Header Ads

test

ತನ್ನನ್ನು ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾದ ಹುಡುಗಿ ಮೇಲೆ ಆತ ರಿವೇಂಜ್ ತೆಗೆದುಕೊಂಡ, ಚಾಟ್ಎಲ್ಲವನ್ನೂ ತೋರಿಸಿದ

ಬಹಳಷ್ಟು ಮಂದಿ ಹುಡುಗಿಯರು ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುವ ಹುಡುಗರಿಗೆ ಮೋಸ ಮಾಡಿ ಇನ್ನೊಬ್ಬರನ್ನು ಮದುವೆಯಾಗುತ್ತಾರೆ. ಇಂತಹ ಘಟನೆಗಳನ್ನು ನಾವು ನಿತ್ಯ ನೋಡುತ್ತಿರುತ್ತೇವೆ. ಕೇಳುತ್ತಿರುತ್ತೇವೆ. ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ನಮ್ಮಲ್ಲಿ ಕೆಲವರು ಇವನ್ನು ಸ್ವತಃ ಅನುಭವಿಸಿರುತ್ತಾರೆ ಕೂಡ. ಅದುವರೆಗೂ ನೀನೇ ನನ್ನ ಪ್ರಾಣ ನೀನಿಲ್ಲದಿದ್ದರೆ ಜೀವನವೇ ಇಲ್ಲ ಎಂಬಂತೆ ವರ್ತಿಸಿದ ಹುಡುಗಿ ಬಳಿಕ ಇನ್ನೊಬ್ಬನನ್ನು ಮದುವೆಯಾಗಿ ಹ್ಯಾಪಿಯಗಿ ಇರುತ್ತಾಳೆ. ಆಕೆ ಎಲ್ಲೇ ಇರಲಿ ಹಾಯಾಗಿರಲಿ ಎಂದು ಭಾವಿಸುವ ಪ್ರೇಮಿ ತನ್ನ ದಾರಿಯಲ್ಲಿ ತಾನು ಮೌನವಾಗಿ ಹೊರಟು ಹೋಗುತ್ತಾನೆ. ಅದರೆ ಎಲ್ಲ ಹುಡುಗರೂ ಹಾಗೆಯೇ ಇರಲ್ಲ. ಕೆಲವು ಹುಡುಗರು ತನಗೆ ಮೋಸ ಮಾಡಿದ ಯುವತಿಗೆ ಪಾಠ ಕಲಿಸಬೇಕು ಎಂದುಕೊಳ್ಳುತ್ತಾರೆ. ನನ್ನನ್ನು ಮೋಸ ಮಾಡಿದ ಯುವತಿಗೆ ತಾನೇನು ಎಂಬುದನ್ನು ತೋರಿಸಬೇಕು ಎಂದುಕೊಳ್ಳುತ್ತಾರೆ.


ಆತ ಸಹ ಅದೇ ರೀತಿ ಮಾಡಿದ. ಆತನ ಪ್ರೀತಿಗೆ ಒಂದು ದಿನ ಪ್ರೀತಿಸಿದ ಹುಡುಗಿ ಬ್ರೇಕಪ್ ಹೇಳಿ ಹೊರಟು ಹೋದಳು. ತುಂಬಾ ನೋವನುಭವಿಸಿದ. ಕುಗ್ಗಿಹೋದ. ಆಕೆಯನ್ನು ಮನೆಯವರು ತುಂಬಾ ತೊಂದರೆ ಕೊಟ್ಟಿದ್ದಾರೆ ಅನ್ನಿಸುತ್ತದೆ ಅದಕ್ಕೇ ತನ್ನನ್ನು ಬಿಟ್ಟು ಹೊರಟು ಹೋಗುತ್ತಿದ್ದಾಳೆ ಎಂದು ಮೌನವಾಗಿ ಇದ್ದುಬಿಟ್ಟ. ಆದರೆ ಅಸಲಿ ಸಂಗತಿ ಗೊತ್ತಾಗುವ ಹೊತ್ತಿಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ.

ಆಕೆ ಹೆಸರು ಸಾಮಿಯಾ. ಹುಡುಗನ ಹೆಸರು ಅನಿಕ್. ಸಾಮಿಯಾ ಆತನ ಜತೆಗೆ 8 ತಿಂಗಳ ಕಾಲ ಜತೆಯಾಗಿಯೇ ಓಡಾಡಿದಳು. ಇಬ್ಬರೂ ಜತೆಯಾಗಿ ಮದುವೆ ಬಳಿಕ ಮಾಡಬೇಕಾದ ಕೆಲಸಗಳನ್ನು ಮೊದಲೇ ಮಾಡಿದರು. ಓಡಾದದ ಜಾಗ ಅಂತೂ ಇಲ್ಲ. ಇಬ್ಬರೂ ಏಕಾಂತ ಸೇವೆಯಲ್ಲಿ ಸಾಕಷ್ಟು ಸಲ ತೇಲಾಡಿದ್ದಾರೆ. ಅವಳನ್ನೇ ಮದುವೆಯಾಗಬೇಕು ಎಂದು ಕನಸು ಕಂಡಿದ್ದ.ಆದರೆ ಸಾಮಿಯಾ ಮಾತ್ರಾ ಪಕ್ಕಾ ಪ್ಲಾನ್ ಪ್ರಕಾರ ಪ್ರೀತಿಸಿದ್ದ ಹುಡುಗನ ಬಳಿ ಬಂದು, ಏನೂ ತಿಳಿದುಕೊಳ್ಳಬೇಡ, ನಮ್ಮ ಮನೆಯವರು ನನ್ನನ್ನು ಬೆದರಿಸುತ್ತಿದ್ದಾರೆ ಹಾಗಾಗಿ ನಿನಗೆ ಬ್ರೇಕಪ್ ಹೇಳುತ್ತಿದ್ದೇನೆ ಎಂದು ಹೇಳಿ ಹೊರಟು ಹೋದಳು. ಅವನ ಹೃದಯ ನುಚ್ಚು ನೂರಾಗುವಂತಾಯಿತು.

ಅವಳ ಮೇಲೆ ಅಷ್ಟೆಲ್ಲಾ ಆಸೆ ಇಟ್ಟುಕೊಂಡರೆ ಇದೇನಿದು ಈ ರೀತಿ ಮಾಡಿದಳು ಎಂದು ನರಳಾಡಿದ. ಆದರೂ ಅವಳಿಗೆ ಅದೆಷ್ಟು ಕಷ್ಟಗಳಿವೆಯೋ ಏನೋ ಎಂದುಕೊಂಡ. ಆದರೆ ಅನಿಕ್‌ಗೆ ಅಸಲಿ ಸಂಗತಿ ಗೊತ್ತಾಯಿತು. ಸಾಮಿಯಾ ಗೆಳೆಯರು ಅನಿಕ್‌ಗೆ ಎಲ್ಲವನ್ನೂ ತಿಳಿಸಿದರು. ಆಕೆ ನಿನ್ನೊಂದಿಗೆ ತಿರುಗಾಡಿದಷ್ಟು ದಿನ ತಿರುಗಾಡಿದಳು. ಈಗ ಮೋಸ ಮಾಡಿ ಹೊರಟು ಹೋದಳು ಎಂದರು.

ಸಾಮಿಯಾ ಬರುವ ತಿಂಗಳು ವಿದೇಶಗಳಲ್ಲಿ ಸೆಟ್ಲ್ ಆಗಿರುವ ಓರ್ವ ಎನ್‌ಆರ್‌‍ಐರನ್ನು ಮದುವೆಯಾಗುತ್ತಿದ್ದಾರೆ. ಹಾಗಾಗಿಯೇ ನಿನಗೆ ಹ್ಯಾಂಡ್ ಕೊಟ್ಟು ಹೋಗುತ್ತಿದ್ದಾಳೆ. ಅವಳಿಗೆ ಮನೆಯಲ್ಲಿ ಯಾವುದೇ ರೀತಿಯ ಒತ್ತಡ ಇಲ್ಲ. ನಿನ್ನನ್ನು ಚೆನ್ನಾಗಿ ಬಳಸಿಕೊಂಡಳು. ಈ ದಿನ ನಿನಗಿಂತಲೂ ಒಳ್ಳೆಯ ಸ್ಥಾನದಲ್ಲಿರುವವ ಸಿಕ್ಕಿದ್ದಾನೆ. ಅದಕ್ಕೇ ನಿನ್ನನ್ನು ಬಿಟ್ಟಳು ಎಂದು ಸ್ನೇಹಿತರು ತಿಳಿಸಿದರು.ಅನಿಕ್ ತುಂಬಾ ನೋವನುಭವಿಸಿದ. ನನ್ನನ್ನು ಇಷ್ಟೆಲ್ಲಾ ಮೋಸ ಮಾಡುತ್ತೀಯ, ಹಾಗಿದ್ದರೆ ನಾನೇನು ಎಂದು ತೋರಿಸುತ್ತೇನೆ ಎಂದ ಅನಿಕ್. ಸಾನಿಯಾ ಮದುವೆಗೆ ಹೋದ. ಅಲ್ಲಿನ ಔತಣದಲ್ಲಿ ಪಾಲ್ಗೊಂಡ. ಹೊಟ್ಟೆ ತುಂಬ ತಿಂದ. ಬಳಿಕ ಮದುವೆಗೆ ಬಂದ ಬಂಧುಗಳಿಗೆಲ್ಲಾ ಸಾಮಿಯಾ ಜತೆಗೆ ತಾನು ಜಾಲಿಯಾಗಿ ಕಳೆದ ಫೋಟೋಗಳನ್ನು ನೀಡಿದ. ಜೊತೆದೊಂದು ಪಾಮ್‍ಪ್ಲೇಟ್ ಸಹ ಕೊಟ್ಟ. ಅವೆಲ್ಲವನ್ನೂ ನೋಡಿದ ಕೂಡಲೆ ಇವರಿಬ್ಬರೂ ಎಷ್ಟು ಗಾಢವಾಗಿ ಪ್ರೀತಿಸಿಕೊಂಡಿದ್ದಾರೆ ಎಂಬುದು ಅರ್ಥವಾಯಿತು.

ಅವನು ಕೊಟ್ಟ ಪಾಮ್ ಪ್ಲೇಟ್‌ನಲ್ಲಿ ಅನಿಕ್, ಸಾಮಿಯಾ ವಾಟ್ಸಾಪ್‌ನಲ್ಲಿ ಮಾಡಿರುವ ಚಾಟ್ ಸಹ ಇತ್ತು. ಪ್ರತಿ ಪದವನ್ನೂ ಅದರಲ್ಲಿ ಹಾಕಿಸಿದ್ದ. ಬೇಬಿ ಊಟ ಆಯಿತಾ ಎಂಬಲ್ಲಿಂದ ಹಿಡಿದು ನಿನ್ನ ಜತೆಗೆ ಒಮ್ಮೆ ಕಳೆಯಬೇಕೆಂದಿದೆ, ನಿನ್ನನ್ನು ಚುಂಬಿಸಬೇಕೆಂದಿದೆ, ನೀನು ಇಲ್ಲದೆ ನಾನು ಬದುಕಲ್ಲ ಎಂಬ ಪ್ರತಿ ಮಾತನ್ನೂ ಅನಿಕ್ ಆ ಪಾಮ್ ಪ್ಲೇಟ್‌ನಲಿ ಹಾಕಿಸಿದ್ದ. ತನ್ನ ಜತೆಗೆ ಪ್ರತಿ ನಿತ್ಯ ಮಾಡಿದ ಚಾಟ್ ಎಲ್ಲವನ್ನೂ ಅದರಲ್ಲಿ ಹಾಕಿ ಎಲ್ಲರಿಗೂ ಹಂಚಿದ.ಈ ರೀತಿ ತನಗೆ ಕೈಕೊಟ್ಟ ಹುಡುಗಿ ಬಗ್ಗೆ ರಿವೇಂಜ್ ತೆಗೆದುಕೊಂಡ ಅನಿಕ್. ಈ ಕಥೆ ಓದಿದ ಎಲ್ಲರಿಗೂ ಅನಿಕ್ ಹಾಗೇಕೆ ಮಾಡಿದ ಎಂದು ಅನ್ನಿಸಬಹುದು. ಚೆನ್ನಾಗಿಯೇ ಮಾಡಿದ್ದಾನೆ ಬಿಡು ಎಂದು ಕೆಲವರು ಹೇಳಬಹುದು. ಅದೇನೇ ಇದ್ದರೂ ಕೈಕೊಟ್ಟ ಹುಡುಗಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾನೆ ಅಲ್ಲವೇ?

No comments