Header Ads

test

ಪೇಸ್‌ಬುಕ್ CEO ಜುಕರ್ ಬರ್ಗ್... ಬಾತ್‍ರೂಂ ಲವ್ ಸ್ಟೋರಿ ಬಗ್ಗೆ ನಿಮಗೆ ಗೊತ್ತಾ?

ಫೇಸ್‍ಬುಕ್ ವ್ಯವಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಲವ್ ಸ್ಟೋರಿ ಒಂದು ಬಾತ್ ರೂಂ ಮುಂದೆ ಆರಂಭವಾಯಿತು. ಕೇಳಲು ಅಚ್ಚರಿ ಅನ್ನಿಸಿದರೂ ಇದು ನಿಜ. 2003ರಲಿ ಜುಕರ್ ಬರ್ಗ್ ಬಂಧುಗಳ ಮನೆಗೆ ಹುಟ್ಟುಹಬ್ಬ ಸಂದರ್ಭದಲ್ಲಿ ಬಂದಿದ್ದ. ಅದೇ ಫಂಕ್ಷನ್‌ಗೆ ಪ್ರಿಸಿಲ್ಲಾ ಛಾನ್ ಕುಟುಂಬ ಸಹ ಹಾಜರಾಗಿತ್ತು. ಪಾರ್ಟಿ ಪ್ಲೇಸ್ ಚಿಕ್ಕದಾಗಿ ಇದ್ದದ್ದು ಅದರ ಜತೆಗೆ ಒಂದೇ ಬಾತ್ ರೂಂ ಇದ್ದ ಕಾರಣ ಫಂಕ್ಷನ್‌ಗೆ ಬಂದಿದ್ದ ಕೆಲವು ಮಂದಿ ಬಾತ್ ರೂಂ ಮುಂದೆ ಕ್ಯೂ ನಿಂತಿದ್ದರು..! ಈ ಹಿನ್ನೆಲೆಯಲಿ ಪ್ರಿಸಿಲ್ಲಾ ಛಾನ್‌ರನ್ನು ನೋಡಿದ ಜುಕರ್ ಬರ್ಗ್... ಲವ್ ಅಟ್ ಫಸ್ಟ್ ಸೈಟ್ ಎಂಬಂತೆ ನೋಡಿದ ಕೂಡಲೆ ಛಾನ್‌ರನ್ನು ಇಷ್ಟಪಟ್ಟ ಜುಕರ್.


ಆ ಬಳಿಕ ಇವರಿಬ್ಬರೂ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಓದಿದ್ದು...2003ರಲ್ಲಿ ಶುರುವಾದ ಪ್ರೇಮವನ್ನು ಅದೇ ರೀತಿ ಮುಂದುವರೆಸುತ್ತಾ...ಒಬ್ಬರಿಗೊಬ್ಬರು ಸಹಾಯ.. ಮಾಡಿಕೊಳ್ಳೂತ್ತಾ ಜೀವನದಲ್ಲಿ ಸೆಟ್ಲ್ ಆದಮೇಲೆ 2012ರಲ್ಲಿ ಮದುವೆಯಾದರು. ಛಾನ್ ಅವರ ಮನೆಯಲ್ಲಿ ಈ ಮದುವೆಯನ್ನು ಒಪ್ಪಿಕೊಳ್ಳಲಿಲ್ಲ...ಆದರೂ ಛಾನ್ ಎದುರಿಸಿ ಮಾರ್ಕ್ ಜತೆಗೆ ಜೀವನ ಪಯಣ ಆರಂಭಿಸಿದರು. ಛಾನ್ ಪೂರ್ವಿಕರು ಚೀನಾದಿಂದ ವಲಸೆ ಬಂದು ಅಮೆರಿಕಾದಲ್ಲಿ ಸೆಟ್ಲ್ ಆಗಿದ್ದ ಕುಟುಂಬ.

ಪಿಡಿಯಾಟ್ರಿಷಿಯನ್, ಫಿಲಾಂತ್ರಫಿಸ್ಟ್‌ನಲ್ಲಿ ಡಿಗ್ರಿ ಮಾಡಿದ್ದ ಛಾನ್... ಮಹಿಳಾ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಗಂಡನಿಗೆ ಸಲಹೆಗಳನ್ನು ನೀಡುತ್ತಾ ಒಂದು ವಿಶೇಷ ಮನ್ನಣೆಗೆ ಪಾತ್ರವಾಗುತ್ತಾ ಮುಂದೆ ಸಾಗುತ್ತಿದ್ದಾರೆ!

ಮಗಳು ಮ್ಯಾಕ್ಸಿಮಾ ಜನಿಸಿದ ಖುಷಿಯಲ್ಲಿ ಸುಮಾರು 45 ಶತಕೋಟಿ ಡಾಲರ್ ಮೊತ್ತದ ಫೇಸ್ ಬುಕ್ ಷೇರಿನ ಶೇ.99ರಷ್ಟು ಭಾಗವನ್ನು ದಾನ, ಧರ್ಮ ನೀಡಲು ನಿರ್ಧರಿಸಿರುವುದಾಗಿ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಮತ್ತು ಪತ್ನಿ ಪ್ರೆಸಿಲ್ಲಾ ಘೋಷಿಸಿದ್ದರು. ಜಗತ್ತಿನ ಎಲ್ಲಾ ಮಕ್ಕಳ ಶ್ರೇಯಸ್ಸಿಗಾಗಿ ನಾವು ನಮ್ಮಿಂದಾದ ಸಣ್ಣ ನೆರವು ನೀಡಲು ನಾವು ಈ ಸಂದರ್ಭದಲ್ಲಿ ನಿರ್ಧರಿಸಿದ್ದೇವೆ. ಹಾಗಾಗಿ ನಾವು ಫೇಸ್ ಬುಕ್ ನ ಶೇ.99ರಷ್ಟು ಶೇರುಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ. ಇದು ಮುಂದಿನ ಪೀಳಿಗೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

No comments