Header Ads

test

ರಸ್ತೆ ಮೇಲೆ ಒಂದಾ... ಎರಡಾ... ಏಕಾಏಕಿ 14 ಮೆಟ್ಟೆ ಇಟ್ಟ ಹಾವು, ನೋಡಿದರೆ ಶಾಕ್ ಆಗುತ್ತೀರ.

ಕೋಳಿ ಮೊಟ್ಟೆ ಇಡುವುದನ್ನು ನೋಡಿದ್ದೀರಾ... ಎಂದರೆ ಕೂಡಲೆ... ಓ ನೋಡಿರುತ್ತೇವೆ... ನಮ್ಮ ಮನೆಯಲ್ಲಿ ಬಹಳಷ್ಟು ಕೋಳಿಗಳಿವೆ. ತುಂಬಾ ಮೊಟ್ಟೆ ಇಡುತ್ತವೆ ಎಂದು ಬಹಳಷ್ಟು ಉತ್ತರ ನೀಡುತ್ತಾರೆ. ಅದೇ ಹಾವು ಮೊಟ್ಟೆ ಇಡುವುದನ್ನು ನೋಡಿದ್ದೀರಾ ಎಂದರೆ... ಬಾಪ್ ರೇ... ಹಾವನ್ನು ನೋಡಿದರೇನೇ ಅರ್ಧ ಜೀವ ಹೋಗಿರುತ್ತದೆ. ಇನ್ನು ಅದು ಮೊಟ್ಟೆ ಇಡುವುದನ್ನು ನೋಡುವುದೇ... ಅಷ್ಟು ಧೈರ್ಯ ಇಲ್ಲ ಬ್ರದರ್ ಅಂತಿದ್ದೀರಾ. ಮದ್ದೂರಿನ ಉರಿ ಬಿಸಿಲಿನಲ್ಲೇ ಪಟ್ಟಣದ ಶಿಕ್ಷಕರ ಬಡಾವಣೆ ರಸ್ತೆಯಲ್ಲಿ ಜನರ ಎದುರು ನಾಗರಹಾವೊಂದು ಮೊಟ್ಟೆ ಇಟ್ಟ ಅಪರೂಪದ ಪ್ರಸಂಗ ನಡೆದಿದೆ.ಶಿಕ್ಷಕರ ಬಡಾವಣೆಯ ಮನೆಯೊಂದರಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಉರಗ ಪ್ರೇಮಿ ಮಾ.ನಾ.ಪ್ರಸನ್ನ ಕುಮಾರ್ ಅವರಿಗೆ ಸ್ಥಳೀಯರು ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅವರು, ಹಾವು ಹಿಡಿದು ಬಯಲಿನಲ್ಲಿ ಬಿಟ್ಟಾಗ ಮೊಟ್ಟೆ ಇಡಲು ಆರಂಭಿಸಿತು. ಯಾರೂ ಕಾಣಿಸದ ಪ್ರದೇಶದಲ್ಲಿ ಮೊಟ್ಟೆ ಇಡುವ ಹಾವು, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಜನರ ಎದುರಿಗೆ ಸುಮಾರು 14 ಮೊಟ್ಟೆ ಇಟ್ಟು ಅಚ್ಚರಿಗೆ ಕಾರಣವಾಯಿತು.

ಮೊಟ್ಟೆ ಇಟ್ಟ ನಂತರ ಹಾವನ್ನು ಕಾಡಿಗೆ ಬಿಡಲಾಗಿದ್ದು, ಮೊಟ್ಟೆಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಮೊಟ್ಟೆಯಿಂದ ಹಾವಿನ ಮರಿ ಹೊರಗೆ ಬಂದ ನಂತರ ಕಾಡಿಗೆ ಬಿಡುವುದಾಗಿ ಪ್ರಸನ್ನಕುಮಾರ್ ತಿಳಿಸಿದರು.

No comments