ ಕೂದಲು ಕಪ್ಪಾಗುತ್ತದೆ ಎಂದು ನಮ್ಮ ಆಯುರ್ವೇಶ ಶಾಸ್ತ್ರ ಹೇಳುತ್ತದೆ.

No comments