Header Ads

test

ಮಂಟಪದಲ್ಲೇ ವರನಿಗೆ ಶಾಕ್ ನೀಡಿದ ವಧು, ಟ್ವಿಸ್ಟ್ ನೀಡಿದ ವರಮಹಾಶಯ, ಇಷ್ಟಕ್ಕೂ ಏನು ನಡೆಯಿತೆಂದರೆ..?

ನಿಲ್ಲಿಸಿ... ಮಂಟಪದಲ್ಲಿ ಮದುವೆ ನಡೆಯುತ್ತಿದ್ದಾಗ ಸರಿಯಾಗಿ ತಾಳಿ ಕಟ್ಟುವ ಮುನ್ನ ಸಿನಿಮಾಗಳಲ್ಲಿ ನಮಗೆ ಕೇಳಿಸುವ ಡೈಲಾಗ್... ಬೇಸಿಕ್ ಆಗಿ ವರದಕ್ಷಿಣೆ ಹೆಚ್ಚಾಗಿ ಕೇಳುತ್ತಿದ್ದಾರೆಂದೋ, ಹುಡುಗಿ ಬೇರೆಯವರನ್ನು ಪ್ರೀತಿಸಿದ್ದಾಳೆ ಎಂದೋ, ಇಲ್ಲದಿದ್ದರೆ ಹುಡುಗ ಮೋಸಗಾರ ಎಂದೋ... ಮದುವೆಯಲ್ಲಿ ಗಂಡಿನ ಕಡೆಯವರಿಗೆ ಮರ್ಯಾದೆ ಸರಿಯಾಗಿ ಮಾಡಲಿಲ್ಲ ಎಂದೋ... ಈ ರೀತಿ ನಾನಾ ಕಾರಣಗಳಿಂದ ಮದುವೆ ನಿಲ್ಲಿಸಿದ ಘಟನೆಗಳಿವೆ. ಆದರೆ ಹುಡುಗನಿಗೆ ಬೊಕ್ಕ ತಲೆ ಇದೆ ಎಂದು ಮದುವೆ ನಿಲ್ಲಿಸಿದ್ದನ್ನು ಎಂದಾದರೂ ಕೇಳಿದ್ದೀರಾ... ಮದುಮಗನಿಗೆ ಬೊಕ್ಕತಲೆ ಇದೆ ಎಂಬ ಕಾರಣದಿಂದ ಮದುವೆ ಬೇಡ ಎಂದಳು ಮದು ಮಗಳು... ಆದರೂ ಮದುವೆ ನಡೆಯಿತು ಹೇಗೆ ಗೊತ್ತಾ??


ನವದೆಹಲಿ ಮೂಲದ ನ್ಯೂರಾಲಜಿಸ್ಟ್ ವೈದ್ಯರಾದ ರವಿಕುಮಾರ್ ಬಿಹಾರ್‌ನಲ್ಲಿನ ಚಂಪಾರನ್‌ನಲ್ಲಿನ ಸುಗಾಲಿ ಗ್ರಾಮದ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಕೊನೆಯ ನಿಮಿಷದಲ್ಲಿ ಯುವತಿ ಡಾಕ್ಟರ್ ರವಿಕುಮಾರ್ ಅವರನ್ನು ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ. ಮದುವೆ ಮಂಟಪದಲ್ಲೇ ಯುವಕನೊಂದಿಗೆ ವಿವಾಹಕ್ಕೆ ಆ ಯುವತಿ ಅಂಗೀಕರಿಸಲಿಲ್ಲ. ಇದರಿಂದಾಗಿ ವಿವಾಹವನ್ನು ಅಲ್ಲಿಂದಲ್ಲೇ ರದ್ದು ಮಾಡಿಕೊಂಡರು. ಆದರೆ ಅದೇ ಸಮಯಕ್ಕೆ ಇನ್ನೊಬ್ಬ ಯುವತಿ ಜತೆಗೆ ಡಾಕ್ಟರ್ ರವಿಕುಮಾರ್ ವಿವಾಹ ನಡೆಯಿತು. ಈ ಘಟನೆ ಸ್ಥಳೀಯವಾಗಿ ಸಂಚಲನಕ್ಕೆ ಕಾರಣವಾಗಿತ್ತು.

ಮದು ಮಗ ಟೋಪಿ ತೆಗೆದು ಮದುವೆ ಮಂಟಪಕ್ಕೆ ಬಂದ ಕಾರಣ, ಆತನಿಗೆ ತಲೆಯಲ್ಲಿ ಕೂದಲಿರಲಿಲ್ಲ... ಬೊಕ್ಕ ತಲೆ ಇದೆ ಎಂಬ ಸಂಗತಿ ವಧುವಿಗೆ ಗೊತ್ತಾಯಿತು. ಇದರಿಂದ ಮದುವೆಗೆ ಒಪ್ಪಿಕೊಳ್ಳಲಿಲ್ಲ. ಈ ಗಂಡು ನನಗೆ ಬೇಡ ಎಂದರೆ ಬೇಡ ಎಂದು ಹಠ ಹಿಡಿದಳು. ವಧುವಿನ ತಂದೆ ತಾಯಿ ಸಹ ಮಗಳು ಹೇಳಿದ ಮಾತಿಗೆ ಕಟ್ಟುಬಿದ್ದರು. ಇದರಿಂದಾಗಿ ಆ ವಿವಾಹ ಮುರಿದು ಬಿತ್ತು. ಆ ಸಮಯದಲ್ಲಿ ಏನು ಮಾಡಬೇಕೋ ಅರ್ಥವಾಗಲಿಲ್ಲ. ಅದರಿಂದ ಗ್ರಾಮದ ಹಿರಿಯರು ಅದೇ ಗ್ರಾಮದ ಇನ್ನೊಬ್ಬ ಯುವತಿಯೊಂದಿಗೆ ರವಿಕುಮಾರ್‌ಗೆ ಅದೇ ಮುಹೂರ್ತದಲ್ಲಿ ವಿವಾಹ ಮಾಡಿದರು. ವಿವಾಹಕ್ಕೆ ಹಾಜರಾದ ಡಾಕ್ಟರ್ ರವಿಕುಮಾರ್ ಬಂಧುಗಳು ಹೊಸ ದಂಪತಿಗಳನ್ನು ನೋಡಿ ಚಕಿತರಾದರು. ನಿಶ್ಚಿತಾರ್ಥದ ದಿನ ವಧುವಿನ ಸ್ಥಾನದಲ್ಲಿದ್ದ ಹುಡುಗಿ ಜಾಗದಲ್ಲಿ ಬೇರೆ ಹುಡುಗಿ ಇರುವುದನ್ನು ನೋಡಿದ ಬಂಧುಗಳು ಶಾಕ್ ಆಗಿದ್ದಾರೆ. ಇದೇ ನೋಡಿ ವಿಧಿ ವಿಚಿತ್ರ ಎಂದರೆ... ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದಕ್ಕೆ ಇದೇ ಉದಾಹರಣೆ ಅಲ್ಲವೇ..?

No comments