Header Ads

test

10ನೇ ತರಗತಿಯನ್ನು ಅರ್ಧಕ್ಕೆ ಬಿಟ್ಟ ಆ ಯುವಕನ ಸಂಪಾದನೆ ತಿಂಗಳಿಗೆ ಲಕ್ಷ! ಏನು ಮಾಡುತ್ತಿರುತ್ತಾನೆಂದರೆ.!

ಪ್ರತಿಭೆ ಇರಬೇಕೆ ಹೊರತು ಅದಕ್ಕೆ ಓದು, ಬಡತನದಂತಹವು ಯಾವುದೇ ಕಾರಣಕ್ಕೂ ಅಡ್ಡಿಯಾಗಲ್ಲ ಎಂಬುದನ್ನು ನಾವು ಸಾಕಷ್ಟು ಮಂದಿಯ ವಿಚಾರದಲ್ಲಿ ನೋಡಿದ್ದೇವೆ. ಏನೂ ಓದಿಕೊಳ್ಳದಿದ್ದರೂ, ಹಣ ಇಲ್ಲದಿದ್ದರೂ ಕೇವಲ ತಮ್ಮ ನೈಪುಣ್ಯದಿಂದಲೇ ಅದ್ಭುತಗಳನ್ನು ಮಾಡಿ ತೋರಿಸಿದ ಸಾಕಷ್ಟು ಮಂದಿ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ಈಗ ಹೇಳಲಿರುವುದು ಸಹ ಅಂತಹ ಓರ್ವ ಯುವಕನ ಬಗ್ಗೆ.



ಅವರ ಹೆಸರೇ ಹೇಮಂತ್ ಮೆಹ್ರಾ. ಇಷ್ಟಕ್ಕೂ ಇವರು ಏನು ಮಾಡುತ್ತಾರೆ..? ಎಂಬುದೇ ತಾನೆ ನಿಮ್ಮ ಡೌಟ್. ಇನ್ನೇಕೆ ತಡ ಆತ ಸಾಧಿಸಿದ ಕಾರ್ಯ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಧ್ಯಪ್ರದೇಶದಲ್ಲಿನ ಹೊಷಂಗಾಬಾದ್‍ ಮೂಲದ ಹೇಮಂತ್ ಮೆಹ್ರಾ ಆಗ 10ನೇ ತರಗತಿ ಓದುತ್ತಿದ್ದ. ಓದಿನಲ್ಲಿ ತುಂಬಾ ಚೂಟಿಯಾಗಿದ್ದ. ಹೇಗಾದರೂ ಮಾಡಿ ಒಂದು ಗುರಿಯನ್ನು ತಲುಪಿ ಉನ್ನತ ಹುದ್ದೆಗಳಲ್ಲಿ ಇರಬೇಕು ಎಂದು ಆಗಿನಿಂದಲೇ ಹೇಮಂತ್ ಕನಸು ಕಾಣುತ್ತಿದ್ದ. ಆದರೆ ಆತ ಕಂಡ ಕನಸು ಮಾತ್ರ ಅಷ್ಟು ಸುಲಭವಾಗಿ ನೆರವೇರಲಿಲ್ಲ. ಯಾಕೆಂದರೆ ಆಗಷ್ಟೇ ಅವರ ತಂದೆ ದುರದೃಷ್ಟವಶಾತ್ ನಿಧನರಾದರು. ಹಾಗಾಗಿ ಕುಟುಂಬದ ಭಾರವೆಲ್ಲಾ ಹೇಮಂತ್ ಮೇಲೆ ಬಿತ್ತು. ಹಾಗಾಗಿ ಶಿಕ್ಷಣವನ್ನು ಹೇಮಂತ್ ಅರ್ಧಕ್ಕೆ ನಿಲ್ಲಿಸಬೇಕಾಯಿತು.

ಆದರೆ ಹೇಮಂತ್ ತಂದೆ ಸರ್ಕಾರಿ ಉದ್ಯೋಗಿ ಆಗಿದ್ದ ಕಾರಣ ತನ್ನ ತಂದೆ ಉದ್ಯೋಗ ತನಗೆ ಸಿಗುತ್ತದೇನೋ ಎಂಬ ಆಸೆಯಿಂದ ಸರ್ಕಾರಿ ಕಚೇರಿಗೆ ಹೋದ. ಆದರೆ ಆ ಉದ್ಯೋಗ ಬರಬೇಕಾದರೆ ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಎಂದು ಅಲ್ಲಿನ ಅಧಿಕಾರಿ ಹೇಳಿ ಕಳುಹಿಸಿದರು. ಹಾಗಾಗಿ ವಿಧಿಯಿಲ್ಲದೆ ಏನೋ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಬದುಕು ಸವೆಸಬೇಕಾಯಿತು. 18 ವರ್ಷ ತುಂಬುವ ವೇಳೆಗೆ ಹೇಗೂ ಸರಕಾರಿ ಕೆಲಸ ಸಿಗುತ್ತದೆ ಎಂದುಕೊಂಡು ಯಾವುದೋ ಒಂದು ಕೆಲಸ ಮಾಡಿಕೊಂಡಿದ್ದ ಹೇಮಂತ್. ಹದಿನೆಂಟು ವರ್ಷಗಳು ತುಂಬುವ ವೇಳೆ ಹೋಗಿ ಕೇಳಿದರೆ ವಿದ್ಯಾರ್ಹತೆ ಇಲ್ಲದ ಕಾರಣ ಉದ್ಯೋಗ ಕೊಡಲ್ಲ ಎಂದು ಹೇಳಿದರು. ಹಾಗಾಗಿ ಹೇಮಂತ್‌ಗೆ ಏನು ಮಾಡಬೇಕೋ ಅರ್ಥವಾಗಲಿಲ್ಲ. ಆಗ ನ್ಯೂಸ್ ಪೇಪರ್‌ನಲ್ಲಿ ಬಂದ ಕಥೆಯೊಂದು ಅವರ ಜೀವನವನ್ನೇ ಬದಲಾಯಿಸಿತು. ಅದೇನೆಂದರೆ...

ವೆಬ್, ಆಪ್ ಡೆವಲಪ್‍ಮೆಂಟ್‌ಗೆ ಒಳ್ಳೆಯ ಬೇಡಿಕೆ ಇದೆ ಎಂದು, ಅದರಲ್ಲಿ ಉದ್ಯೋಗವಕಾಶಗಳು ಸಹ ಚೆನ್ನಾಗಿ ಇವೆ ಎಂದು ಒಂದು ಸುದ್ದಿ ಪತ್ರಿಕೆಯಲ್ಲಿ ಹೇಮಂತ್ ಓದಿದ. ಹಾಗಾಗಿ ಆತನಿಗೆ ಒಂದು ಆಲೋಚನೆ ಬಂತು. ಹೇಗಾದರೂ ಆ ಕ್ಷೇತ್ರದಲ್ಲಿ ತಾನು ಮುಂದೆ ಬರಬೇಕು ಎಂದುಕೊಂಡ. ಅಂದುಕೊಂಡಿದ್ದೇ ತಡ ತನ್ನ ಕೆಲಸ ಆರಂಭಿಸಿದ. ತಾನಿದ್ದ ಪಟ್ಟಣದಲ್ಲಿ ಕಂಪ್ಯೂಟರ್ ಕೋರ್ಸ್ ಕಲಿಸಲು ಯಾರು ಇಲ್ಲದ ಕಾರಣ, ದೂರದ ಊರಿಗೆ ಹೋಗಲು ತನ್ನಲ್ಲಿ ಅಷ್ಟು ಹಣ ಇಲ್ಲದ ಕಾರಣ, ತಾನಿದ್ದ ಜಾಗದಲ್ಲೇ ಇದ್ದ ಇಂಟರ್ನೆಟ್ ಕೆಫೆಗಳಿಗೆ ಹೋಗುತ್ತಿದ್ದ.

ಕೆಫೆಗಳಲ್ಲಿ ಗಂಟೆಗಟ್ಟಲೆ ಕುಳಿತು ಆಪ್ ಡೆವಲಪ್‌ಮೆಂಟ್‌ಗೆ ಸಂಬಂಧಿಸಿದ ಕೋಡಿಂಗ್ ಕಲಿಯಲು ಆರಂಭಿಸಿದ. ಸ್ವತಃ ಬುದ್ಧಿವಂತನಾಗಿದ್ದ ಕಾರಣ ಆತನಿಗೆ ಶೀಘ್ರದಲ್ಲೇ ಆಯಾ ಕೋರ್ಸ್‌ಗಳು ಬಂದುಬಿಟ್ಟವು. ಆದರೆ ಅದೇ ಸಮಯದಲ್ಲಿ ತನ್ನ ಅಜ್ಜಿ ಲ್ಯಾಪ್‍ಟಾಪ್, ಇಂಟರ್‌ನೆಟ್ ಸೌಲಭ್ಯ ಕೊಡಿಸಿದ ಕಾರಣ ಅವನ್ನೆಲ್ಲಾ ಕಲಿಯಲು ಸಾಕಷ್ಟು ಸಮಯ ಸಿಕ್ಕಂತಾಯಿತು. ಆ ರೀತಿ ಸಿಕ್ಕ ಸಮಯವನ್ನು ಹೇಮಂತ್ ಸಂಪೂರ್ಣ ಬಳಸಿಕೊಂಡ. ಕೊನೆಗೂ ಸ್ವತಃ ಮೊದಲ ಆಪ್ ತಯಾರಿಸಿದ. ಅದರ ಹೆಸರು Mappi. ಆ ರೀತಿ ಆರಂಭವಾದ ಆತನ ಆಪ್ ಡೆವಲಪ್‌ಮೆಂಟ್ ಮುಂದುವರೆಯಿತು. ಗೇಮ್ಸ್, ಯುಟಿಲಿಟೀಸ್ ನಂತಹ ಅಂಶಗಳಲ್ಲಿ 15 ಆಪ್‌ಗಳನ್ನು ಅನತಿ ಕಲದಲ್ಲೇ ಸೃಷ್ಟಿಸಿದ. ಅವುಗಳ ಮೂಲಕ ಆತನಿಗೆ ಬರುತ್ತಿರುವ ಆದಾಯ ಎಷ್ಟು ಗೊತ್ತಾ? ತಿಂಗಳಿಗೆ ರೂ.1 ಲಕ್ಷ. ಹೌದು ನೀವು ಕೇಳಿದ್ದು ನಿಜ.

No comments