Header Ads

test

ಪೊಲೀಸ್ ಎಂಬ ಪದಕ್ಕೆ ನಿಜವಾದ ಅರ್ಥ ಈತ... ವ್ಯಕ್ತಿಯನ್ನು ರಕ್ಷಿಸಲು 1.5 ಕಿಲೋ ಮೀಟರ್ ಓಟ

ಸಮಾಜದಲ್ಲಿ ಪೊಲೀಸರು ಎಂದರೆ ಭಯ ಇದೆ. ಪೊಲೀಸರು ಎಂದರೆ ರಕ್ಷಿಸುವವರು ಎಂದರ್ಥ. ಹಾಗಾಗಿ ಅವರನ್ನು ಆರಕ್ಷಕ ಎನ್ನುತ್ತಾರೆ. ಆದರೆ ಜನರನ್ನು ಭಯ ಬೀಳಿಸುವವರು ಎಂದು ಇದೀಗ ಅರ್ಥ ಬದಲಾಗಿದೆ. ಪೊಲೀಸರು ಎಲ್ಲೇ ಇದ್ದರೂ ಸಹ ಸಾಮಾನ್ಯರು ಸ್ವಲ್ಪ ಭಯ ಬೀಳುವಂತಾಗಿದೆ. ಆ ಭಯ ಒಳ್ಳೆಯದೇ, ಯಾಕೆಂದರೆ ಪೊಲೀಸರು ಇದ್ದಾರೆ ಎಂದರೆ ಅಪರಾಧ ಮಾಡಲು ಭಯಬೀಳುತ್ತಾರೆ. ಆದರೆ ಪೊಲೀಸರು ಯಾವಾಗಲೂ ಸಹ ಗಂಭೀರವಾಗಿ ಇದ್ದು ಸಾಮಾನ್ಯ ನಾಗರಿಕರ ಬಗ್ಗೆ ಕಠಿಣವಾಗಿ ನಡೆದುಕೊಳ್ಳದಂತೆ ಇರಬೇಕು. ಆ ರೀತಿ ಮಾಡಿದಾಗ ಪೊಲೀಸರ ಬಗ್ಗೆ ಭಯ ಮಾತ್ರ ಅಲ್ಲದೆ ಗೌರವ ಸಹ ಇರುತ್ತದೆ.


ಇತ್ತೀಚೆಗೆ ಮಧ್ಯಪ್ರದೇಶ ಮೂಲದ ಪೊಲೀಸ್ ಪೂನಮ್ ಬಿಲ್ಲೋರೆ ಎಂದರೆ ಪೊಲೀಸ್ ಪದಕ್ಕೆ ನಿಜವಾದ ಅರ್ಥ ಎಂಬಂತೆ ವ್ಯವಹರಿಸಿದ್ದಾರೆ. ಪೂನಮ್ ಬಿಲ್ಲಾರೇ ಕರ್ತವ್ಯದ ನಿಮಿತ್ತ ಒಂದು ಕಡೆ ಇದ್ದರು. ಆ ಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಿಂದ ಓರ್ವ ವ್ಯಕ್ತಿ ಕೆಳಗೆ ಬಿದ್ದ. ಸುದ್ದಿ ತಿಳಿದ ಪೂನಮ್ ಬಿಲ್ಲಾರೇ ಕ್ಷಣಗಳಲ್ಲೇ ಅಲ್ಲಿಗೆ ತಲುಪಿದರು. ರೈಲು ಪ್ರಯಾಣಿಕ ತೀವ್ರ ಗಾಯಗೊಂಡಿದ್ದ. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಬೇಕಿತ್ತು.

ಆದರೆ ಆತ ಜಾರಿ ಬಿದ್ದ ಪ್ರದೇಶದಲ್ಲಿ ಎಲ್ಲೂ ಸಹ ಒಂದು ರಸ್ತೆ ವ್ಯವಸ್ಥೆ ಇರಲಿಲ್ಲ. ಇನ್ನು ವಾಹನಗಳು ಸಿಗುವುದು ದೂರದ ಮಾತಾಯಿತು. ಇದರಿಂದ ಏನು ಮಾಡಬೇಕೋ ಗೊತ್ತಾಗದೆ, ಆ ವ್ಯಕ್ತಿಯನ್ನು ರಕ್ಷಿಸಲು ಪೂನಮ್ ಬಿಲ್ಲೋರೇ ಆತನನ್ನು ತನ್ನ ಭುಜದ ಮೇಲೆ ಹೊತ್ತು ಬಿರಬಿರನೆ ಹೆಜ್ಜೆ ಹಾಕಿದ. ರೈಲ್ವೆ ಟ್ರ್ಯಾಕ್ ಮೇಲೆ ಸುಮಾರು ಒಂದೂವರೆ ಕಿಮೋ ಮೀಟರ್ ಓಡುತ್ತಾ ಅಲ್ಲೇ ಇದ್ದ ಪೊಲೀಸ್ ವಾಹನವನ್ನು ತಲುಪಿದ. ವಾಹನದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಹಾಕಿಕೊಂಡು ಆಸ್ಪತ್ರೆಗೆ ಸಾಗಿಸಿದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಆ ವ್ಯಕ್ತಿ ಚೇತರಿಸಿಕೊಂಡಿದ್ದಾನೆ.

ಇಂದು ಮಾನವೀಯತೆ ಎಂಬುದು ಕಣ್ಮರೆಯಾಗುತ್ತಿದೆ. ನಮ್ಮ ಕಣ್ಣೆದುರೆ ಏನಾದರೂ ದುರಂತ ಸಂಭವಿಸರೂ ನೋಡಿಯೂ ನೋಡದಂತೆ ಹೋಗುವವರು ಅನೇಕ ಮಂದಿ ಇರುತ್ತಾರೆ. ಅಂತಹದ್ದಲ್ಲಿ ಎಲ್ಲೋ ರಸ್ತೆ, ವಾಹನ ಇಲ್ಲದ ಕಡೆ ಈ ರೀತಿ ನೆರವಾಗುವುದು ಎಂದರೆ ನಿಜವಾಗಿಯೂ ಅವರು ಪೊಲೀಸ್ ರೂಪದಲ್ಲಿದ್ದ ಮಾನವೀಯ ಮೂರ್ತಿ ಎನ್ನಬಹುದು. ಸಮಾಜದಲ್ಲಿ ನಿಜವಾಗಿಯೂ ಇಂತಹವರು ಸಾಕಷ್ಟು ಮಂದಿ ಇರುತ್ತಾರೆ. ಅಂತಹ ಪ್ರಾಮಾಣಿಕ, ಮಾನವೀಯತೆ ಇರುವ ಅಧಿಕಾರಿಗಳಿಗೆ ನಾವು ಖಂಡಿತ ಒಂದು ಸೆಲ್ಯೂಟ್ ಹೊಡೆಯಲೇಬೇಕು.

No comments