ಮದುವೆ ಎಂದರೆ ಕೆಲವರಿಗೆ ಸ್ವರ್ಗ... ನನಗೆ ಮಾತ್ರ ಒಂದು ವಿಷಾದ... ರಿಯಲ್ ಸ್ಟೋರಿ..!
ಹೌದು ಮದುವೆ ಎಂದರೆ ನನ್ನ ಪಾಲಿಗೆ ವಿಷಾದ. ಕೆಲವರಿಗೆ ಸ್ವರ್ಗವಾಗಬಹುದು. ನನಗೆ ಮಾತ್ರ ಅದು ವಿಷಾದವನ್ನೇ ಉಳಿಸಿತು. ನನಗೆ 26 ವರ್ಷಗಳ ವಯಸ್ಸು ಇದ್ದಾಗ ನನ್ನ ಸ್ವಸ್ಥಳವಾದ ತಮಿಳುನಾಡಿನ ಮಧುರೈ ಮೂಲದ ವ್ಯಕ್ತಿಯೊಂದಿಗೆ ನನ್ನ ಮದುವೆ ನಡೆಯಿತು. ಮದುವೆಯಾದ ಮೂರೇ ದಿನಕ್ಕೆ ನನ್ನ ಗಂಡ ಎಷ್ಟು ಸ್ಯಾಡಿಸ್ಟ್ ಎಂಬುದು ನನಗೆ ಅರ್ಥವಾಯಿತು. ಆತನೊಬ್ಬ ಚೈನ್ ಸ್ಮೋಕರ್. ಕುಡುಕ. ಮದುವೆಯಾದ 8ನೇ ದಿನಕ್ಕೆ ನನಗೆ ಅಸಲಿ ಟಾರ್ಚರ್ ಆರಂಭವಾಯಿತು. ನಿತ್ಯ ಮನೆಗೆ ಕುಡಿದು ಬಂದು ಚಿತ್ರಹಿಂಸೆ ನೀಡುತ್ತಿದ್ದ. ಒಂದು ದಿನ ಆತ ಮನೆ ಬಳಿಯೇ ಇದ್ದ ಮೆಡಿಕಲ್ ಶಾಪ್ ಆತನೊಂದಿಗೆ ಗಲಾಟೆ ಮಾಡಿಕೊಂಡ. ತನಗೆ ಬೇಕಾದ ಟ್ಯಾಬ್ಲೆಟ್ಗಳು, ಟಾನಿಕ್ ಕೊಡಬೇಕೆಂದು ಆತನನ್ನು ಕಾಡುತ್ತಿದ್ದ. ಆದರೆ ವೈದ್ಯರ ಚೀಟಿ ಇಲ್ಲದೆ ಆ ಔಷಧಿ ಕೊಡಲ್ಲ.
ನನ್ನ ತಂದೆತಾಯಿ ಬಂದು ಆತನ ಜತೆಗೆ ಮಾತನಾಡಿದರು. ಆದರೆ ಆತ ಅವರಿಗೆ ಎಳ್ಳಷ್ಟೂ ಗೌರವ ನೀಡಲಿಲ್ಲ. ನಮ್ಮ ತಾಯಿ ಅದೆಲ್ಲಾ ಮರೆದು ಹಾಯಾಗಿ ಸಿನಿಮಾಗೆ ಹೋಗಿ ಬನ್ನಿ ಎಂದು ನಮ್ಮನ್ನು ಥಿಯೇಟರ್ಗೆ ಕಳುಹಿಸಿದರೆ ಆತ ನನ್ನನ್ನು ಚುಂಬಿಸಲು ಹೋಗಿ ಯಾರೋ ಏನೋ ಅಂದರು ಎಂದು ಅಲ್ಲಿಂದ ಓಡಿಹೋದ. ನನ್ನನ್ನು ಥಿಯೇಟರ್ನಲ್ಲೇ ಒಂಟಿಯಾಗಿ ಬಿಟ್ಟುಹೋದ. ನಾನು ಬೇರೆ ಗೆಳತಿ ಸಹಾಯದಿಂದ ಮನೆಗೆ ವಾಪಸ್ ಬಂದೆ. ಆದರೆ ಮನೆಗೆ ಬೀಗ ಹಾಕಿತ್ತು. ನಿಜವಾಗಿ ಇಂತಹ ವ್ಯಕ್ತಿಯನ್ನು ನನ್ನ ಜೀವನದಲ್ಲಿ ಇದುವರೆಗೆ ನೋಡಲಿಲ್ಲ ಎಂದು ಆಗ ಅಂದುಕೊಂಡೆ. ಆತನನ್ನು ಆತನ ತಂದೆತಾಯಿ ಹೇಗೆ ಭರಿಸಿದರೋ ಆಗ ನನಗೆ ಅರ್ಥವಾಗಲಿಲ್ಲ. ಅವರನ್ನು ಕೇಳಿದರೆ ಆತನಿಗೆ ಶಿಜೋಫ್ರೀನಿಯಾ ಎಂದು ಕೋಪ, ಹಿಂಸಾತ್ಮಕವಾಗಿ ವರ್ತಿಸುತ್ತಾನೆಂದರು. ನನಗೆ ಶಾಕ್ ಆಯಿತು.
Post a Comment