Header Ads

test

ಸಾವಪ್ಪಿದರೂ ಪರ್ವಾಗಿಲ್ಲ, ಪಾಕಿಸ್ತಾನಕ್ಕೆ 100 ಬಾಂಬುಗಳಿಂದ... ಮೋದಿ ಬಗ್ಗೆ ಶೃಂಗಾರ ತಾರೆ ಕಾಮೆಂಟ್ಸ್!

ಪುಲ್ವಾಮಾ ಘಟನೆ ನಡೆದ 12 ದಿನಗಳಲ್ಲೇ ಭಾರತ ಜೈಷೆ ಮೊಹಮ್ಮದ್‌ವಿರುದ್ಧ ಪ್ರತೀಕಾರ ತೀರಿಸಿಕೊಂಡು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಭಾರತ ವಾಯುಪಡೆ ಕ್ಷಿಪ್ರ ದಾಳಿ ನಡೆಸಿ ಕೇವಲ 20 ನಿಮಿಷಗಳಲ್ಲಿ ಜೈಷೇ ಮೊಹಮ್ಮದ್ ಉಗ್ರ ನೆಲೆಗಳನ್ನು ನೆಲಕಚ್ಚಿಸಿತು. ಈ ಪ್ರಕ್ರಿಯೆಯಲ್ಲಿ 300 ಮಂದಿ ಉಗ್ರರು ಮೃತಪಟ್ಟಿದ್ದಾರೆ. ಪ್ರತಿ ಭಾರತೀಯನು ಹೆಮ್ಮೆಯಿಂದ ಬೀಗುವಂತೆ ಭಾರತ ಏರ್ ಪೋರ್ಸ್ ಮಾಡಿದೆ. 1000 ಕೆಜಿ ಬಾಂಬ್‌ಗಳನ್ನು ಮಿರಾಜ್ ಯುದ್ಧ ವಿಮಾನ ಸಹಾಯದಿಂದ ನೇರವಾಗಿ ಪಾಕಿಸ್ತಾನಕ್ಕೆ ನುಗ್ಗಿ ಹಾಕಿದ್ದು ವಿಶೇಷ. ಸರ್ಜಿಕಲ್ ಸ್ಟ್ರೈಕ್ 2 ಬಗ್ಗೆ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಶೃಂಗಾರ ತಾರೆ ರಾಖಿ ಸಾವಂತ್ ಮೋದಿ ಬಗ್ಗೆ ಕುತೂಹಲಕರ ಹೇಳಿಕೆ ನೀಡಿದ್ದಾರೆ.


ರಾಖಿ ಸಾವಂತ್ ಎಂದರೆ ಕೂಡಲೆ ನೆನಪಾಗುವುದು ವಿವಾದಗಳು. ಗ್ಲಾಮರ್ ರೋಲ್ಸ್, ಹಾಟ್ ಎಕ್ಸ್ ಪೋಸಿಂಗ್‌ನಿಂದ ಶೃಂಗಾರ ತಾರೆ ಎಂಬ ಮುದ್ರೆ ಹಾಕಿಸಿಕೊಂಡಿದ್ದಾರೆ. ನಿತ್ಯ ಏನೋ ಒಂದು ವಿಷಯದಲ್ಲಿ ಸಂಚಲನ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿ ಇರುವುದು ರಾಖಿ ಸಾವಂತ್‌ಗೆ ಅಭ್ಯಾಸ. ಯಾವುದೇ ಸಂಗತಿಯಾದರೂ ಬಿಗುಮಾನವಿಲ್ಲದೆ ಮಾಧ್ಯಮಗಳ ಮುಂದೆ ಒದರಿಬಿಡುತ್ತಾರೆ. ಸದ್ಯಕ್ಕೆ ಭಾರತ, ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿಯಲ್ಲೂ ಮೋದಿಯನ್ನು ಪ್ರಶಂಸಿಸಿ ರಾಖಿ ಕುತೂಹಲಕರ ಹೇಳಿಕೆಗಳನ್ನು ನೀಡಿದ್ದಾರೆ.

ನಾನು ದೇಶಕ್ಕೆ ಮೊದಲ ಪ್ರಾಮುಖ್ಯತೆ ನೀಡುತ್ತೇನೆ. ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನಕ್ಕೆ ಮೋದಿ ಸರಿಯಾದ ಪಾಠ ಕಲಿಸಿದ್ದಾರೆ. ಈ ಸಮಯದಲ್ಲಿ ಸರಕಾರ ನಿರ್ಧಾರಗಳಿಗೆ ಎಲ್ಲರೂ ಬೆಂಬಲವಾಗಿ ಇರಬೇಕು. ಸರಕಾರದ ನಿರ್ಧಾರಕ್ಕೆ ಅನುಗುಣವಾಗಿ ಭಾರತೀಯ ವಾಯುಪಡೆ ಒಳ್ಳೆಯ ಕೆಲಸ ಮಾಡಿದೆ ಎಂದು ಪ್ರಶಂಸಿದ್ದಾರೆ. ಪುಲ್ವಾಮಾ ಘಟನೆ, ಸರ್ಜಿಕಲ್ ಸ್ಟ್ರೈಕ್ 2 ಬಳಿಕ ಎರಡೂ ದೇಶಗಳ ನಡುವೆ ಉದ್ರಿಕ್ತ ವಾತಾವರಣ ಇದೆ.

ಒಂದು ವೇಳೆ ಅಗತ್ಯಬಿದ್ದರೆ ತಾನು ಸಹ 100 ಬಾಂಬುಗಳನ್ನು ತೆಗೆದುಕೊಂಡು ಪಾಕಿಸ್ತಾನಕ್ಕೆ ಹೋಗಿ ಉಗ್ರರನ್ನು ಮಣ್ಣುಮುಕ್ಕಿಸುತ್ತೇನೆ ಎಂದಿದ್ದಾರೆ. ಈ ಘಟನೆಯಲ್ಲಿ ನನ್ನ ಪ್ರಾಣ ಹೋದರೂ ಪರ್ವಾಗಿಲ್ಲ ಎಂದು ತನ್ನ ದೇಶ ಭಕ್ತಿಯನ್ನು ಮೆರೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಗೆ ಬೆಂಬಲವಾಗಿ ನಿಲ್ಲಲು ತಾನು ಸಿದ್ಧ ಎಂದು ರಾಖಿ ತಿಳಿಸಿದ್ದಾರೆ. ಅಗತ್ಯವಾದರೆ ತಾನು ಸಹ ಆರ್ಮಿಯೊಂದಿಗೆ ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂದಿದ್ದಾರೆ.

ಭಾರತೀಯ ವಾಯುಪಡೆ ಪೈಲಟ್ ಅಭಿನಂದನ್ ಕ್ಷೇಮವಾಗಿ ಮರಳಬೇಕು ಎಂದು ದೇವರನ್ನು ಪ್ರಾರ್ಥಿಸುತ್ತಿರುವುದಾಗಿ ರಾಖಿ ಸಾವಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಲೂಧಿಯಾನಾದಲ್ಲಿ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಸಂದರ್ಭದಲ್ಲಿ ರಾಖಿ ಸಾವಂತ್ ಈ ಹೇಳಿಕೆ ನೀಡಿದ್ದಾರೆ. ಇದು ಈ ರೀತಿ ಇದ್ದರೆ ಶುಕ್ರವಾರ ಅಭಿನಂದನ್ ಬಿಡುಗಡೆಯಾಗಿದ್ದಾರೆ.



No comments