Header Ads

test

ಬಸ್ಸಿನಲ್ಲಿ ನನಗೆ ಎದುರಾದ ಘಟನೆ ಎಂದು ಓರ್ವ ಯುವತಿ ಕಳುಹಿಸಿದ ಮೆಸೇಜ್ ಇದು..! ನೋಡಿದರೆ ಕಣ್ಣೀರುಬರುತ್ತದೆ..!

"ಆಗ ನನಗೆ 20 ವರ್ಷಗಳು. ಐಐಟಿಯಲ್ಲಿ ಓದುತ್ತಿದ್ದೆ. ಕಾಲೇಜಿನ ರಜೆಗಳು ಮುಗಿದ ಕಾರಣ ಮನೆಯಿಂದ ಕಾಲೇಜಿಗೆ ಹೊರಟೆ. ಕಾಲೇಜಿನಿಂದ ನಮ್ಮ ಮನೆ ತುಂಬಾ ದೂರ. ಅದಕ್ಕಾಗಿ ಸುಮಾರು 14 ಗಂಟೆ ಬೇಕು. ಹಾಗಾಗಿ ಸಂಜೆ 6 ಗಂಟೆಗೆ ಬಸ್ ಬುಕ್ ಮಾಡಿಕೊಂಡೆ. ಒಬ್ಬಳೇ ಪ್ರಯಾಣಕ್ಕೆ ಸಿದ್ಧಳಾದೆ. ಅದು ಒಂದು ಎಸಿ ಸೆಮಿ ಸ್ಲೀಪರ್ ಬಸ್. ಸೀಟುಗಳು ಸ್ವಲ್ಪ ಹಿಂದಕ್ಕೆ ಇವೆ. ನಮಗೆ ಬೇಕಾದಂತೆ ಅವನ್ನು ಅಡ್ಜೆಸ್ಟ್ ಮಾಡಿಕೊಳ್ಳಬಹುದು. ಅಂತಹ ಸೀಟುಗಳುಳ್ಳ ಬಸ್ ಅದು. ಅದರಲ್ಲಿ ಟಿಕೆಟ್ಸ್ ಬುಕ್ ಮಾಡಿಕೊಂಡೆ. ಟೈಮಿಗೆ ತಲುಪಿ ಬಸ್ ಹತ್ತಿದೆ..ಬಸ್ ಎಲ್ಲಾ ತುಂಬಿತ್ತು. ನನ್ನ ಸೀಟಿನ ಹಿಂದೆ ಸ್ವಲ್ಪ ಸೀಟುಗಳ ಹಿಂದೆ ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಸೀನಿಯರ್ ಸ್ಟುಡೆಂಟ್ ಹತ್ತಿದ. ಅವರಿಗೆ ವಿಶ್ ಮಾಡಿದೆ. ವೆಲ್ ಕಮ್ ಹೇಳಿದ. ನಾನು ನನ್ನ ಸೀಟಿನಲ್ಲಿ ಕುಳಿತೆ. ನನ್ನ ಪಕ್ಕದಲ್ಲಿ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಕುಳಿತಿದ್ದಳು. ನನ್ನ ಹಿಂದಿನ ಸೀಟಿನಲ್ಲಿ 25-28ರ ಯುವಕನೊಬ್ಬ ಇದ್ದ. ಆತನ ಪಕ್ಕ ಇನ್ನೊಬ್ಬ ವ್ಯಕ್ತಿ ಇದ್ದ. ನಮ್ಮ ಅಂಕಲ್ ವಯಸ್ಸಾಗಿತ್ತು ಆತನಿಗೆ. ಆ ರೀತಿ ಕಾಲೇಜಿಗೆ ಬಸ್‌ನಲ್ಲಿ ನನ್ನ ಪ್ರಯಾಣ ಸಾಗಿತು. ನಡುರಾತ್ರಿ 1 ಗಂಟೆ ಆಗಿತ್ತು ಎಂದುಕೊಳ್ಳುತ್ತೇನೆ. ಆಗಲೇ ನನಗೆ ಯಾಕೋ ಎಚ್ಚರ ಆಯಿತು. ಒಮ್ಮೆಲೆ ಉಸಿರಾಡಲು ಕಷ್ಟವಾಯಿತು. ಯಾಕೆ ಎಂದು ಎದ್ದು ನೋಡಿದೆ. ಆಗ ನಡೆದ ಘಟನೆ ನೋಡಿ ದಿಗ್ಬ್ರಾಂತಳಾದೆ.


ನನ್ನ ಹಿಂದಿನ ಸೀಟಿನಲ್ಲಿ ಇದ್ದ ಆ ಯುವಕನ ಕೈ ನನ್ನ ಎದೆ ಮೇಲೆ ಇತ್ತು. ನನ್ನ ವಕ್ಷೋಜಗಳನ್ನು ಜೋರಾಗಿ ಪ್ರೆಸ್ ಮಾಡುತ್ತಿದ್ದ. ಹಾಗಾಗಿಯೇ ನನಗೆ ಎಚ್ಚರವಾಗಿತ್ತು. ಕೂಡಲೆ ಕಿರುಚಿದೆ... ಏನೋ...ಏನು ಮಾಡುತ್ತಿದ್ದೀಯಾ ನೀನು? ನೀನು ಎಂತಹ ನೀಚ ಕೆಲಸ ಮಾಡುತ್ತಿದ್ದೀಯಾ ಎಂದು ನಿನಗೆ ಅರ್ಥವಾಗುತ್ತಿದೆಯಾ? ಎಂದು ದಬಾಯಿಸಿದೆ.. ಅದಕ್ಕೆ ಆತ ಪ್ರತಿಕ್ರಿಯಿಸಲಿಲ್ಲ. ಅಲ್ಲಿಯವರೆಗೆ ನನ್ನ ಸೀಟಿನ ಅಂಟಿಕೊಂಡಿದ್ದ ಅವನು ಹಿಂದಕ್ಕೆ ಹೊರಟು ಹೋದ. ಹಿಂದೆ ತಿರುಗಿ ಮತ್ತೆ ಬೈದೆ. ಆಗ ಆ ಯುವಕನ ಪಕ್ಕದಲ್ಲಿದ್ದ ಆ ಅಂಕಲ್‌ನಂತಹ ವ್ಯಕ್ತಿ ಏನಾಯಿತು ಎಂದು ಕೇಳಿದ. ಆ ಯುವಕ ಏನೂ ಇಲ್ಲ ಅಂಕಲ್..ಈಕೆ.. ಬೇಕೆಂದೆ ಏನೋನೇ ಮಾತನಾಡುತ್ತಿದ್ದಾಳೆ. ಆ ಅಂಕಲ್ ಸರಿಬಿಡಿ ಎಂದು ಮತ್ತೆ ನಿದ್ದೆಗೆ ಜಾರಿದ. ನನಗೇನೂ ಗೊತ್ತೇ ಇಲ್ಲ ಎಂಬಂತೆ ಅವನೂ ನಿದ್ದೆಗೆ ಹೊರಳಿದ.

ಬಸ್‌ನಲ್ಲಿ ನನ್ನ ಕೂಗು ಕೇಳಿದರೂ ಯಾರೂ ನನ್ನನ್ನು ಹಿಡಿಸಿಕೊಳ್ಳಲಿಲ್ಲ. ಎಲ್ಲರೂ ಅವರವರ ಕೆಲಸಗಳಲ್ಲಿ ಬಿಝಿಯಾಗಿದ್ದರು. ಆ ಯುವಕ ಮತ್ತೆ ಹೇಳಿದ. ನಾನು ಏನು ಮಾಡಿದೆ ಹೇಳಿ. ನಾನು ಏನೂ ಮಾಡದಿದ್ದರೆ ಸೈಲಂಟ್ ಆಗಿ ಕುಳಿತುಕೊಳ್ಳಿ ಎಂದ. ನನಗೇನು ಮಾಡಬೇಕೋ ಅರ್ಥವಾಗಲಿಲ್ಲ. ಒಮ್ಮೆಲೆ ಶಾಕ್ ಆದೆ. ನಾನು ಇಂತಹ ಸಮಾಜದಲ್ಲಿ ಇರುವುದಕ್ಕೆ ನನಗೆ ನಾಚಿಕೆ ಆಯ್ತು. ಯುವತಿಯೊಬ್ಬಳಿಗೆ ಈ ರೀತಿಯ ಘಟನೆ ಎದುರಾದರೆ ಯಾರೂ ಏನೂ ಮಾಡದಿರುವ ಬಗ್ಗೆ ಬೇಸರವಾಯಿತು. ಆದರೆ ಅಷ್ಟರಲ್ಲಿ ನಮ್ಮ ಕಾಲೇಜಿನ ಸೀನಿಯರ್ ಸ್ಟುಡೆಂಟ್ ಹತ್ತಿರ ಬಂದು ಹೇಳಿದ. ನೋಡು ಬಾಸ್ ನೀನೇನೋ ತಪ್ಪು ಕೆಲಸ ಮಾಡಿಯೇ ಇರುತ್ತೀಯ. ಆದಕಾರಣ ಮರ್ಯಾದೆಯಿಂದ ಆಕೆಗೆ ಸಾರಿ ಕೇಳು. ಆದರೂ ಆ ಯುವಕ ಪ್ರತಿಕ್ರಿಯಿಸಲಿಲ್ಲ. ಆ ರೀತಿ ನಮ್ಮ ಕಾಲೇಜಿನ ಸ್ಟುಡೆಂಟ್ ಇನ್ನೆರಡು ಸಲ ಕೇಳಿದ. ಆದರೂ ಆತ ಸಾರಿ ಕೇಳಲಿಲ್ಲ. ತಾನೇನು ಮಾಡಿಯೇ ಇಲ್ಲ ಎಂಬಂತೆ ಸೀಟಿನಲ್ಲಿ ಕುಳಿತು ನಿದ್ದೆ ಹೋದ. ಇದು ನನಗೆ ನಡೆದ ಅತ್ಯಂತ ಕಹಿ ಘಟನೆ. ಇಂತಹ ಘಟನೆ ಯಾರಿಗೂ ನಡೆಯಬಾರದು. ಅಂದಿನಿಂದ ನಾನು ಒಂಟಿಯಾಗಿ ಆ ರೀತಿ ಪ್ರಯಾಣಿಸಲಿಲ್ಲ. ಈಗಲೂ ಆ ಘಟನೆ ಬಗ್ಗೆ ಮನೆಯವರಿಗೆ ಯಾರಿಗೂ ಗೊತ್ತಿಲ್ಲ. ಇಂತಹ ಘಟನೆಗಳ ಬಗ್ಗೆ ಸ್ವಲ್ಪ ಎಚ್ಚರದಿಂದ ಇರಬೇಕೆಂದು ಹೇಳುವ ಸಲುವಾಗಿಯೇ ಈ ಪೋಸ್ಟ್ ಬರೆದೆ..!"

— ಯುವತಿಯೊಬ್ಬಳ ಜೀವನದಲ್ಲಿ ನಡೆದ ರಿಯಲ್ ಘಟನೆ ಇದು..! ನೈಜ ಕಥೆ.

No comments