Header Ads

test

ಟಮೊಟೋ ಕೊಡದಕ್ಕೆ ಭಾರತದ ಮೇಲೆ ಆಟಂ ಬಾಂಬ್ ಹಾಕಬೇಕು ಎಂದ ಪಾಕ್ ಜರ್ನಲಿಸ್ಟ್..! ನಮ್ಮವರು ಹೇಗೆಲ್ಲಾಟ್ರೋಲ್ ಮಾಡುತ್ತಿದ್ದಾರೆ ನೋಡಿ!

ಪುಲ್ವಾಮಾ ಉಗ್ರದಾಳಿ ಹಿನ್ನೆಲೆಯಲ್ಲಿ ಪಾಕ್ ಮೇಲೆ ಎಲ್ಲ ಕಡೆಯಿಂದಲೂ ಭಾರತ ಒತ್ತಡ ತರುತ್ತಿದೆ. "ಅತ್ಯಂತ ಆಪ್ತ ದೇಶ" ಎಂದು ನೀಡಿದ್ದ ಸ್ಥಾನಮಾನವನ್ನು ಭಾರತ ಹಿಂಪಡೆದಿದೆ. ಭಾರತ ಆಮದು ಸುಂಕವನ್ನು ಶೇ.200ರಷ್ಟು ಹೆಚ್ಚಿಸಿದೆ. ಇನ್ನೊಂದು ಕಡೆ, ಪುಲ್ವಾಮಾ ದಾಳಿಯನ್ನು ಖಂಡಿಸಿ ಭಾರತದ ವ್ಯಾಪಾರಿಗಳು ಪಾಕ್‍‌ಗೆ ಟಮೋಟಾ ರಫ್ತನ್ನು ನಿಲ್ಲಿಸಿದ್ದಾರೆ. ಬೇಕಿದ್ದರೆ ಉಚಿತವಾಗಿ ಕಳುಹಿಸುತ್ತೇವೆ, ಆದರೆ ಪಾಕಿಸ್ತಾನಕ್ಕೆ ಮಾತ್ರ ಕಳುಹಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಭಾರತದಿಂದ ಟೋಮೊಟಾ ಸರಬರಾಜು ನಿಂತು ಹೋದ ಕಾರಣ ಪಾಕ್‌ನಲ್ಲಿ ಟಮೋಟೊ ಬೆಲೆ ಗಗನಕ್ಕೇರಿದೆ. ಒಂದು ಕೆಜಿ ಟಮೊಟೊ ಬೆಲೆ ರೂ.200ರ ಗಡಿ ದಾಟಿದೆ. ಇನ್ನೊಂದು ಕಡೆ, ಗಡಿಯಲ್ಲಿ ಟಮೊಟೊ ಲಾರಿಗಳು ಭಾರಿ ಸಂಖ್ಯೆಯಲ್ಲಿ ನಿಂತುಹೋಗಿವೆ. ದೇಶದಲ್ಲಿ ಟಮೊಟೋ ಕೊರತೆ ಉಂಟಾದ ಕಾರಣ ಪಾಕ್ ಮಾಧ್ಯಮಗಳು ಸಹ ಆತಂಕ ವ್ಯಕ್ತಪಡಿಸಿವೆ.

ಈ ವಿಚಾರವಾಗಿ ಓರ್ವ ಪಾಕ್ ಪತ್ರಕರ್ತ ಪ್ರತಿಕ್ರಿಯಿಸುತ್ತಾ... ಭಾರತದ ಮೇಲೆ ಆಟಂ ಬಾಂಬ್ ಹಾಕಬೇಕು ಎಂದು ಹೇಳಿದ್ದಾನೆ. ಟಮೊಟಾಗಾಳಿಂದ ಮೋದಿ, ರಾಹುಲ್ ಮುಖಕ್ಕೆ ಹೊಡೆಯುತ್ತೇವೆ ಎಂದು, ಟಮೊಟಾಗಳಿಗೆ ಅಣುಬಾಂಬ್‌ಗಳಿಂದ ಉತ್ತರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಪಾಕ್ ಪತ್ರಕರ್ತನ ಹೇಳಿಕೆ ಬಗ್ಗೆ ನೆಟ್ಟಿಗರು ಗರಂ ಆಗಿದ್ದು, ತಮ್ಮದೇ ಶೈಲಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಒಳ್ಳೆಯ ಮನರಂಜನೆ ನೀಡಿದ್ದೀರ ಎಂದು ಕೆಲವರು ಹಾಸ್ಯ ಮಾಡಿದ್ದಾರೆ. ಕೆಲವರಾದರೆ ಭಾರತವನ್ನು ಆಟಂ ಬಾಂಬ್‌ನಿಂದ ಕಾಪಾಡಲು ಆ ಭಿಕಾರಿ ಪಾಕಿಸ್ತಾನಕ್ಕೆ 3 ಕೆಜಿ ಟಮೊಟೋ ಕಳುಹಿಸಿ ಬಿಡ್ರೋ" ಎಂದು ಟ್ವೀಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇನ್ನೂ ಒಂದು ಜೋಕ್ ಹೇಳು ಪ್ಲೀಸ್ ಎಂದು ಆ ಪತ್ರಕರ್ತನನ್ನು ಗೋಳು ಹೊಯ್ದುಕೊಂಡಿದ್ದಾರೆ.

ಈ ಮಹಾನುಭಾವ ಮಾತನಾಡುತ್ತಿದ್ದರೆ. ಆತನ ಹಿಂದೆ ಇರುವ ಸಹದ್ಯೋಗಿಗಳು ಆತನ ಮಾತುಗಳಿಗೆ ನಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇನ್ನೂ ಈತನ ಮಾತನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವೇ ಎಂದು ಒಬ್ಬರು ಟೀಕಿಸಿದ್ದಾರೆ.
ಮತ್ತೊಂದು ಟ್ವಿಟರ್ ಪ್ರತಿಕ್ರಿಯೆ: ಇದ್ಯಾವುದೊ ಪಾಕಿಸ್ತಾನದ ಟಿವಿ ಛಾನಲ್ ಭಾರತೀಯರಿಗೆ ಪುಕ್ಕಟೆ ಮನರಂಜನೆ ನೀಡುವುದಕ್ಕೆ ಇದೆ ಏನೋ ಎಂದು ಲೇವಡಿ ಮಾಡಿದ್ದಾರೆ. ಈ ಮಹಾನುಭಾವ 2ನಿಮಿಷ 28ಸೆಕೆಂಡ್‍ಗಳ ಕಾಲ ಮಾತನಾಡಿರುವ ವಿಡಿಯೋ ಇದೆ.

ಈತನ ಹೇಳಿಕೆಯಲ್ಲಿ 18ಭಾರಿ ತೌಬಾ ತೌಬಾ(ಪಶ್ಚಾತಾಪ ರೀತಿ) ಉದ್ಘಾರಗಳಿವೆ. ಈತನ ಮಾತು ಎಷ್ಟು ಗಂಭೀರ ಎಂದು ಇದರಿಂದ ಗೊತ್ತಾಗುತ್ತದೆ ಎಂದು ಮತ್ತೊಬ್ಬರು ಛೇಡಿಸಿದ್ದಾರೆ.

watch video :
https://youtu.be/bxB_vvy2DSQNo comments